ಆತ ಅದಮ್ಯ ಉತ್ಸಾಹದಿಂದ ತನ್ನ ಪ್ರಿಯತಮೆಗೆ ಲವ್ ಪ್ರಪೋಸ್ ಮಾಡಲು ಹೋದ | ಮುಖಭಂಗಕ್ಕೊಳಗಾದ ಯುವಕ | ಅಷ್ಟಕ್ಕೂ ಆತ ಮಾಡೋಕೆ ಹೋದದ್ದಾರೂ ಏನು?

‘ಪ್ರೇಮ’ ಒಂದು ಅದ್ಭುತ ಫೀಲಿಂಗ್. ಯಾರು ತಾನೇ ಪ್ರೇಮಪಾಶದಲ್ಲಿ ಬೀಳುವುದಿಲ್ಲ ಹೇಳಿ. ಹಾಗೆನೇ ಈ ಪ್ರೀತಿಯ ನಿವೇದನೆ ಕೂಡಾ ಅಷ್ಟೇ ಮುಖ್ಯ. ಇದಕ್ಕೆ ಎಷ್ಟೋ ಜನ ಎಷ್ಟೋ ಪ್ಲ್ಯಾನ್ ಮಾಡುತ್ತಾರೆ. ಕೆಲವರದ್ದು ಸಕ್ಸಸ್ ಆಗುತ್ತೆ. ಇನ್ನು ಕೆಲವರದ್ದು ಇಲ್ಲ. ಅಂಥದ್ದೇ ಒಂದು ನಡೆದ ಘಟನೆಯ ವೀಡಿಯೋ. ನಡೆದದ್ದೇನೆಂದರೆ…

 

ವ್ಯಕ್ತಿಯೊಬ್ಬ ತನ್ನ ಪ್ರೇಯಸಿಗೆ ಮೆಕ್ ಡೊನಾಲ್ಡ್ ನಲ್ಲಿ ತನ್ನ ಪ್ರೇಮ ನಿವೇದನೆ ಮಾಡಲು ಹೋಗಿ ಎಡವಟ್ಟು ಮಾಡಿಕೊಂಡಿದ್ದು, ಈ ವಿಡಿಯೋ ಈಗ ತುಂಬ ವೈರಲ್ ಆಗಿದೆ. ಏ. 28ರಂದು ಈ ವಿಡಿಯೋವನ್ನು ಟ್ವಿಟರ್ ಹ್ಯಾಂಡಲ್‌ನಲ್ಲಿ ಮೇಡಂ ಫೋಸೆಟ್ ಎಂಬವರು ಹಂಚಿಕೊಂಡಿದ್ದಾರೆ.

ದ. ಆಫ್ರಿಕಾದ ಜೋಹಾನ್ಸ್ ಬರ್ಗ್‌ನ ಸ್ಯಾಂಡ್‌ಟಂ ಸಿಟಿ ಮಾಲ್‌ನಲ್ಲಿರುವ ಮೆಕ್ ಡೊನಾಲ್ಡ್ ರೆಸ್ಟಾರೆಂಟ್‌ನಲ್ಲಿ ವ್ಯಕ್ತಿಯೊಬ್ಬ ತನ್ನನ್ನು ವಿವಾಹವಾಗುವಂತೆ ಪ್ರೇಯಸಿಗೆ ಪ್ರಪೋಸ್ ಮಾಡಿದ. ಆದರೆ, ಯಾರೂ ಊಹಿಸದಂತಹ ಪರಿಣಾಮವನ್ನು ಎದುರಿಸಬೇಕಾಯಿತು. ವ್ಯಕ್ತಿಯ ಪ್ರೇಮ ನಿವೇದನೆಯಲ್ಲಿ ಈ ಮಹಿಳೆಯು ಆಸಕ್ತಳಾಗಿದ್ದಂತೆ ತೋರಲಿಲ್ಲ. ರೆಸ್ಟೋರೆಂಟ್‌ ನಲ್ಲಿ ಆಹಾರಕ್ಕಾಗಿ ಆರ್ಡರ್ ಮಾಡಲು ತುಂಬ ಜನರು ಸರದಿಯಲ್ಲಿ ಕಾಯುತ್ತಿದ್ದರು.

ಈ ಮಹಿಳೆಯೂ ಅದೇ ಸಾಲಿನಲ್ಲಿ ನಿಂತಿದ್ದಳು. ಪ್ರಿಯಕರ ಆಕೆಯ ಬೆನ್ನ ಹಿಂದೆಯೇ ನಿಂತಿದ್ದ. ತಕ್ಷಣವೇ ಆತ ಮೊಣಕಾಲೂರಿ ಮಹಿಳೆಯ ಮುಂದೆ ಉಂಗುರವನ್ನು ಹಿಡಿದ. ಸಾಲು ನಿಂತಿದ್ದ ಜನರೆಲ್ಲ ಪ್ರೇಮ ನಿವೇದನೆಯನ್ನು ಒಪ್ಪಿಕೊಳ್ಳುವಂತೆ ಆಕೆಯನ್ನು ಪ್ರಚೋದಿಸುತ್ತಿದ್ದರು. ಆದರೆ, ಇದರಿಂದ ಸಿಟ್ಟಿಗೆದ್ದ ಆಕೆ ತನಗೆ ಪ್ರೇಮ ನಿವೇದನೆ ಮಾಡಿದ ವ್ಯಕ್ತಿಯನ್ನು ಟೀಸ್ ಮಾಡಲು ಆರಂಭಿಸಿದಳು.

https://twitter.com/Madame_Fossette/status/1519403493894852610?ref_src=twsrc%5Etfw%7Ctwcamp%5Etweetembed%7Ctwterm%5E1519403493894852610%7Ctwgr%5E%7Ctwcon%5Es1_c10&ref_url=http%3A%2F%2Fapi-news.dailyhunt.in%2F

ಈ ವಿಡಿಯೋವನ್ನು ಈಗಾಗಲೇ 36 ಲಕ್ಷ ಜನ ವೀಕ್ಷಿಸಿದ್ದಾರೆ, 65,000ಕ್ಕೂ ಹೆಚ್ಚು ಲೈಕ್ಸ್ ಬಂದಿವೆ.

ಪ್ರೇಮವನ್ನು ನಿವೇದಿಸುವುದು ಸಂಬಂಧವೊಂದನ್ನು ಬೆಳೆಸುವುದಕ್ಕೆ ಎಷ್ಟು ಮುಖ್ಯವೆಂಬುದು ಎಲ್ಲರಿಗೂ ಗೊತ್ತಿದೆ. ನಿರಾಕರಣೆಯಿಂದಾಗಬಹುದಾದ ಮುಖಭಂಗವನ್ನು ತಪ್ಪಿಸಲು ಎಲ್ಲಿ ಮತ್ತು ಹೇಗೆ ಪ್ರಪೋಸ್ ಮಾಡಬೇಕೆಂದೂ ವಿಚಾರಿಸಬೇಕಾಗುತ್ತದೆ

Leave A Reply

Your email address will not be published.