ಮಂಗಳೂರಿನ ಮೊದಲ ಜೊಮ್ಯಾಟೋ ಮಹಿಳೆ ನಿಧನ !

Share the Article

ಮಂಗಳೂರು : ಜೊಮ್ಯಾಟೋ ಗರ್ಲ್ ಎಂದೇ ಪ್ರಖ್ಯಾತಿ ಪಡೆದಿದ್ದ ಮೇಘನಾ ದಾಸ್ ಅವರು ವಿಧಿವಶರಾಗಿದ್ದಾರೆ. 36 ವರ್ಷದ ಮೇಘನಾ ಅವರು 8 ವರ್ಷದ ಪುಟ್ಟ ಮಗಳನ್ನು ಹೊಂದಿದ್ದರು.

ಕಳೆದ ಕೆಲ ತಿಂಗಳಿಂದ ಅನಾರೋಗ್ಯದಿಂದ ಬಳಲುತಿದ್ದ ಮೇಘನಾ ಅವರು ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ.

ಈ ಹಿಂದೆ ಝೂಮಾಟೋ ಫುಡ್ ಡೆಲಿವರಿ ಗರ್ಲ್ ಆಗಿ ಕೆಲಸ ಮಾಡುತ್ತಿದ್ದ ಮೇಘನಾ ಅವರು 2019 ರಲ್ಲಿ ಮಂಗಳೂರು ಮಹಾ ನಗರಪಾಲಿಕೆಯ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಮಣ್ಣಗುಡ್ಡಾ ಕ್ಷೇತ್ರದಿಂದ ಕಣಕ್ಕೆ ಇಳಿದಿದ್ದರು.

ಬೆಂಗಳೂರಿನ ಎಂಎನ್ ಸಿ ಹ್ಯಾಬ್ಲೆಟ್ ಪ್ಯಾಕಾರ್ಡ್ ನಲ್ಲಿ ಟೆಕ್ನಿಕಲ್ ಸಪೋರ್ಟ್ ಎಕ್ಸಿಕ್ಯುಟಿವ್ ಆಗಿದ್ದರು. ನಂತರ ದುಬೈನ ಕಂಪನಿಯೊಂದರಲ್ಲಿ ಮೇನೇಜರ್ ಆಗಿ ಕೆಲಸ ನಿರ್ವಹಿಸಿದ್ದ ಮೇಘನಾ ಅವರು ಬೈಕ್ ಪ್ರಿಯೆ ಕೂಡ ಹೌದು.

ಮೋಟಾರ್ ಸೈಕಲ್ ಏರಿ ಸವಾರಿ ಹೊರಡೋದಂದ್ರೆ ಈಕೆಗೆ ಬಲು ಇಷವಾಗಿತ್ತು. ಡೆಲಿವರಿ ಗರ್ಲ್ ಆಗಿ
ಮಾಡುತ್ತಿದ್ದ ಕೆಲಸದ ಬಗ್ಗೆ ಅಂದು ಪ್ರತಿಕ್ರಿಯಿಸಿದ್ದ ಮೇಘನಾ ಆಹಾರ ಡೆಲಿವರಿ ಮಾಡುವ ಕೆಲಸ ಸಣ್ಣ ಮಟ್ಟದ್ದು ಎಂದು ನಾಚಿಕೆ ಪಡುವ ಅಗತ್ಯವಿಲ್ಲ.

ಹಸಿವಾದಾಗ ಆಹಾರ ಒದಗಿಸಿ ಅವರ ಹಸಿವು ತಣಿಸುವ ಕೆಲಸಕ್ಕಿಂತ ಉತ್ತಮವಾದ ಕೆಲ ಬೇರೊಂದಿಲ್ಲ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದರು.

Leave A Reply