ರೈಲ್ವೇ ನಿಲ್ದಾಣದಲ್ಲಿ ಮಲಗಿದ್ದ ತುಂಬು ಗರ್ಭಿಣಿಯನ್ನು ಹೊತ್ತೊಯ್ದು ಸಾಮೂಹಿಕ ಅತ್ಯಾಚಾರ ಮಾಡಿದ ಕುಡುಕರ ತಂಡ |

ತನ್ನ ಮಕ್ಕಳು ಹಾಗೂ ಗಂಡನೊಂದಿಗೆ ಕೆಲಸ ಹುಡುಕಿಕೊಂಡು ಇನ್ನೊಂದು ಊರಿಗೆ ಹೊರಟ ತುಂಬು ಗರ್ಭಿಣಿ ರೈಲ್ವೇ ನಿಲ್ದಾಣಕ್ಕೆ ಬಂದಿದ್ದಳು. ಆದರೆ ರೈಲು ಬರಲು ತುಂಬಾ ಸಮಯ ಇದ್ದಿದ್ದರಿಂದ ಆಕೆ ತನ್ನ ಕುಟುಂಬದೊಂದಿಗೆನೇ ಅದೇ ರೈಲ್ವೇ ನಿಲ್ದಾಣದಲ್ಲಿ ಮಲಗಿದ್ದಳು.

 

ಆದರೆ ರಾತ್ರಿ ಕುಡುಕರ ಗುಂಪೊಂದು ಬಂದು, ಆಕೆಯ ಗಂಡನಿಗೆ ಥಳಿಸಿ ಗರ್ಭಿಣಿಯನ್ನು ಹೊತ್ತೊಯ್ದು, ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆ. ಗರ್ಭಿಣಿ ಅಸಹಾಯಕ ಪರಿಸ್ಥಿಯಲ್ಲಿ ಆಕೆಯನ್ನು ಅಲ್ಲೇ ಬಿಟ್ಟು ಈ ಕಾಮುಕರ ಗುಂಪು ಬಿಟ್ಟು ಓಡಿ ಹೋಗಿದ್ದಾರೆ.

ಈ ಘಟನೆ ಆಂಧ್ರಪ್ರದೇಶದ ಬಾಪತ್ರದಲ್ಲಿ ನಡೆದಿದೆ.

ಸಂತ್ರಸ್ತೆಯ ಕುಟುಂಬವು ಗುಂಟೂರಿನಿಂದ ಕೃಷ್ಣ ಜಿಲ್ಲೆಗೆ ಕೆಲಸ ಹುಡುಕಿಕೊಂಡು ಹೊರಟಿತ್ತು. ಶನಿವಾರ ರಾತ್ರಿ ರೈಲ್ವೆ ನಿಲ್ದಾಣದಲ್ಲಿ ಪತಿ ಮತ್ತು ಮಕ್ಕಳೊಂದಿಗೆ ಮಲಗಿದ್ದ ಸಂದರ್ಭದಲ್ಲಿ ಕುಡಿದ ಅಮಲಿನಲ್ಲಿದ್ದ ಮೂವರು ಮಹಿಳೆ ಮೇಲೆ ಕೈ ಹಾಕಿದ್ದಾರೆ.

ಈ ವೇಳೆ ಪತಿ ಪ್ರಶ್ನಿಸಿದಾಗ ಆತನಿಗೆ ಥಳಿಸಿ ಪತ್ನಿಯನ್ನು ರೈಲ್ವೆ ನಿಲ್ದಾಣದಿಂದ ಹೊತ್ತೊಯ್ದಿದ್ದಾರೆ. ಹಲ್ಲೆಗೊಳಗಾದ ಪತಿ ರೈಲ್ವೆ ಪೊಲೀಸರಿಗೆ ವಿಷಯ ತಿಳಿಸಿದ್ದಾನೆ. ನಂತರ ಹುಡುಕಾಟ ನಡೆಸಿದಾಗ ಅತ್ಯಾಚಾರಕ್ಕೊಳಗಾದ ಪತ್ನಿ ಅಸಹಾಯಕ ಸ್ಥಿತಿಯಲ್ಲಿ ಬಿದ್ದಿದ್ದಳು.

ಕೂಡಲೇ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಯಿತು. ನಂತರ ಆಕೆ ನೀಡಿದ ಹೇಳಿಕೆ ಆಧಾರದ ಮೇಲೆ ಮೂವರನ್ನು ಬಂಧಿಸಲಾಗಿದೆ. ಇವರಲ್ಲಿ ಒಬ್ಬ ಅಪ್ರಾಪ್ತ ವಯಸ್ಸಿನವನು ಎಂದು ಗೊತ್ತಾಗಿದೆ.

Leave A Reply

Your email address will not be published.