ಪರೋಟಾ ತಿಂದದ್ದೇ ಬಾಲಕನ ಜೀವಕ್ಕೆ ಕುತ್ತು ತಂದಿತು | ಮರಣೋತ್ತರ ವರದಿ ನೀಡಿತ್ತು ಶಾಕಿಂಗ್ ಸಂಗತಿ !!!

Share the Article

ಕೊಚ್ಚಿ: 9 ವರ್ಷದ ಬಾಲಕ ಮೂರ್ಛೆ ರೋಗದಿಂದ ಬಳಲುತ್ತಿದ್ದು, ಶ್ವಾಸಕೋಶದಲ್ಲಿ ಸಿಲುಕಿರುವ ಆಹಾರದಿಂದ ಸಾವಿಗೀಡಾಗಿರುವ ಕರುಣಾಜನಕ ಘಟನೆ ಕೇರಳದ ನೆಡುಂಕಂಡಂನಲ್ಲಿ ನಡೆದಿದೆ.

ಮೃತ ಬಾಲಕನನ್ನು ಸಂತೋಷ್ ಎಂದು ಗುರುತಿಸಲಾಗಿದೆ.

ಈತ ನೆಡುಂಕಂಡಂ ಮೂಲದ ಕಾರ್ತಿಕ್ ಮತ್ತು ದೇವಿ ದಂಪತಿಯ ಪುತ್ರ, ಶುಕ್ರವಾರ ಪರೋಟ ತಿಂದಿದ್ದು ಅನಂತರ ಈತನ ಆರೋಗ್ಯ ಕೆಟ್ಟು ಹೋಗಿದ್ದು, ಬಾಲಕ ಅನಾರೋಗ್ಯದಿಂದ ಬಳಲುತ್ತಿದ್ದ. ಹೆಚ್ಚು ವಾಂತಿ ಮಾಡಿಕೊಳ್ಳುತ್ತಿದ್ದ ಬಾಲಕನನ್ನು ಪೋಷಕರು ಸಮೀಪದ ಖಾಸಗಿ ಆಸ್ಪತ್ರೆಗೆ ಶನಿವಾರ ದಾಖಲಿಸಲಾಗಿತ್ತು. ಆದರೂ, ವಾಂತಿ ಮಾಡುವುದು ಮಾತ್ರ ನಿಲ್ಲಲಿಲ್ಲ.

ಆಸ್ಪತ್ರೆಗೆ ಕರೆತಂದಾಗ ಬಾಲಕನ ಹೊಟ್ಟೆ ಊದಿಕೊಂಡಿದ್ದರ ಪರಿಣಾಮ, ಪ್ರಾಥಮಿಕ ಚಿಕಿತ್ಸೆ ಬಳಿಕ ಹೊಟ್ಟೆ ನೋವು ಕಡಿಮೆ ಆಗಿತ್ತು. ಆದರೆ, ಬೆಳಗ್ಗೆ 10.30ರ ಸುಮಾರಿಗೆ ರಕ್ತದೊತ್ತಡ ತೀವ್ರ ಕುಸಿತಗೊಂಡು ಬಾಲಕ ಮೃತಪಟ್ಟಿದ್ದಾನೆ.

Leave A Reply