ರಂಜಾನ್ ಹಬ್ಬದ ಆಚರಣೆಯ ಸಾರ್ವತ್ರಿಕ ರಜೆಯಲ್ಲಿ ಬದಲಾವಣೆ

Share the Article

ವಿಶ್ವವೇ ರಂಜಾನ್ ಹಬ್ಬದ ಆಚರಣೆಗೆ ಸಕಲ ತಯಾರಿಯಲ್ಲಿದೆ. ಮುಸ್ಲಿಮ್ ಬಾಂಧವರ ಪವಿತ್ರ ಹಬ್ಬದ ಆಚರಣೆಗೆ ಇದೀಗ ಕರ್ನಾಟಕ ಸರ್ಕಾರ ಸಾರ್ವತ್ರಿಕ ರಜೆಯಲ್ಲಿ ಬದಲಾವಣೆ ಮಾಡಿದೆ.

 ರಾಜ್ಯ ಸರ್ಕಾರದಿಂದ ರಂಜಾನ್ ರಜೆಯನ್ನು ದಿನಾಂಕ 03-05-2022ರಂದು ನಿಗದಿ ಪಡಿಸಿ ಘೋಷಣೆ ಮಾಡಿತ್ತು. ಆದರೆ ಖುತುಬ್ ಎ ರಂಜಾನ್ ಹಬ್ಬವನ್ನು ದಿನಾಂಕ 02-05-2022ರಂದು ಆಚರಿಸಲು ಮೂನ್ ಕಮಿಟಿಯು ತೀರ್ಮಾನಿಸಿರುವುದರಿಂದ, ದಿನಾಂಕ 02-05-2022ರಂದು ಸಾರ್ವತ್ರಿಕ ರಜೆಯನ್ನು ಮಂಜೂರು ಮಾಡಿ ಆದೇಶಿಸಿದ್ದಾರೆ

2022ನೇ ಸಾಲಿನ ಸಾರ್ವತ್ರಿಕ ರಜಾ ದಿನಗಳ ಪಟ್ಟಿಯಲ್ಲಿ ದಿನಾಂಕ 03-05-2022ರಂದು ಖುತುಬ್ ಎ ರಂಜಾನ್ ಹಬ್ಬದ ಪ್ರಯುಕ್ತ ಸಾರ್ವತ್ರಿಕ ರಜೆ ಘೋಷಣೆ ಮಾಡಲಾಗಿತ್ತು. ಆದರೆ ಮೂನ್ ಕಮಿಟಿ ತೀರ್ಮಾನದಿಂದಾಗಿ ಇದೀಗ ದಿನಾಂಕ 02-05-2022ರಂದು ಬದಲಾವಣೆ ಮಾಡಿ ಮರು ನಿಗದಿಪಡಿಸಿ, ಸಾರ್ವತ್ರಿಕ ರಜೆಯಾಗಿ ಘೋಷಿಸಿದೆ.

Leave A Reply