ಚಾರ್ ಧಾಮ್ ಯಾತ್ರಿಕರಿಗೆ ಸಿಹಿ ಸುದ್ದಿ

ಅನೇಕರ ಕನಸು ಜೀವನದಲ್ಲಿ ಒಮ್ಮೆ ಚಾರ್​ ದಾಮ್  ಯಾತ್ರೆ ಮಾಡುವುದಾಗಿರುತ್ತದೆ. ಮೋಕ್ಷ ಸಾಧನೆಗಾಗಿ ಈ ಯಾತ್ರೆ ಕೈಗೊಳ್ಳುವುದು ಅವಶ್ಯ ಎಂದು ಅನೇಕರು ನಂಬಿದ್ದಾರೆ. 

 

ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಳವಾಗುತ್ತಿರುವ ಹಿನ್ನಲೆಯಲ್ಲಿ ಯಾತ್ರೆಗೆ ಭಕ್ತರ ದೈನಿಕ ಮಿತಿಯನ್ನು ನಿಗದಿಪಡಿಸಲಾಗಿದ್ದು, ಪ್ರಸಿದ್ಧ ಚಾರ್ ಧಾಮ್ ಯಾತ್ರೆ ಇಂದಿನಿಂದ ಆರಂಭವಾಗಲಿದೆ.

ಉತ್ತರಕಾಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಸೋಮವಾರದಂದು ಯಾತ್ರಿಗಳಿಗೆ ಉಚಿತ ಆರೋಗ್ಯ ಸೇವೆಗೆ ಚಾಲನೆ ನೀಡಿದ್ದು, ಇಂದಿನಿಂದ ಚಾರ್ ಧಾಮ್ ಯಾತ್ರೆ ಅಧಿಕೃತವಾಗಿ ಆರಂಭವಾಗಿದೆ.

ಬದರಿನಾಥ 15000, ಕೇದಾರನಾಥ 12000, ಗಂಗೋತ್ರಿ 7000, ಯಮುನೋತ್ರಿಗೆ 4000 ಯಾತ್ರಿಗಳು ಪ್ರತಿದಿನ ಭೇಟಿ ನೀಡಬಹುದಾಗಿದ್ದು 45 ದಿನಗಳವರೆಗೆ ಈ ವ್ಯವಸ್ಥೆ ಇರಲಿದೆ

ಚಾರ್ ಧಾಮ್ ಯಾತ್ರೆಯ ಸಮಯದಲ್ಲಿ ಗಂಗೋತ್ರಿ, ಯಮುನೋತ್ರಿ, ಕೇದಾರನಾಥ ಮತ್ತು ಬದರಿನಾಥ ದೇವರ ದರ್ಶನಕ್ಕೆ ಉತ್ತರಾಖಂಡ ಸರ್ಕಾರ ವ್ಯವಸ್ಥೆ ಮಾಡಲಿದೆ.‌ ಉತ್ತರಾಖಂಡದ ಚಾರ್‌ಧಾಮ್ ಯಾತ್ರೆಗಾಗಿ ಪ್ರವಾಸೋದ್ಯಮ ಇಲಾಖೆ ನಿರ್ವಹಿಸುವ ಪೋರ್ಟಲ್‌ನಲ್ಲಿ ಎಲ್ಲಾ ಪ್ರಯಾಣಿಕರು ಮತ್ತು ಭಕ್ತರು ನೋಂದಾಯಿಸಿಕೊಳ್ಳುವುದು ಕಡ್ಡಾಯವಾಗಿದೆ.

Leave A Reply

Your email address will not be published.