28 ವರ್ಷಗಳ ಬಳಿಕ ಹುಟ್ಟೂರಿಗೆ ತೆರಳಿ ತಾಯಿಯನ್ನು ಭೇಟಿಯಾದ ಯೋಗಿ ಆದಿತ್ಯನಾಥ್

ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರು ಸರಿಸುಮಾರು 28 ವರ್ಷಗಳ ಬಳಿಕ ಹುಟ್ಟೂರಿಗೆ ತೆರಳಿ ತಮ್ಮ ತಾಯಿಯನ್ನು ಭೇಟಿ ಮಾಡಿ ಆಶೀರ್ವಾದ ಪಡೆದಿದ್ದಾರೆ.

 

ಕೊರೊನಾ ಸಾಂಕ್ರಾಮಿಕದ ಕಾರಣದಿಂದ ಯೋಗಿ ಅವರಿಗೆ ಏಪ್ರಿಲ್ 2020 ರಲ್ಲಿ ಹರಿದ್ವಾರದಲ್ಲಿ ಮೃತಪಟ್ಟ ತಮ್ಮ ತಂದೆಯವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಸಾಧ್ಯವಾಗಿರಲಿಲ್ಲ.

‘ನನ್ನ ತಂದೆಯ ಕೊನೆಯ ಕ್ಷಣಗಳಲ್ಲಿ ಹೆಚ್ಚು ಹೊತ್ತು ಇರಲು ಆಗಲಿಲ್ಲ. ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಮಾಡಲು ಸಾಧ್ಯವಾಗಿದ್ದು ಕೆಲವೇ ಕ್ಷಣಗಳು ಮಾತ್ರ. ಕೊವಿಡ್-19 ಪಿಡುಗಿನಿಂದ ಉತ್ತರ ಪ್ರದೇಶದ 23 ಕೋಟಿ ಜನರನ್ನು ಕಾಪಾಡಬೇಕಾದ ಹೊಣೆಗಾರಿಕೆ ನನ್ನದಾಗಿತ್ತು. ಹೀಗಾಗಿ ನಾನು ಹೆಚ್ಚು ಹೊತ್ತು ತಂದೆಯ ಸಮೀಪ ಇರಲು ಸಾಧ್ಯವಾಗಿರಲಿಲ್ಲ’ ಎಂದು ಯೋಗಿ ಆದಿತ್ಯನಾಥ ಹೇಳಿದ್ದರು.

ಅವರು ಉತ್ತರಪ್ರದೇಶ ಮುಖ್ಯಮಂತ್ರಿಯಾದ ನಂತರ ಮೊದಲ ಬಾರಿಗೆ ತಮ್ಮ ತಾಯಿಯನ್ನು ಭೇಟಿಯಾಗುತ್ತಿದ್ದಾರೆ.
28 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಉತ್ತರಾಖಂಡ್‌ಗೆ ತಮ್ಮ ಕುಟುಂಬದ ಸಮಾರಂಭದಲ್ಲಿ ಭಾಗಿಯಾಗಲು ತೆರಳಿದ್ದಾರೆ ಎಂದು ತಿಳಿದುಬಂದಿದೆ.

ತಾಯಿಗೆ ಪಾದಗಳಿಗೆರಗಿ ಆಶೀರ್ವಾದ ಪಡೆಯುತ್ತಿರುವ ಫೋಟೋವನ್ನು ಟ್ವಿಟರ್‌ ನಲ್ಲಿ ಯೋಗಿ ಅವರು ಹಂಚಿಕೊಂಡಿದ್ದಾರೆ. ಅದಕ್ಕೆ ʼಮಾʼ ಎಂಬ ಶೀರ್ಷಿಕೆ ನೀಡಿದ್ದಾರೆ. ತಾಯಿ ಮಗನ ತಲೆಯ ಮೇಲೆ ಮಮತೆಯಿಂದ ಕೈಯಿಟ್ಟು ಆಶೀರ್ವಾದ ಮಾಡುತ್ತಿರುವುದು ಚಿತ್ರದಲ್ಲಿದೆ.

Leave A Reply

Your email address will not be published.