ಪದೇ ಪದೇ ಹಸಿವಾಗುತ್ತಾ ? ಊಟದ ನಂತರವೂ ಹೊಟ್ಟೆಯಲ್ಲಿ ತಳಮಳ ಆಗಲು ಕಾರಣ ಅನೇಕ-ಏನದು ? ಇಲ್ಲಿದೆ ಅದಕ್ಕೆ ಉತ್ತರ
ಈಗಷ್ಟೇ ಊಟ ಆಗಿದೆ, ಆದ್ರೂ ಯಾಕೋ ಹೊಟ್ಟೆ ತುಂಬಿದಂಗೆ ಆಗ್ತಾ ಇಲ್ಲ ಏನಾದ್ರೂ ಇದ್ರೆ ತಿನ್ನೋಣ ಅಂತಾ ಫ್ರಿಡ್ಜ್ ನಲ್ಲಿ ಬಾಗಿಲು ತೆಗೆದು ಹುಡುಕಾಡುವ ಮಂದಿಯೇ ಹೆಚ್ಚು. ಊಟದ ನಂತರವೂ ಹೊಟ್ಟೆಯಲ್ಲಿ ತಳಮಳ ಹಲವು ಕಾರಣಗಳಿವೆ.
ಟಿವಿ/ಸಿನಿಮಾ : ಟಿವಿ ನೋಡ್ತಾ ಕುರುಕಲು ತಿಂಡಿ ತಿನ್ನುವ ಅಭ್ಯಾಸ ಎಲ್ಲರೂ ಮಾಡುತ್ತಾರೆ. ಅದರ ಬದಲು ಬೇರೆ ಏನಾದರೂ ಕೆಲಸ ಮಾಡುತ್ತ ನಿಮ್ಮ ಕೈಗಳನ್ನು ಬ್ಯುಸಿಯಾಗಿಡಿ. ಕರಿದ ತಿಂಡಿ ತಿನ್ನುವ ಬದಲು ಹರ್ಬಲ್ ಚಹಾ ಅಥವಾ ಜ್ಯೂಸ್ ಕುಡಿಯಬಹುದು.
ದೇಹದಲ್ಲಿನ ಡಿಹೈಡೇಶನ್ ನಿಂದ ನಿಮಗೆ ಹಸಿವಾಗುತ್ತಿದೆ ಎಂಬ ಭಾವನೆ ಕೆಲವರಲ್ಲಿ ಮೂಡುತ್ತದೆ. ಪ್ರತಿದಿನ 6-8 ಗ್ಲಾಸ್ ನೀರು ಕುಡಿಯಿರಿ. ತಿಂಡಿ ತಿನ್ನಲು ಧಾವಿಸುವ ಮುನ್ನ ನಿಮಗೆ ಬಾಯಾರಿಕೆ ಆಗಿದೆಯೇ ಅನ್ನೋದನ್ನು ಗಮನಿಸುವುದು ಒಳ್ಳೆಯದು.
ಅಗತ್ಯವಿರುವಷ್ಟು ನಿದ್ದೆಯಾಗದೇ ಹೋದರೆ ಕೂಡಾ ನಿಮಗೆ ಪದೇ ಪದೇ ಏನನ್ನಾದರೂ ತಿನ್ನಬೇಕು ಎನಿಸುತ್ತದೆ. ಇದಕ್ಕೆ ಕಾರಣ ಲೆಪ್ಟಿನ್ ಮತ್ತು ಗ್ರೆಲಿನ್ ಹಾರ್ಮೋನ್ ಗಳು. ಹೊಟ್ಟೆ ತುಂಬಿದೆ ಅನ್ನೋದನ್ನು ಲೆಪ್ಟಿನ್ ತಿಳಿಸುತ್ತದೆ. ಸರಿಯಾಗಿ ನಿದ್ದೆ ಮಾಡದೇ ಇದ್ದಾಗ ಲೆಪ್ಟಿನ್ ಕಾರ್ಯನಿರ್ವಹಿಸುವುದಿಲ್ಲ.
ರಿಫೈನ್ಡ್ ಆಹಾರಗಳಲ್ಲಿ ಸಕ್ಕರೆ ಕಾರ್ಬೋಹೈಡ್ರೆಡ್ ಪ್ರಮಾಣ ಹೆಚ್ಚಾಗಿರುತ್ತದೆ. ಅವು ಸಕ್ಕರೆಯಾಗಿ ಒಡೆದು ನಮ್ಮ ರಕ್ತದಲ್ಲಿ ಸೇರುತ್ತವೆ. ಉದಾ : ಪಾಸ್ತಾ ಬ್ರೆಡ್ ನಂತಹ ತಿನಿಸುಗಳನ್ನು ತಿಂದಾಗ ಸಕ್ಕರೆಯ ಪ್ರಮಾಣ ಹೆಚ್ಚುತ್ತದೆ. ನಮ್ಮ ದೇಹ ಇನ್ಸುಲಿನ್ ರಿಲೀಸ್ ಮಾಡಿ ಸಕ್ಕರೆ ಕೋಶಗಳೊಳಗೆ ಹೋಗಲು ಸಹಾಯ ಮಾಡುತ್ತದೆ. ಬಳಿಕ ಇದ್ದಕ್ಕಿದ್ದಂತೆ ಸಕ್ಕರೆ ಪ್ರಮಾಣ ಕುಸಿಯುವುದರಿಂದ ಹಸಿವು ಕಾಣಿಸಿಕೊಂಡು ನಾವು ಮತ್ತೆ ಸಿಹಿ ತಿಂಡಿ ಮತ್ತು ರಿಫೈನ್ಡ್ ಫುಡ್ ಸೇವಿಸಲು ಮುಂದಾಗುತ್ತೇವೆ.
ನಮ್ಮ ಮನಸ್ಸನ್ನು ಗೆಲ್ಲುವ ಲಾಜಿಕ್, ಆಹಾರ ಅಂಗಾಂಗಗಳಿಗೆ ಗೊತ್ತಿದೆ. ಹೆಚ್ಚಾಗಿ ಸಂಜೆ ವೇಳೆ ಟಿವಿಯಲ್ಲಿ ಜಾಹೀರಾತು ಬರುತ್ತದೆ. ನಮ್ಮ ಗಮನ ಸೆಳೆಯಲು ಬಸ್ ನಿಲ್ದಾಣಗಳಲ್ಲಿ ಜಾಹೀರಾತು ಸರ್ವೇಸಾಮಾನ್ಯ. ಅದನ್ನು ನೋಡಿದಾಗ ನಿಮ್ಮಲ್ಲಿ ಹಸಿವು ಭುಗಿಲೇಳುತ್ತೆ.
ಮೆಮೊರಿ ನಿಮ್ಮಲ್ಲಿ ಹಸಿವಿನ ಭಾವನೆ ಉಂಟು ಮಾಡಬಹುದು. ಚಿಕ್ಕಂದಿನಲ್ಲಿ ಅತ್ತಾಗಲೆಲ್ಲ ಸಿಹಿ ತಿಂದಿದ್ದರೆ, ಈಗಲೂ ಬೇಸರವಾದಾಗಲೆಲ್ಲ ಸಿಹಿ ತಿನಿಸು ತಿನ್ನಬೇಕೆನಿಸುತ್ತದೆ.
ಅಂಡೋತ್ಪತ್ತಿಯ ನಂತರ ಮತ್ತು ಋತುಚಕ್ರದ ಉತ್ತರಾರ್ಧದಲ್ಲಿ ಮಹಿಳೆಯರಲ್ಲಿ ಹಸಿವು ಹೆಚ್ಚಾಗಿರುತ್ತದೆ. ಈ ಸಮಯದಲ್ಲಿ ನೀವು ಪೋಷಕಾಂಶವುಳ್ಳ ಆಹಾರ ಸೇವಿಸಬೇಕು. ಕೆಫಿನ್ ಹಾಗೂ ಆಲ್ಕೋಹಾಲ್ ಸೇವನೆಯಿಂದ ನಿಮ್ಮ ಹಾರ್ಮೋನ್ ಅಸಮತೋಲನವುಂಟಾಗುವ ಸಾಧ್ಯತೆಯಿದೆ.