ಮಂಗಳೂರು : ರೌಡಿಶೀಟರ್ ರಾಹುಲ್ ಹತ್ಯೆ ಪ್ರಕರಣ : ಓರ್ವ ಅರೆಸ್ಟ್

ಮಂಗಳೂರು : ಕಳೆದ 28ರಂದು ಸಂಜೆ ಆರು ಗಂಟೆ ಸುಮಾರಿಗೆ ನಾಲ್ವರು ದುಷ್ಕರ್ಮಿಗಳು ಮಾರಕಾಸ್ತ್ರಗಳನ್ನು ಬಳಸಿ ರೌಡಿಶೀಟರ್ ಕಕ್ಕೆ ಅಲಿಯಾಸ್ ರಾಹುಲ್ ನನ್ನು ಕೊಲೆಗೈದಿದ್ದರು.

 

ಮಂಗಳೂರಿನ ಪಾಂಡೇಶ್ವರ ಠಾಣಾ ವ್ಯಾಪ್ತಿಯ ಎಮ್ಮೆಕೆರೆ ಮೈದಾನದಲ್ಲಿ ನಡೆದ ರೌಡಿಶೀಟರ್ ರಾಹುಲ್ ಹೊಯಿಗೆಬಜಾರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಂತಕರ ಪೈಕಿ ಓರ್ವನನ್ನು ಪಾಂಡೇಶ್ವರ ಪೋಲಿಸರು ಬಂಧಿಸಿದ್ದಾರೆ. ಬಂಧಿತನನ್ನು ಎಮ್ಮೆಕೆರೆ ನಿವಾಸಿ ಸುಜಿತ್ (28) ಎಂದು ಗುರುತಿಸಲಾಗಿದೆ.

ಮಹೇಂದ್ರ ಶೆಟ್ಟಿ ಗ್ಯಾಂಗ್ ಈ ಕೊಲೆ ಮಾಡಿರುವುದಾಗಿ ರಾಹುಲ್ ಸ್ನೇಹಿತ ಸಂತೋಷ್‌ ಪೋಲಿಸರಿಗೆ ದೂರು ನೀಡಿದ್ದ. ಆತನ ದೂರಿನ ಆಧಾರದ ಮೇರೆಗೆ ತನಿಖೆ ನಡೆಸಿದ ಪೊಲೀಸರು ಸುಜಿತ್ ನನ್ನು ಬಂಧಿಸಿದ್ದು, ಉಳಿದವರ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ.

Leave A Reply

Your email address will not be published.