ಇನ್ನೂ 48 ಗಂಟೆಗಳ ಕಾಲ ವಿಪರೀತ ಬಿಸಿಯೇರಲಿದೆ ಇಳೆ!! ಈ ಎರಡು ದಿನ ಸೆಖೆಯಿಂದ ತಪ್ಪಿಸಿಕೊಳ್ಳಲು ಇಲ್ಲಿದೆ ಕೆಲ ಉಪಾಯ
ಮುಂದಿನ 48 ಗಂಟೆಗಳ ಕಾಲ ವಾತಾವರಣದಲ್ಲಿ ಬಿಸಿಗಾಳಿಯ ಉಷ್ಣಾಂಶ ಹೆಚ್ಚಿರಲಿದ್ದು, ಎರಡು ದಿನಗಳ ಬಳಿಕ ಇಳಿಕೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯು ಅಭಿಪ್ರಾಯಪಟ್ಟಿದೆ.
ದೇಶದ ನಾನಾ ಭಾಗಗಳಲ್ಲಿಯೂ ಬಿರು ಬೇಸಿಗೆಯ ವಾತಾವರಣವಿದ್ದು ದೆಹಲಿ ಹಾಗೂ ಇನ್ನಿತರ ಕಡೆ ಶೇ.0.5-1 ಡಿಗ್ರಿ ಸೆ. ನಷ್ಟು ಉಷ್ಣಾಂಶ ಹೆಚ್ಚುವ ಸಂಭವವಿದೆ.ಮೇ.04 ರ ಬಳಿಕ ಅಂಡಮಾನ್ ಬಳಿ ಚಂಡಮಾರುತ ನಿರ್ಮಾಣವಾಗಲಿದೆ ಎನ್ನಲಾಗಿದ್ದು,ಆ ಬಳಿಕ ವಾತಾವರಣದಲ್ಲಿ ಬಿಸಿ ಕಡಿಮೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಬಿಸಿಲ ಬೇಗೆಯಿಂದ ತಪ್ಪಿಸಿಕೊಳ್ಳಲು ಇಲ್ಲಿದೆ ಉಪಾಯ!
ಹೌದು,ಬೇಸಿಗೆಯ ಸಮಯದಲ್ಲಿ ವಾತಾವರಣ ಬಿಸಿ ಏರುವುದರೊಂದಿಗೆ ಮಾನವನ, ಪ್ರಾಣಿಗಳ ದೇಹದ ಮೇಲೂ ಪರಿಣಾಮ ಬೀರುತ್ತದೆ.ಅತಿಯಾದ ಸೆಖೆಯಿಂದ ಬೆವರಿದಾಗ ಚರ್ಮದಲ್ಲಿ ಅಲರ್ಜಿ, ತುರಿಕೆ ಹೀಗೆ ಹಲವು ಸಮಸ್ಯೆಗಳು ಉದ್ಭವಿಸುವುದು ಸಾಮಾನ್ಯ.
ಮನೆಯೊಳಗೇ ಫ್ಯಾನ್ ಗಾಳಿ ಸೇವಿಸಿಕೊಂಡಿದ್ದರೂ ತಡೆಯಲಾಗದೆ ಇರುವಂತಹ ಸಂದರ್ಭ ಕೆಲ ಪಾನೀಯಗಳನ್ನು ಕುಡಿಯುವುದು ಅನಿವಾರ್ಯ. ಹೀಗೆ ಸೆಖೆಯಿಂದ ತಪ್ಪಿಸಿಕೊಂಡು ಆರೋಗ್ಯ ಕಾಪಾಡುವ ಕೆಲ ಜ್ಯೂಸ್ ಬಗೆಗೂ ಇಲ್ಲಿ ತಿಳಿಸಲಾಗಿದೆ.
ಎಳನೀರು
ಎಳನೀರು ತನ್ನಲ್ಲಿ ಅಗಾಧ ಪ್ರಮಾಣದಲ್ಲಿ ಪೌಷ್ಟಿಕ ಸತ್ವಗಳಾದ, ವಿಟಮಿನ್ ಸಿ, ಕಾಲ್ಸಿಯಂ, ಮೆಗ್ನೇಶಿಯಂ, ಪೊಟ್ಯಾಶಿಯಂ ಮತ್ತು ಸೋಡಿಯಂ ಅಂಶಗಳು ಹಾಗೂ ಇತರ ಬಗೆಯ ಖನಿಜಾಂಶಗಳು, ಆರೋಗ್ಯವನ್ನ ಕಾಪಾಡುವುದರ ಜೊತೆಗೆ, ಬೇಸಗೆಯಲ್ಲಿ ದೇಹಕ್ಕೆ ಎಲೆಕ್ಟ್ರೋಲೈಟ್ಸ್‌ನಂತೆ, ಕಾರ್ಯ ನಿರ್ವಹಿಸಿ ನಿರ್ಜಲೀಕರಣ ವಾಗದಂತೆ ತಡೆಯುವುದು.
ಕಬ್ಬಿನ ಹಾಲು
ಬಿರು ಬಿಸಿಲಿಗೆ ದೇಹದ ಉಷ್ಣತೆಯನ್ನು ಕಡಿಮೆ ಮಾಡಿ, ದೇಹಕ್ಕೆ ತಂಪುಣಿಸುವ ಮೊತ್ತೊಂದು ಪಾನೀಯ ಎಂದರೆ ಅದು ಕಬ್ಬಿನ ಹಾಲು. ಬೇಸಿಗೆಯಲ್ಲಿ ಉರಿ ಬಿಸಿಲಿನಿಂದಾಗಿ ಕಾಡುವ ನಿರ್ಜಲೀ ಕರಣ ಸಮಸ್ಯೆಗೆ ಕಬ್ಬಿನ ಹಾಲು ಅಥವಾ ಕಬ್ಬಿನ ಜ್ಯೂಸ್, ಒಂದು ಒಳ್ಳೆಯ ಪಾನೀಯ ಎಂಬು ದರಲ್ಲಿ ಎರಡು ಮಾತಿಲ್ಲ.
ಪುದೀನ ಸಿರಪ್
ಬೇಸಿಗೆಯಲ್ಲಿ, ಪುದೀನಾ ದೇಹವನ್ನು ತಂಪಾಗಿ ಉಲ್ಲಾಸಗೊಳಿಸುತ್ತದೆ. ಇದನ್ನು ಮಾಡಲು, 2-3 ಗ್ಲಾಸ್ ನೀರನ್ನು ತೆಗೆದುಕೊಳ್ಳಿ. ಪುದೀನ ಎಲೆಗಳ ಲವಂಗ ಮತ್ತು ಕಲ್ಲು ಸಕ್ಕರೆಯ ತುಂಡುಗಳನ್ನು ಸೇರಿಸಿ. ಮತ್ತು ಅವುಗಳನ್ನು ಚೆನ್ನಾಗಿ ರುಬ್ಬಿಕೊಳ್ಳಿ. ನಂತರ ಅದಕ್ಕೆ ಅರ್ಧ ನಿಂಬೆಹಣ್ಣು ಮತ್ತು ಕಲ್ಲು ಉಪ್ಪನ್ನು ಹಾಕಿ ಫಿಲ್ಟರ್ ಮಾಡಿ ಪುದೀನಾ ಸಿರಪ್ ಸವಿಯಿರಿ.
ಇದಲ್ಲದೆ ಕಲ್ಲಂಗಡಿ ಹಣ್ಣಿನ ಜ್ಯೂಸ್, ಪುನರ್ಪುಳಿ ಶರಬತ್, ನಿಂಬೆಹಣ್ಣಿನ ಪಾನಕ, ಎಳ್ಳು ಜ್ಯೂಸ್, ಚಿಪ್ಪಡ್ ಜ್ಯೂಸ್ ಗಳು ಬೇಸಿಗೆಯಲ್ಲಿ ದೇಹದ ಉಷ್ಣಾಂಶ ಕಡಿಮೆ ಮಾಡುವಲ್ಲಿ ಸಹಕಾರಿಯಾಗಿದೆ.