ಇನ್ಮುಂದೆ ಫಾಸ್ಟ್ ಟ್ಯಾಗ್ ರದ್ದು ! ಟೋಲ್ ಸಂಗ್ರಹಕ್ಕೆ ಕೇಂದ್ರ ಸರಕಾರದಿಂದ ಹೊಸ ಪ್ಲ್ಯಾನ್ !
ಹೆದ್ದಾರಿಯಲ್ಲಿ ಟೋಲ್ ಸಂಗ್ರಹ ಕೇಂದ್ರ ಅಲ್ಲಲ್ಲಿ ಇದ್ದು, ಟೋಲ್ ಸಂಗ್ರಹದ ಬಗ್ಗೆ ಪರ ವಿರೋಧ ಚರ್ಚೆ ನಡೆಯುತ್ತಲೇ ಇದೆ. ಟೋಲ್ ಸಂಗ್ರಹಕ್ಕೆ ಫಾಸ್ಟ್ ಟ್ಯಾಗ್ ವ್ಯವಸ್ಥೆ ಈಗಾಗಲೇ ಇದೆ. ಆದರೆ, ಕೇಂದ್ರ ಸರ್ಕಾರ ಈ ಒಂದು ವ್ಯವಸ್ಥೆಯನ್ನು ರದ್ದುಗೊಳಿಸಲು ಮುಂದಾಗಿದೆ. ಅದರ ಬದಲು ಬೇರೆ ವ್ಯವಸ್ಥೆ ಮಾಡಲು ಸಿದ್ಧತೆ ನಡೆಸಿದೆ.
ಇದರ ಬದಲಾಗಿ ಕೇಂದ್ರ ಸರ್ಕಾರ ಸ್ಯಾಟಲೈಟ್ ನ್ಯಾವಿಗೇಷನ್ ಸಿಸ್ಟಂ ಬಳಸಿ ಟೋಲ್ ಸಂಗ್ರಹಿಸಲು ಮುಂದಾಗಿದೆ. ಹಾಗೂ ಭಾರತದಲ್ಲಿ ಪ್ರಾಯೋಗಿಕವಾಗಿಯೇ ಇದರ ಪರೀಕ್ಷೆಯನ್ನೂ ಮಾಡಲಾಗುತ್ತಿದೆ. ವಿಶೇಷವೇನೆಂದ್ರೆ ಈ ವ್ಯವಸ್ಥೆಯಲ್ಲಿ ಎಷ್ಟು ಕಿಲೋಮೀಟರ್ ವಾಹನಗಳು ಓಡಿರುತ್ತವೆಯೋ ಅಷ್ಟಕ್ಕೇ ಮಾತ್ರ ಟೋಲ್ ಪಾವತಿಸಬೇಕಾಗುತ್ತಿದ್ದು ಹೆದ್ದಾರಿಯಲ್ಲಿ ವಾಹನ ಹೆಚ್ಚು ಓಡಿದ್ದರೇ ಹೆಚ್ಚು ಟೋಲ್ ಕಟ್ಟಬೇಕಾಗುತ್ತದೆ ಎಂಬ ನಿಯಮ ಜಾರಿಗೆ ಬರಲಿದೆಯಂತೆ.