ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ | ಸಾರ್ವತ್ರಿಕ ವರ್ಗಾವಣೆಗೆ ರಾಜ್ಯ ಸರ್ಕಾರದಿಂದ ಅಧಿಕೃತ ಆದೇಶ !!
ಸಚಿವ ಸಂಪುಟ ಪುನಾರಚನೆ, ವಿಸ್ತರಣೆ, ನಾಯಕತ್ವ ಬದಲಾವಣೆ ಗೊಂದಲದ ನಡುವೆ ಸರ್ಕಾರಿ ನೌಕರರ ಸಾರ್ವತ್ರಿಕ (ಸಾಮಾನ್ಯ)ವರ್ಗಾವಣೆಗೆ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.
2022-23 ನೇ ಸಾಲಿಗೆ ಎ,ಬಿ,ಸಿ,ಡಿ ಗ್ರೂಫ್ ಅಧಿಕಾರಿಗಳು/ನೌಕರರು, ಸಿಬ್ಬಂದಿಗಳನ್ನು ವರ್ಗಾವಣೆ ಮಾಡಲು ಇಲಾಖೆ ಸಚಿವರಿಗೆ ಅಧಿಕಾರ ನೀಡಿ ಆದೇಶ ಹೊರಡಿಸಿದೆ. ಇಲಾಖೆಯ ಶೇ.6 ರಷ್ಟು ಮೀರದಂತೆ ವರ್ಗಾವಣೆ ಮಾಡಲು ಸೂಚನೆ ನೀಡಿದೆ.
01.05.2022 ರಿಂದ 15.06.2022 ವರೆಗೆ ಒಂದೂವರೆ ತಿಂಗಳು ವರ್ಗಾವಣೆಗೆ ಕಾಲಾವಕಾಶ ನಿಗದಿ ಮಾಡಿದೆ. ಸಾಮಾನ್ಯ ವರ್ಗಾವಣೆಗೆ ಸಚಿವ ಸಂಪುಟದ ಅನುಮೋದನೆ ಇಲ್ಲದಿದ್ದರೂ ವರ್ಗಾವಣೆಗೆ ಒಪ್ಪಿಗೆ ನೀಡಿರುವುದು ಅನುಮಾನಕ್ಕೆ ಕಾರಣವಾಗಿದೆ. ಮುಖ್ಯಮಂತ್ರಿ, ಸಚಿವರುಗಳು ವರ್ಗಾವಣೆ ಆದೇಶವಿಲ್ಲದಿದ್ದರೂ ನಿರಂತರವಾಗಿ ವರ್ಗಾವಣೆ ಮಾಡಿದ್ದಾರೆ. ಸಭೆಯೇ ನಡೆದಿಲ್ಲ, ಇವರ ಆದೇಶದಲ್ಲಿ ಸಮಿತಿಯ ತೀರ್ಮಾನ ಎಂದು ಹಾಕಿದ್ದಾರೆ ಎಂಬ ಮತ್ತೊಂದು ಗೊಂದಲ ಕೂಡ ಮೂಡಿದೆ.