ಮನೆಯಲ್ಲಿ ಹಲ್ಲಿ ಕಾಟ ಹೆಚ್ಚಾಗಿದೆಯೇ? ಹಲ್ಲಿ ಓಡಿಸಲು ಸುಲಭ ಟಿಪ್ಸ್ ಇಲ್ಲಿದೆ!

ಮನೆಯ ಗೋಡೆಯಲ್ಲಿ ಸಾಮಾನ್ಯವಾಗಿ ಸರಿಸೃಪ ಹಲ್ಲಿ ಕಾಣಸಿಗುವುದು ಮಾಮೂಲಿ. ತುಂಬಾ ಜನರಿಗೆ ಹಲ್ಲಿಯೆಂದರೆ ಭಯ. ಹಲ್ಲಿ ಕಂಡ ಕೂಡಲೇ ಚೀರಾಡಿ ಓಡುವ ಜನರಿದ್ದಾರೆ. ನೀವೂ ಅವರಲ್ಲಿ ಒಬ್ಬರಾಗಿದ್ದು, ಹಲ್ಲಿಯನ್ನು ಓಡಿಸೋದು ಹೇಗೆ ಎಂಬ ಚಿಂತೆಯಲ್ಲಿದ್ದರೆ ಈ ಟಿಪ್ಸ್ ನಿಮಗೆ ಉಪಯೋಗವಾಗಲಿದೆ.

ನವಿಲುಗರಿ, ಮೊಟ್ಟೆ ಸಿಪ್ಪೆ ಹಲ್ಲಿ ಹತ್ತಿರವೂ ಸುಳಿಯೋದಿಲ್ಲ ಎಂದು ಅನೇಕ ಮಂದಿ ಹೇಳುತ್ತಾರೆ.

ಕೆಲವೊಮ್ಮೆ ನವಿಲುಗರಿ ಪ್ರಯೋಜನಕ್ಕೆ ಬರೋದಿಲ್ಲ. ನವಿಲುಗರಿ ಮೇಲೆಯೇ ಹಲ್ಲಿ ಓಡಾಡೋದಿದೆ. ಹಾಗಾಗಿ ನವಿಲುಗರಿ ಸಂಗ್ರಹಿಸಿ ಮನೆಯಲ್ಲಿಡುವ ಸಾಹಸ ಬೇಡ ಮನೆಯಲ್ಲಿರುವ ವಸ್ತುಗಳನ್ನು ಬಳಸಿ ಸುಲಭವಾಗಿ ಹಲ್ಲಿಯಿಂದ ಮುಕ್ತಿ ಪಡೆಯಬಹುದು. ಕಾಳು ಮೆಣಸು ಮನೆಯಲ್ಲಿದ್ದರೆ ಹಲ್ಲಿ ಮನೆಯಿಂದ ಹೊರ ಹೋಯ್ತು ಎಂದೇ ಅರ್ಥ. ಕಾಳು ಮೆಣಸಿನ ಪುಡಿಯನ್ನು ನೀರಿಗೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ, ನಂತ್ರ ಇದನ್ನು ಸ್ಪ್ರೇ ಬಾಟಲಿಗೆ ಹಾಕಿ ಹಲ್ಲಿ ಇರುವ ಜಾಗಗಳಿಗೆ ಸ್ಪ್ರೇ ಮಾಡಿ ಕಾಳುಮೆಣಸಿನ ವಾಸನೆಗೆ ಹಲ್ಲಿ ಮನೆ ಬಿಟ್ಟು ಓಡಿ ಹೋಗುತ್ತದೆ.

ಒಂದು ಸ್ಪ್ರೇ ಬಾಟಲಿಗೆ ಈರುಳ್ಳಿ ರಸ, ನೀರನ್ನು ಹಾಕಿ. ಅದಕ್ಕೆ ಎರಡು ಹನಿ ಬೆಳ್ಳುಳ್ಳಿ ರಸ ಹಾಕಿ. ಹಲ್ಲಿ ಹೆಚ್ಚಾಗಿ ಬರುವ ಜಾಗಗಳಿಗೆ ಸ್ಪ್ರೇ ಮಾಡಿ.

ಚಳಿಗಾಲದಲ್ಲಿ ಹಲ್ಲಿಗಳು ಹೆಚ್ಚಾಗಿ ಕಾಡೋದಿಲ್ಲ. ಹಲ್ಲಿಗೆ ತಣ್ಣನೆಯ ವಾತಾವರಣದಲ್ಲಿ ವಾಸ ಮಾಡೋದು ಕಷ್ಟ ಹಾಗಾಗಿ ಹಲ್ಲಿ ಕಂಡ ತಕ್ಷಣ ಫ್ರಿಜ್ ನೀರು ಅಥವಾ ಐಸ್ ನೀರನ್ನು ಹಲ್ಲಿ ಮೈ ಮೇಲೆ ಸ್ಪ್ರೇ ಮಾಡಿ. ಪದೇ ಪದೇ ಹೀಗೆ ಮಾಡುತ್ತಿದ್ದರೆ ಹಲ್ಲಿ ನಿಮ್ಮ ಮನೆಗೆ ಬರೋದಿಲ್ಲ.

ಬಟ್ಟೆ ವಾಸನೆ ಬರದಿರಲಿ ಎಂಬ ಕಾರಣಕ್ಕೆ ಅನೇಕರು ಡಾಂಬರ್ ಗುಳಿಗೆ ಬಳಸ್ತಾರೆ. ಈ ಡಾಂಬರ್ ಗುಳಿಗೆ ಹಲ್ಲಿ ಓಡಿಸಲು ಸಹಕಾರಿ. ಹಲ್ಲಿ ಓಡಾಡುವ ಜಾಗದಲ್ಲಿ ಒಂದು ಗುಳಿಗೆ ಇಟ್ಟರೆ ಹಲ್ಲಿ ನಿಮ್ಮ ಮನೆ ಹತ್ತಿರ ಸುಳಿಯುವುದಿಲ್ಲ.

Leave A Reply

Your email address will not be published.