ಬರೋಬ್ಬರಿ 7 ವರ್ಷಗಳ ಬಳಿಕ ಮತ್ತೆ ಒಂದಾಗಲಿದ್ದಾರೆ ಬಾಲಿವುಡ್ ನ ಬೆಸ್ಟ್ ಆನ್ ಸ್ಕ್ರೀನ್ ಜೋಡಿ !! | ಶಾರುಖ್ ಖಾನ್-ಕಾಜೋಲ್ ಕಪಲ್ ಗೆ ಆಕ್ಷನ್-ಕಟ್ ಹೇಳಲಿದ್ದಾರಂತೆ ಕರಣ್ ಜೋಹರ್

ಇವರು ಬಾಲಿವುಡ್‌ನ ಬೆಸ್ಟ್ ಆನ್ ಸ್ಕ್ರೀನ್‌ ಕಪಲ್. ಈ ಜೋಡಿ ತೆರೆಮೇಲೆ ಕಾಣಿಸಿಕೊಂಡರೆ ಸಾಕು ಅಭಿಮಾನಿಗಳು ಹುಚ್ಚೆದ್ದು ಕುಣಿಯುತ್ತಾರೆ. ಆ ರೀತಿ ತನ್ನ ಅಭಿಮಾನಿಗಳನ್ನು ಮೋಡಿ ಮಾಡಿದೆ ಈ ಜೋಡಿ. ಅಂದಹಾಗೆ ಈ ಜೋಡಿ ಯಾವುದು ಗೊತ್ತಾ ?? ಬೇರಾರು ಅಲ್ಲ, ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಮತ್ತು ಕಾಜೋಲ್ ಜೋಡಿ. ಸಾಕಷ್ಟು ಚಿತ್ರಗಳ ಮೂಲಕ ಜನಮನ್ನಣೆ ಗಳಿಸಿರುವ ಈ ಜೋಡಿ ಬರೋಬ್ಬರಿ ಏಳು ವರ್ಷಗಳ ಬಳಿಕ ಮತ್ತೆ ತೆರೆಯ ಮೇಲೆ ಒಂದಾಗಲು ಸಜ್ಜಾಗಿದ್ದಾರೆ.

ಈ ಜೋಡಿ ಅನೇಕ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದು, ಇಬ್ಬರ ಕೆಮಿಸ್ಟ್ರಿ ಅಭಿಮಾನಿಗಳ ಹೃದಯ ಗೆದ್ದಿತ್ತು. ‘ಕುಚ್ ಕುಚ್ ಹೋತಾ ಹೈ’, ‘ದಿಲ್ವಾಲೆ ದುಲ್ಹನಿಯಾ ಲೇಜಾಯೆಂಗೆ’,’ಕಭಿ ಖುಷಿ ಕಭಿ ಗಮ್’, ‘ದಿಲ್‌ವಾಲೆ’, ‘ಬಾಜಿಗಾರ್’ ಚಿತ್ರಗಳ ಮೂಲಕ ಅಭಿಮಾನಿಗಳಲ್ಲಿ ಕ್ರೇಜ್ ಹುಟ್ಟು ಹಾಕಿರೋ ಶಾರುಖ್ ಖಾನ್ ಮತ್ತು ಕಾಜಲ್ ಜೋಡಿ ಮತ್ತೆ ಬೆಳ್ಳಿ ಪರದೆಯಲ್ಲಿ ರೊಮ್ಯಾನ್ಸ್ ಮಾಡಲು ರೆಡಿಯಾಗಿದ್ದಾರೆ.


Ad Widget

Ad Widget

Ad Widget

ನಿರ್ಮಾಪಕ ಕರಣ್ ಜೋಹರ್ `ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ನಟಿ ಆಲಿಯಾ ಭಟ್ ಮತ್ತು ರಣ್‌ವೀರ್ ಸಿಂಗ್ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ಇವರ ಪ್ರೇಮ ಕಹಾನಿಯನ್ನೇ ಭಿನ್ನವಾಗಿ ತೋರಿಸಲು ಹೊರಟಿದ್ದಾರೆ ಕರಣ್ ಜೋಹರ್. ಇದೀಗ ಚಿತ್ರದ ಮತ್ತೊಂದು ವಿಶೇಷ ಅಂದ್ರೆ ಬಿಟೌನ್ ಜೋಡಿ ಹಕ್ಕಿಗಳಾಗಿ ಫೇಮ್ ಗಿಟ್ಟಿಸಿಕೊಂಡಿದ್ದ ಶಾರುಖ್ ಮತ್ತು ಕಾಜೋಲ್ ಈ ಚಿತ್ರದಲ್ಲಿ ಸ್ಪೆಷಲ್ ಪಾತ್ರಕ್ಕೆ ಜೀವ ತುಂಬಲಿದ್ದಾರೆ.

‘ಗಲ್ಲಿ ಭಾಯ್’ ಚಿತ್ರದಲ್ಲಿ ಕಮಾಲ್ ಮಾಡಿದ್ದ ಜೋಡಿ ಆಲಿಯಾ ಮತ್ತು ರಣ್‌ವೀರ್ ಸಿಂಗ್ ಜೋಡಿ ಮತ್ತೆ `ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ಗಾಗಿ ಒಂದಾಗಿದ್ದಾರೆ. ಈ ಜೋಡಿಗೆ ಬಾಲಿವುಡ್ ರೊಮ್ಯಾಂಟಿಕ್ ಜೋಡಿ ಶಾರುಖ್ ಮತ್ತು ಕಾಜೋಲ್ ಸಾಥ್ ಕೊಡಲಿದ್ದಾರೆ. ಈ ಗುಡ್ ನ್ಯೂಸ್ ನಂತರ ಚಿತ್ರದ ಮೇಲಿನ ನಿರೀಕ್ಷೆ ಡಬಲ್ ಆಗಿದೆ. ಆರು ವರ್ಷದ ಬಳಿಕ ಮತ್ತೆ ಕರಣ್ ಜೋಹರ್ ನಿರ್ದೇಶನಕ್ಕೆ ಇಳಿದಿದ್ದು, ಶಾರುಖ್ ಮತ್ತು ಕಾಜೋಲ್ ಅವರನ್ನು ಜೊತೆಯಾಗಿ ಕರೆತರುವ ಮೂಲಕ ಸಿನಿಮಾ ಮೇಲಿನ ಕುತೂಹಲವನ್ನು ಹೆಚ್ಚಿಸಿದ್ದಾರೆ.

Leave a Reply

error: Content is protected !!
Scroll to Top
%d bloggers like this: