ಕರಾವಳಿಯಲ್ಲಿ ಗುಡುಗು, ಮಿಂಚು ಸಹಿತ ಭಾರೀ ಮಳೆಯಾಗುವ ಸಾಧ್ಯತೆ !! | ಇಂದು ಎಲ್ಲೋ ಅಲರ್ಟ್ ಘೋಷಣೆ

ಕರಾವಳಿ ಭಾಗದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಇಂದು ಎಲ್ಲೋ ಅಲರ್ಟ್ ಘೋಷಿಸಲಾಗಿದೆ.

 

ಗುಡುಗು, ಮಿಂಚು, ಗಾಳಿ ಸಹಿತ ಕರಾವಳಿ ಭಾಗದಲ್ಲಿ ಮಳೆಯಾಗುವ ಸಾಧ್ಯತೆ ಹೆಚ್ಚಿದೆ. ಮೇ1ರಂದು ಉತ್ತಮ ಮಳೆ ಬಂದರೆ, ಬಳಿಕ ಮೂರ್‍ನಾಲ್ಕು ದಿನ ಸಾಧಾರಣ ಮಳೆ ಬೀಳುವ ಸಂಭವ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಮಂಗಳೂರಿನಲ್ಲಿ ಭಾನುವಾರ ಬೆಳಗ್ಗೆ ಮೋಡ ಕವಿದ ವಾತಾವರಣವಿದ್ದರೆ, ಮಧ್ಯಾಹ್ನ ವೇಳೆಗೆ ಬಿಸಿಲಿತ್ತು. ಜಿಲ್ಲೆಯಲ್ಲಿ ಗರಿಷ್ಠ ಉಷ್ಣಾಂಶ ದಿನೇದಿನೇ ಹೆಚ್ಚುತ್ತಿದ್ದು, ಉರಿ ಬಿಸಿಲಿನಿಂದ ಸೆಕೆಯೂ ಹೆಚ್ಚುತ್ತಾ ಇದೆ.

ಶನಿವಾರ ಇಡೀ ದಿನ ಮೋಡ, ಬಿಸಿಲು, ಸೆಕೆ ಮುಂದುವರಿದಿತ್ತು. ಜಿಲ್ಲೆಯ ಪುತ್ತೂರು, ಸುಳ್ಯದ ಗ್ರಾಮೀಣ ಭಾಗಗಳಲ್ಲಿ ಶನಿವಾರ ರಾತ್ರಿ ಮಳೆ ಬಂದಿದೆ. ಕೊಡಗಿನಲ್ಲಿಯೂ ರಾತ್ರಿ ವೇಳೆಗೆ ಮಳೆ ಬಂದು ಬಿಸಿಲಿನಿಂದ ಕಾವೇರಿದ್ದ ಇಳೆ ತಂಪಾಗಿದೆ.ಮುಂದಿನ ಕೆಲ ದಿನಗಳಲ್ಲಿ ದ.ಕ. ಮಾತ್ರವಲ್ಲದೆ ಉಡುಪಿಯಲ್ಲಿಯೂ ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

Leave A Reply

Your email address will not be published.