ಗ್ಯಾಸ್ ಬೆಲೆ ಮತ್ತೆ ಏರಿಕೆ; ಗೃಹಬಳಕೆ ಸಿಲಿಂಡರ್ ದರ ರೂ. 50 ಏರಿಕೆ!

ದಿನದಿಂದ ದಿನಕ್ಕೆ ಗ್ಯಾಸ್ ಬೆಲೆ ಹೆಚ್ಚಳ ಜನಸಾಮಾನ್ಯರಿಗೆ ಹೊರೆಯಾಗಿ ಪರಿಣಮಿಸಿದೆ. ಸಾಮಾನ್ಯ ಜನರು ಇದರಿಂದ ತತ್ತರಿಸಿ ಹೋಗಿದ್ದಾರೆ. ಮೊನ್ನೆಯಷ್ಟೇ ವಾಣಿಜ್ಯ ಸಿಲಿಂಡರ್ ಬೆಲೆ ರೂ.102 ಆಗಿತ್ತು. ಈಗ ಗೃಹಬಳಕೆಯ ಗ್ಯಾಸ್ ಸಿಲಿಂಡರ್ ನಲ್ಲೂ ಏರಿಕೆ ಮಾಡಲಾಗಿದೆ.

 

ತೈಲ ಉತ್ಪಾದನಾ ಕಂಪನಿಗಳು ಗೃಹ ಬಳಕೆಯ ದ್ರವೀಕೃತ ಪೆಟ್ರೋಲಿಯಂ ಅನಿಲದ ಬೆಲೆಯನ್ನು ಶನಿವಾರ ಮತ್ತೆ ಹೆಚ್ಚಿಸಿವೆ. 14.2 ಕೆಜಿ ಸಿಲಿಂಡರ್ ದರ 50 ರೂ. ಗಿಂತಲೂ ಹೆಚ್ಚಾಗಿದ್ದು, ಪ್ರತಿ ಸಿಲಿಂಡರ್ ದರ 1 ಸಾವಿರ ರೂ. ಗಡಿ ದಾಟಿದೆ.

ಈ ಹಿಂದೆ ಮಾರ್ಚ್ 2022 ರಲ್ಲಿ ರೂ 50 ಹೆಚ್ಚಿಸಲಾಗಿದ್ದು, 956.05 ರೂ. ದರ ಇತ್ತು. ವಾಣಿಜ್ಯ ಸಿಲಿಂಡರ್‌ಗಳ ಬೆಲೆಯನ್ನು ಕಳೆದ ವಾರ 102 ರೂ. ಹೆಚ್ಚಿಸಲಾಗಿತ್ತು. 19 ಕೆ.ಜಿ. ಸಿಲಿಂಡರ್ ದರ 2253 ರೂ.ಗೆ ತಲುಪಿದೆ.

Leave A Reply

Your email address will not be published.