‘ಎಡಗೈ’ ಬಳಸುವವರ ಕುರಿತು ಇಲ್ಲಿದೆ ಕುತೂಹಲಕಾರಿ ವಿಷಯ!

ತುಂಬಾ ಜನರು ಎಡ ಗೈ ಬಳಸೋದನ್ನು ನಾವು ನೋಡಿದ್ದೇವೆ. ಇದು ಕೆಲವರು ಒಳ್ಳೆಯ ಅಭ್ಯಾಸವೆಂದರೇ ಇನ್ನೂ ಕೆಲವರು ಕೆಟ್ಟಭ್ಯಾಸ ಎನ್ನುತ್ತಾರೆ. ಒಟ್ಟಾರೆ ವಿಶ್ವದ ಶೇಕಡ 10 ರಷ್ಟು ಜನ ಎಡಗೈ ಹೆಚ್ಚು ಬಳಸುತ್ತಾರಂತೆ.ಆದರೆ ಎಡಗೈ ಏಕೆ ಹೆಚ್ಚು ಬಳಸುತ್ತಾರೆಂದು ಜೈವಿಕವಾಗಿ ತಿಳಿದು ಬಂದಿಲ್ಲವಾದರು, ಕೆಲ ವಿಜ್ಞಾನಿಗಳ ಪ್ರಕಾರ ಇದು ಪ್ರತಿ ವ್ಯಕ್ತಿಯ ಇಚ್ಛೆಯ ಮೇಲಿದೆಯಂತೆ.

ಹಿಂದೆಲ್ಲ ಎಡಗೈ ಬಳಸುವವರಿಗೆ ಬಲಗೈ ಬಳಸಲು ಬಲವಂತ ಮಾಡುತ್ತಿದ್ದರಿಂದ ಅವರ ಸಂಖ್ಯೆ ಶೇಕಡ 2ಕ್ಕಿಂತ ಕಡಿಮೆ ಇತ್ತಂತೆ.ಇದೀಗ ಏರಿಕೆಯಾಗಿದೆ.ಹಾಗೆಯೇ ಮಹಿಳೆಯರಿಗಿಂತ ಪುರುಷರು ಹೆಚ್ಚು ಎಡಗೈ ಬಳಸುವವರಾಗಿರುತ್ತಾರಂತೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ಕೆಲವರು ಎರಡೂ ಕೈಯನ್ನು ಸಮಾನವಾಗಿ ಬಳಸುವವರೂ ಇದ್ದಾರೆ. ಎಡಗೈ ಬಳಸುವವರ ಬಗ್ಗೆ ಈಗಲೂ ಪೂರ್ವಾಗ್ರಹವಿದ್ದು ಅದನ್ನು ಹೋಗಲಾಡಿಸಲು ಆಗಸ್ಟ್ 13 ನ್ನು ಎಡಗೈ ಬಳಸುವವರ ದಿನಾಚರಣೆಯಾಗಿ ಆಚರಿಸಲಾಗುತ್ತದೆ.

Leave A Reply

Your email address will not be published.