ಪತಿ ಬಡವನೆಂದು ತನ್ನ ಸೌಂದರ್ಯವನ್ನು ಬಂಡವಾಳ ಮಾಡಿಕೊಂಡು ಪತ್ನಿ ಹಾಕಿದಳು ವ್ಯಾಪಾರಿಯೋರ್ವನಿಗೆ ಗಾಳ ! ನಂತರ ಏನಾಯ್ತು ?

ಪತ್ನಿಯೊಬ್ಬಳು ತನ್ನ ಪತಿ ಬಡವನೆಂದು ತನ್ನ ಸೌಂದರ್ಯವನ್ನು ಬಂಡವಾಳ ಮಾಡಿಕೊಂಡು, ಮಾರ್ಬಲ್ ವ್ಯಾಪಾರಿಯೊಬ್ಬರ ಜೊತೆ ಆಕ್ಷೇಪಾರ್ಹ ವೀಡಿಯೋ ಮಾಡಿ, ನಂತರ ಬ್ಲಾಕ್ ಮೇಲ್ ಮಾಡಿ ಹ ಪೀಕಿಸಿ ಕೊನೆಗೆ ಜೈಲುಪಾಲಾದ ಘಟನೆಯೊಂದು ನಡೆದಿದೆ.

 

ರಾಜಸ್ಥಾನದ ನಾಗೌರ್ ಜಿಲ್ಲೆಯಲ್ಲಿ ಹನಿ ಟ್ರ್ಯಾಪ್‌ನ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ.
ವ್ಯಕ್ತಿಯೊಬ್ಬನ ಆಕ್ಷೇಪಾರ್ಹ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕುವುದಾಗಿ ಬೆದರಿಸಿ ಅವರಿಂದ 31 ಲಕ್ಷ ರೂಪಾಯಿ ಸುಲಿಗೆ ಮಾಡಿದ ಆರೋಪ ಮಹಿಳೆ ಮೇಲಿದೆ.

ರೇಖಾ ಎಂಬ ಮಹಿಳೆ ತನ್ನ ಪತಿ ವಿಕ್ರಮ್ ನೊಂದಿಗೆ ಸಣ್ಣ ಮನೆಯಲ್ಲಿ ವಾಸಮಾಡುತ್ತಿದ್ದಳು. ಮನೆಯ ದಡದಆರ್ಥಿಕ ಸ್ಥಿತಿ ತುಂಬಾ ಕೆಟ್ಟದಾಗಿತ್ತು. ರೇಖಾ ಐಷಾರಾಮಿ ಜೀವನ ನಡೆಸಲು ಬಯಸಿದ್ದಳು. ಇದಾದ ಬಳಿಕ ರೇಖಾ ಸೌಂದರ್ಯವನ್ನು ಅಸ್ತ್ರವನ್ನಾಗಿ ಮಾಡಿಕೊಂಡು ಹಣ ಗಳಿಸುವ ಯೋಜನೆ ರೂಪಿಸಿದ್ದಳು. ಮೂರು ವರ್ಷಗಳ ಹಿಂದೆ ಆಕೆ ಮಾರ್ಬಲ್ ವ್ಯಾಪಾರಿಯನ್ನು ಪರಿಚಯಮಾಡಿಕೊಂಡಿದ್ದಳಂತೆ. ನಿಧಾನವಾಗಿ ವ್ಯಾಪಾರಿಯನ್ನು ಸೌಂದರ್ಯದ ಜಾಲದಲ್ಲಿ ಸಿಲುಕಿಸಿಕೊಂಡ ರೇಖಾ, ರೇಖಾ ಮಾರ್ಬಲ್ ವ್ಯಾಪಾರಿಯೊಂದಿಗೆ ದೈಹಿಕ ಸಂಬಂಧ ಹೊಂದಿದ ವೀಡಿಯೊವನ್ನು ರೇಖಾ ಸ್ನೇಹಿತ ಶೈತಾನ್ ಚಿತ್ರಿಕೊಂಡಿದ್ದಾನೆ. ಶೈತಾನ್ ಸಿಂಗ್ ಮೂಲಕ ಬ್ಲ್ಯಾಕ್ ಮೇಲ್ ಮಾಡಲು ಪ್ರಾರಂಭಿಸಿದ್ದಾರೆ. ಉದ್ಯಮಿ ಮೊದಲು 23 ಲಕ್ಷ ರೂ. ನೀಡಿದ್ದಾನೆ. ಆದರೆ ಮತ್ತೆ ರೇಖಾ ಮತ್ತೆ 50 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದಳು ಎನ್ನಲಾಗಿದೆ.

ಇದರಿಂದ ಮನನೊಂದ ಉದ್ಯಮಿ ಆತ್ಮಹತ್ಯೆಯ ಹಾದಿ ಹಿಡಿದಿದ್ದಾರೆ. ಇದಕ್ಕೂ ಮುನ್ನ ಆತ ತನ್ನ ಸಹೋದರಿಗೆ ಸಂಪೂರ್ಣ ವಿಷಯ ತಿಳಿಸಿದ್ದು, ಬಳಿಕ ಸಹೋದರ ಸಹೋದರಿಯರಿಬ್ಬರೂ ಠಾಣೆಗೆ ಆಗಮಿಸಿ ಮಾಹಿತಿ ನೀಡಿ ಮಹಿಳೆ ಹಾಗೂ ಆಕೆಯ ಸಹಚರರ ವಿರುದ್ಧ ದೂರು ದಾಖಲಿಸಿದ್ದಾರೆ. ಸದ್ಯ ಆರೋಪಿ ರೇಖಾ, ಆಕೆಯ ಸ್ನೇಹಿತೆ ಶೈತಾನ್ ಸಿಂಗ್ ಮತ್ತು ಪತಿ ವಿಕ್ರಮ್ ಸಿಂಗ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ

Leave A Reply

Your email address will not be published.