ಹಾಲಿಗಿಂತ ಬಿಯರ್ ಸೇವನೆ ಆರೋಗ್ಯಕ್ಕೆ ಉತ್ತಮ : ಪೇಟಾದಿಂದ ಮಹತ್ವದ ಮಾಹಿತಿ!
ಮದ್ಯಪಾನ ಆರೋಗ್ಯಕ್ಕೆ ಒಳ್ಳೆಯದಲ್ಲ. ಆದರೂ ಪೇಟಾ ಸಂಸ್ಥೆಯು ಬಿಯರ್ ಸೇವನೆ ಆರೋಗ್ಯಕ್ಕೆ ಉತ್ತಮ ಎಂದು ಹೇಳಿದೆ. ಅದು ಕೂಡಾ ಹಾಲಿಗಿಂತ ಬೆಸ್ಟ್ ಎಂಬ ಮಾತನ್ನು ಸಾಕ್ಷಿ ಸಮೇತ ಹೇಳಿದೆ. ಇದನ್ನು ಓದಿದ ಮದ್ಯ ಪ್ರಿಯರ ಮನಸ್ಸಿನಲ್ಲಿ ಖುಷಿ ಎದ್ದು ಕಾಣುವುದರಲ್ಲಿ ಎರಡು ಮಾತಿಲ್ಲ. ಹಾಲು ಮತ್ತು ಬಿಯರ್ ಇವೆರಡರಲ್ಲಿ ಬಿಯರ್ ಯಾಕೆ ಉತ್ತಮ ಎಂದು ಈ ಕೆಳಗೆ ನೀಡಲಾಗಿದೆ.
PETA (ಎಂದು ಪೀಪಲ್ ಫಾರ್ ಎಥಿಕಲ್ ಟ್ರೀಟ್ಮೆಂಟ್ ಆಫ್ ಅನಿಮಲ್) ಹೇಳುವ ಪ್ರಕಾರ, ಡೈರಿ ಉತ್ಪನ್ನಗಳಿಂದಾಗಿ ಬೊಜ್ಜು, ಹೃದಯ ಸಂಬಂಧಿ ಸಮಸ್ಯೆಗಳು, ಕ್ಯಾನ್ಸರ್ ಮೊದಲಾದ ಕಾಯಿಲೆಗಳು ಬರುತ್ತವೆ. ಆದರೆ ಸರಿ ಪ್ರಮಾಣದ ಬಿಯರ್ ಸೇವನೆಯಿಂದ ದೇಹದ ಮೂಳೆಗಳು ಬಲಶಾಲಿಯಾಗುತ್ತವೆ ಮಾತ್ರವಲ್ಲದೆ ಆಯಸ್ಸು ಹೆಚ್ಚಾಗುತ್ತದೆ ಎಂಬ ಮಾತನ್ನು ಹೇಳಿದೆ.
ಹಾರ್ವಡ್ ನ ಪಬ್ಲಿಕ್ ಹೆಲ್ತ್ ರಿಪೋರ್ಟ್ ಒಂದನ್ನು ಸಾಕ್ಷಿಯಾಗಿರಿಸಿಕೊಂಡು, ಹಾಲಿನಲ್ಲಿರುವ ಕೊಬ್ಬಿನ ಅಂಶಗಳು ದೇಹಕ್ಕೆ ಹಾನಿಕಾರಕ ಎಂದು ಸ್ಪಷ್ಟಪಡಿಸಿದೆ.
ಬಿಯರ್‌ನ ನಿಯಮಿತ ಸೇವನೆಯಿಂದ ನಿದ್ರಾ ಹೀನತೆ ಕಡಿಮೆಯಾಗುತ್ತದೆ. ಮಧುಮೇಹ, ಕಿಡ್ನಿ ಸ್ಟೋನ್, ಕ್ಯಾನ್ಸರ್, ಹೃದಯ ಸಂಬಂಧಿ ಕಾಯಿಲೆಗಳ ತೀವ್ರತೆಯನ್ನು ಕಡಿಮೆ ಮಾಡಬಲ್ಲದು. ಅಲ್ಲದೇ ಹಲ್ಲುಗಳ ಆರೋಗ್ಯಕ್ಕೂ ಉತ್ತಮ ಎಂದು PETA ಪ್ರತಿಪಾದಿಸಿದೆ. ಆದರೆ ಮಿತಿಮೀರಿದ ಸೇವನೆಯು ಒಳ್ಳೆಯದಲ್ಲ ಎಂದು PETA ಒಪ್ಪಿಕೊಂಡಿದೆ.