ಕ್ರಿಯಾಶೀಲ ನಿರ್ದೇಶಕರ ಈ ಫೋಟೋದಲ್ಲಿರುವ ರಿಯಾಕ್ಷನ್ ಗೆ ಸರಿಯಾದ ಕಾರಣ ಹೇಳಿದವರಿಗೆ ₹1ಲಕ್ಷ ಬಹುಮಾನ!!

Share the Article

ಬೆಂಗಳೂರು:ಸಿನಿಮಾ ಕ್ಷೇತ್ರದಲ್ಲಿರುವ ಎಲ್ಲಾ ಸೆಲೆಬ್ರೇಟಿಗಳು ಸೋಶಿಯಲ್ ಮೀಡಿಯಾಗಳಲ್ಲಿ ಸದಾ ಆಕ್ಟಿವ್ ಇರುತ್ತಾರೆ. ಅಭಿಮಾನಿಗಳಿಗೆ ಖುಷಿ ನೀಡುತ್ತಾ, ಅವರನ್ನು ಫಾಲೋ ಮಾಡೋ ರೀತಿಲಿ ಏನಾದರೂ ಪೋಸ್ಟ್ ಮಡುತ್ತಲೇ ಇರುತ್ತಾರೆ.ಹೀಗೆಯೇ ಸದಾ ಟ್ವಿಟರ್‌ನಲ್ಲಿ ಕ್ರಿಯಾಶೀಲರಾಗಿರುವ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು ಒಂದು ಟ್ವೀಟ್ ಮಾಡಿ ಎಲ್ಲರನ್ನೂ ಅಚ್ಚರಿಗೆ ದೂಡಿದ್ದು ಅಲ್ಲದೆ ತಲೆ ಕೆಡಿಸಿಕೊಳ್ಳುವಂತೆ ಮಾಡಿದೆ.

ಹೌದು.ಇವರು ತಮ್ಮ ವಿಭಿನ್ನ ಹಾವಭಾವದ ಫೋಟೊ ಒಂದನ್ನು ಹಾಕಿ,ಈ ರಿಯಾಕ್ಷನ್ ಗೆ ಕಾರಣ ಏನು ಅಂತಾ ಹೇಳಿ?ಎಂದು ಅಭಿಮಾನಿಗಳಿಗೆ ಪ್ರಶ್ನೆ ಮಾಡಿದ್ದಾರೆ.ಅಲ್ಲದೆ ಸಂಜೆ ಆರು ಗಂಟೆಯ ಒಳಗಾಗಿ ಸರಿಯಾದ ಉತ್ತರ ನೀಡಿದರೆ ನಿಮಗೆ ₹1 ಲಕ್ಷ ಬಹುಮಾನ ನೀಡುತ್ತೇನೆ ಎಂದು ಹೇಳಿದ್ದರು.

ಇದೇ ಟ್ವೀಟ್‌ನ್ನು ಅವರು ಮೂರು ಬಾರಿ ಮಾಡಿದ್ದರು.ಆದರೆ, ರಾಮ್ ಗೋಪಾಲ್ ವರ್ಮಾ ಅವರ ಚಾಲೇಂಜ್‌ಗೆ ಸರಿಯಾದ ಉತ್ತರ ನೀಡಲಾಗದೇ ನೆಟ್ಟಿಗರು, ಸೋತು ಹೋದರು. ಕಡೆಗೆ 6 ಗಂಟೆ ನಂತರ ತಾವೇ ಅದಕ್ಕೆ ಉತ್ತರ ನೀಡಿದ ವರ್ಮಾ ಎಲ್ಲರನ್ನೂ ಹೌಹಾರುವಂತೆ ಮಾಡಿದ್ದಾರೆ. ಒಂದು ಲಕ್ಷ ಬಹುಮಾನ ತಮಗೆ ತಾವೇ ಪಡೆದುಕೊಂಡಿದ್ದಾರೆ.

ತಮ್ಮ ಆ ರಿಯಾಕ್ಷನ್‌ಗೆ ಕಾರಣ ತಮ್ಮ ಡೇಂಜರಸ್ ಸಿನಿಮಾದ ನಟಿಯರಾದ ಅಪ್ಸರಾ ರಾಣಿ ಹಾಗೂ ನೈನಾ ಗಂಗೂಲಿ ನೀಡಿದ ಸಿಹಿ ಮುತ್ತು ಎಂದು ಮತ್ತೊಂದು ಟ್ವೀಟ್‌ನಲ್ಲಿ ವರ್ಮಾ ಹೇಳಿದ್ದಾರೆ.ಸಲಿಂಗಿಗಳ ಬಗ್ಗೆ ಕಥೆ ಹೊಂದಿರುವ ಡೇಂಜರಸ್ ಸಿನಿಮಾ ಇದೇ ಮೇ 6 ರಂದು ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ ಎಂಬ ಮಾಹಿತಿ ನೀಡಿದ್ದಾರೆ.

https://twitter.com/RGVzoomin/status/1520742406689153024?s=20&t=ZNlMkVmK1Jcycu4TreoM7w
Leave A Reply