ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ‘ಗ್ರಾಮ ಒನ್ ಕೇಂದ್ರ’ ತೆರೆಯಲು ಅರ್ಹರಿಂದ ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಆಹ್ವಾನ!
ಸಾರ್ವಜನಿಕ ಕುಂದುಕೊರತೆ ಅರ್ಜಿಗಳನ್ನು ಸ್ವೀಕರಿಸುವುದರ ಜೊತೆಗೆ ಸರ್ಕಾರದ ಸೇವೆಗಳನ್ನು ಮನೆ ಬಾಗಿಲಿಗೆ ತಲುಪಿಸುವ ಉದ್ದೇಶದಿಂದ ಜಿಲ್ಲೆಯ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ 423 ಗ್ರಾಮ ಒನ್ ಕೇಂದ್ರ ಸ್ಥಾಪಿಸಲಾಗುತ್ತಿದ್ದು, ಕೇಂದ್ರ ತೆರೆಯಲು ಅರ್ಹರಿಂದ ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಆಹ್ವಾನಿಸಿದೆ.
ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ಜನಸಂಖ್ಯೆ ಅನುಗುಣವಾಗಿ ಒಂದು ಅಥವಾ ಎರಡು ಕೇಂದ್ರ ತೆರೆಯಲು ಸರ್ಕಾರ ಅನುಮತಿ ನೀಡಿದ್ದು,ರಾಜ್ಯದ ಕೆಲವು ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಜಾರಿಯಲ್ಲಿದ್ದ ಈ ಯೋಜನೆ ಇದೀಗ ರಾಜ್ಯದೆಲ್ಲಡೆ ಆರಂಭಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್ ತಿಳಿಸಿದ್ದಾರೆ.
ಕೇಂದ್ರವು ವಾರದ 7 ದಿನಗಳು ಬೆಳಿಗ್ಗೆ 8 ರಿಂದ ಸಾಯಂಕಾಲ 8ರ ವರೆಗೆ ಕಾರ್ಯನಿರ್ವಹಿಸಲಿವೆ. ಗ್ರಾಮ ಒನ್ ಮೂಲಕ ಸಕಾಲ, ಮಾಹಿತಿ ಹಕ್ಕು ಅಧಿನಿಯಮ, ಬ್ಯಾಂಕಿಂಗ್ ಹೀಗೆ ಒಟ್ಟು 750 ಸೇವೆಗಳನ್ನು ಗ್ರಾಮೀಣ ಜನರು ಪಡೆಯಬಹುದಾಗಿದೆ.
ಆಸಕ್ತಿಯುಳ್ಳ ಅಭ್ಯರ್ಥಿಗಳು https://karnatakaone.gov.in ಅಥವಾ sevasindhu.karnataka.gov.in ರಲ್ಲಿ ಆನ್‍ಲೈನ್ ಮೂಲಕ ಮೇ 5ರ ವರೆಗೆ ಅರ್ಜಿ ಸಲ್ಲಿಸಬಹುದಾಗಿದೆ.ಕಲಬುರಗಿ-47, ಆಳಂದ-75, ಅಫಜಲಪೂರ-53, ಜೇವರ್ಗಿ-38, ಚಿತ್ತಾಪೂರ-42, ಸೇಡಂ-38, ಚಿಂಚೋಳಿ-45, ಯಡ್ರಾಮಿ-24, ಕಮಲಾಪೂರ-27, ಶಹಾಬಾದ-9 ಹಾಗೂ ಕಾಳಗಿ -25 ಸೇರಿ ಒಟ್ಟು 423 ಕೇಂದ್ರಗಳಿವೆ.
ಹೆಚ್ಚಿನ ವಿವರಗಳಿಗೆ ಸಹಾಯವಾಣಿ ಸಂಖ್ಯೆ 7829274377, 9743669741, 9686579224 ಅಥವಾ ಇಮೇಲ್ onehelpdesk@karnataka.gov.in ಅಥವಾ ಕಲಬುರಗಿ ಜಿಲ್ಲಾಧಿಕಾರಿಗಳ ಕಚೇರಿಯ ಸೇವಾ ಸಿಂಧು ಜಿಲ್ಲಾ ಯೋಜನಾ ವ್ಯವಸ್ಥಾಪಕ ಅರವಿಂದ ಬಾಡಗಿ-9379049999 ಅವರನ್ನು ಸಂಪರ್ಕಿಸಬಹುದಾಗಿದೆ.