ನಾನು ಹಿಂದೂ ಎಂಬ ಕಾರಣಕ್ಕೆ ನನ್ನನ್ನು ಕೆಟ್ಟದಾಗಿ ನಡೆಸಿಕೊಂಡರು : ಶಾಹೀದ್ ಆಫ್ರಿದಿ ವಿರುದ್ಧ ಕಿರುಕುಳದ ಮಾಹಿತಿ ಬಿಚ್ಚಿಟ್ಟ ಮಾಜಿ ಆಟಗಾರ
ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ಆಟಗಾರ ಡ್ಯಾನಿಶ್ ಕನೇರಿಯಾ ಮಾಜಿ ನಾಯಕ ಶಾಹೀದ್ ಅಫ್ರಿದಿ ವಿರುದ್ಧ ಕೆಲವೊಂದು ಗಂಭೀರವಾದ ಆರೋಪಗಳನ್ನು ಮಾಡಿದ್ದಾರೆ. ಹಿಂದು ಎಂಬ ಕಾರಣಕ್ಕೆ ನನ್ನನ್ನು ಪಂದ್ಯದ ದಿನಗಳಲ್ಲಿ ತನ್ನನ್ನು ಕೆಟ್ಟದಾಗಿ ನಡೆಸಿಕೊಂಡಿದ್ದಾರೆ ಎಂದು ದೂರಿದ್ದಾರೆ. ಇದಲ್ಲದೆ, ಆಫ್ರಿದಿ ಓರ್ವ ಸುಳ್ಳುಗಾರ, ಕುತಂತ್ರಿ ಹಾಗ ಚಾರಿತ್ರ್ಯಹೀನ ವ್ಯಕ್ತಿ ಎಂದು ಕನೇರಿಯಾ ಕಿಡಿಕಾರಿದ್ದಾರೆ.
ಮಾಧ್ಯಮ ಸಂದರ್ಶನವೊಂದರಲ್ಲಿ ಮಾತನಾಡಿರುವ ಕನೇರಿಯಾ, ನನ್ನ ಸಮಸ್ಯೆಗಳ ಧ್ವನಿ ಎತ್ತಿದ ಮೊದಲ ವ್ಯಕ್ತಿಯೆಂದರೆ ಅದು ಶೋಯೆಬ್ ಅಖ್ತರ್ ಮಾತ್ರ. ಹಿಂದು ಎಂಬ ಕಾರಣಕ್ಕೆ ತಂಡದಲ್ಲಿ ನನ್ನನ್ನು ಹೇಗೆ ನಡೆಸಿಕೊಂಡರು ಎಂಬುದನ್ನು ತಿಳಿಸಿದ ಅವರನ್ನು ನಂತರದ ದಿನಗಳಲ್ಲಿ ಅಧಿಕಾರಿಗಳು ಅಖ್ತರ್ ಮೇಲೆ ಒತ್ತಡ ಹೇರಿದ್ದರು. ಹೀಗಾಗಿ ನನ್ನ ಬಗ್ಗೆ ಮಾತನಾಡುವುದನ್ನು ಅವರು ನಿಲ್ಲಿಸಿದರು.
ನಾನು ಯಾವಾಗಲೂ ಆಫ್ರಿದಿಯಿಂದ ನಿಂದನೆಗೆ
ಒಳಗಾಗಿದ್ದೇನೆ. ನಾವು ಒಂದೇ ವಿಭಾಗದಲ್ಲಿ ಒಟ್ಟಿಗೆ
ಆಡುತ್ತಿದ್ದೆವು. ಆದರೆ, ಅವರು ನನ್ನನ್ನು ಬೆಂಚ್ ಕಾಯುವಂತೆ ಮಾಡಿ, ಏಕದಿನ ಪಂದ್ಯಾವಳಿಯನ್ನು ಆಡಲು ಬಿಡಲಿಲ್ಲ ಎಂದು ಕನೇರಿಯಾ ಹೇಳಿದ್ದಾರೆ.
2009 ರಲ್ಲಿ ಇಂಗ್ಲಿಷ್ ಕೌಂಟಿ ಚಾಂಪಿಯನ್‌ಶಿಪ್ ಪ್ರೋ ಲೀಗ್ ಪಂದ್ಯಗಳಲ್ಲಿ ಸ್ಪಾಟ್ ಫಿಕ್ಸಿಂಗ್ ಆರೋಪ ಹೊರಿಸಿ, ಕನೇರಿಯಾ ಅವರನ್ನು 2012 ರಲ್ಲಿ ಇಸಿಬಿಯಿಂದ ನಿಷೇಧಿಸಲಾಯಿತು. ಈ ಬಗ್ಗೆಯೂ ಮಾತನಾಡಿರುವ ಕನೇರಿಯಾ, ನನ್ನ ವಿರುದ್ಧ ಸುಳ್ಳು ಆರೋಪಗಳನ್ನು ಹೊರಿಸಿ ನಾ ಆಡದ ಹಾಗೇ ಮಾಡಿದರು. ನಾನು ಯಾವುದೇ ರೀತಿಯ ಸ್ಪಾಟ್ ಫಿಕ್ಸಿಂಗ್‌ನಲ್ಲಿ ಎಂದಿಗೂ ಭಾಗಿಯಾಗಿಲ್ಲ. ನನ್ನ ವಿರುದ್ಧ ಸಂಚು ರೂಪಿಸಿ, ನನ್ನನ್ನು
ಅದರಲ್ಲಿ ಸಿಲುಕಿಸಿದರು. ಸ್ಪಾಟ್ ಫಿಕ್ಸಿಂಗ್‌ನಲ್ಲಿ ಭಾಗಿಯಾಗಿದ್ದ ಆರೋಪಿಯ ಹೆಸರಿನ ಜತೆ ನನ್ನ ಹೆಸರನ್ನು ಸೇರಿಸಿದರು. ಆರೋಪಿಯು ನನಗೆ ಮಾತ್ರವಲ್ಲ ಅಫ್ರಿದಿ ಸೇರಿದಂತೆ ತಂಡದ ಇತರೆ ಆಟಗಾರರಿಗೆ ಸ್ನೇಹಿತನಾಗಿದ್ದ. ಆದರೆ, ನನ್ನನ್ನೇ ಏಕೆ ಹೀಗಾಗಿ ನಾನು ನನ್ನ ಕೆಲಸವನ್ನು ಮಾಡುವುದಕ್ಕಾಗಿ ನನ್ನ ಮೇಲೆ ಹೇರಿರುವ ನಿಷೇಧವನ್ನು ತೆಗೆದುಹಾಕಲು ಪಿಸಿಬಿಗೆ ವಿನಂತಿಸಲು ಬಯಸುತ್ತೇನೆ ಎಂದಿದ್ದಾರೆ. ಟಾರ್ಗೆಟ್ ಮಾಡಿದರು ಎಂಬುದು ನನಗೆ ತಿಳಿಯಲಿಲ್ಲ
ನಾನು ನನ್ನ ದೇಶಕ್ಕಾಗಿ ಆಡಿದ್ದೇನೆ ಮತ್ತು ಇತರರಂತೆ ನನಗೂ ಅವಕಾಶ ನೀಡಬೇಕು. ನಾನೀಗ ಯಾವುದೇ ಅಂತರಾಷ್ಟ್ರೀಯ ಕ್ರಿಕೆಟ್ ಆಡುತ್ತಿಲ್ಲ. ನಾನು
ಯಾವುದೇ ಉದ್ಯೋಗಕ್ಕಾಗಿ ಪಿಸಿಬಿಯನ್ನು ಕೇಳುತ್ತಿಲ್ಲ, ಆದರೆ ದಯವಿಟ್ಟು ಈ ನಿಷೇಧವನ್ನು ತೆಗೆದುಹಾಕಿ, ಇದರಿಂದ ನಾನು ಶಾಂತಿಯುತವಾಗಿ ಬದುಕುತ್ತೇನೆ. ಮತ್ತು ನನ್ನ ಕೆಲಸವನ್ನು ಗೌರವದಿಂದ ಮಾಡುತ್ತೇನೆ ಕನೇರಿಯಾ ಮನವಿ ಮಾಡಿಕೊಂಡಿದ್ದಾರೆ.