ಹಣ್ಣು ಕೀಳಲೆಂದು ಮರಕ್ಕೆ ಹತ್ತಿ, ಕಾಲು ಜಾರಿ ಹೊಂಡಕ್ಕೆ ಬಿದ್ದ ಅಕ್ಕ-ತಂಗಿ ದುರ್ಮರಣ !!!

Share the Article

ಮಕ್ಕಳಿಗೆ ರಜೆ ಸಿಕ್ಕರೆ ಸಾಕು, ಮನೆಯಿಂದ ಹೊರಹೋಗಿ ಆಟ ಆಡುವುದು, ಸ್ನೇಹಿತರ ಜೊತೆ ಸಮಯ ಕಳೆಯುವುದು ಇತ್ಯಾದಿ ಕೆಲಸಗಳನ್ನು ಮಾಡುತ್ತಲೇ ಇರುತ್ತಾರೆ. ಸಣ್ಣಮಕ್ಕಳನ್ನು ಕಂಟ್ರೋಲ್ ಮಾಡುವುದು ಕಷ್ಟ. ಹಾಗಂತ ಅವರನ್ನು ಮನೆಯಲ್ಲಿ ಕೂಡಿ ಹಾಕುವುದು ಕೂಡಾ ಕಷ್ಟ.

ಶಾಲೆಗೆ ರಜೆ ಸಿಕ್ಕಿದ್ದು, ಒಂದು ಕಡೆಯಾದರೆ, ಇಲ್ಲಿ ಇಬ್ಬರು ಅಕ್ಕ ತಂಗಿಯರು ಸೀಬೆಹಣ್ಣು ತಿನ್ನುವ ಆಸೆಯಲ್ಲಿ ಮರಕ್ಕೆ ಹತ್ತಿ ಇಬ್ಬರೂ ಕಾಲುಜಾರಿ ಕೃಷಿ ಹೊಂಡಕ್ಕೆ ಬಿದ್ದು ಸಾವನ್ನಪ್ಪಿದ್ದಾರೆ. ಈ ಘಟನೆ ಗುಂಡ್ಲುಪೇಟೆ ತಾಲೂಕಿನ ಕೆಬ್ಬೇಪುರ ಗ್ರಾಮದಲ್ಲಿ ಘಟನೆ ಮಂಗಳವಾರ ಸಂಭವಿಸಿದೆ.

ಕೆಬ್ಬೇಪುರ ಗ್ರಾಮದ ರೇಚಣ್ಣ ಎಂಬುವರ ಮಕ್ಕಳಾದ ಪೂಜಾ(8) ಮತ್ತು ಪುಣ್ಯ(9) ಮೃತ ದುರ್ದೈವಿಗಳು. ಅವರದೇ ಜಮೀನಿನಲ್ಲಿ ಕೃಷಿಹೊಂಡಕ್ಕೆ ಮಕ್ಕಳು ಬಲಿಯಾಗಿದ್ದು, ಹೆತ್ತವರ ಆಕ್ರಂದನ ಮುಗಿಲು ಮುಟ್ಟಿದ್ದು ಗ್ರಾಮದಲ್ಲಿ ನೀರವ ಮೌನ ಆವರಿಸಿದೆ.

Leave A Reply