ಕೇವಲ 266 ರೂ. ಗೆ ಖರೀದಿಸಿ ಹೊಸ ರಿಯಲ್ ಮಿ ಸ್ಮಾರ್ಟ್ ಫೋನ್ !! | ಫ್ಲಿಪ್ ಕಾರ್ಟ್ ಗ್ರಾಹಕರಿಗಾಗಿ ಈ ವಿಶೇಷ ಆಫರ್

Share the Article

ಇತ್ತೀಚಿಗೆ ಜನಸಾಮಾನ್ಯರು ಆನ್ ಲೈನ್ ಶಾಪಿಂಗ್ ನತ್ತ ಹೆಚ್ಚಿನ ಒಲವು ತೋರುತ್ತಿದ್ದಾರೆ. ಅಲ್ಲದೆ ಆನ್ ಲೈನ್ ಶಾಪಿಂಗ್ ಪ್ಲಾಟ್ ಫಾರ್ಮ್ ಗಳಾದ ಅಮೆಜಾನ್, ಫ್ಲಿಪ್ ಕಾರ್ಟ್ ಗ್ರಾಹಕರಿಗಾಗಿ ಹಲವು ರೀತಿಯ ಆಫರ್ ಗಳನ್ನು ನೀಡುತ್ತಲೇ ಬಂದಿವೆ. ಅಂತೆಯೇ ಇದೀಗ ಫ್ಲಿಪ್ ಕಾರ್ಟ್ ತನ್ನ ಗ್ರಾಹಕರಿಗೆ ಭರ್ಜರಿ ಆಫರ್ ನೀಡುತ್ತಿದೆ. ಈ ಆಫರ್ ಮೂಲಕ ನೀವು ಹಲವು ದುಬಾರಿ ಉತ್ಪನ್ನಗಳನ್ನು ಅಗ್ಗದ ಬೆಲೆಯಲ್ಲಿ ಖರೀದಿಸಬಹುದಾಗಿದೆ.

ಈ ಸೇಲ್ ನಲ್ಲಿ ರಿಯಲ್ ಮೀ ಕಂಪನಿಯ ಸ್ಮಾರ್ಟ್ ಫೋನ್ ಅನ್ನು ತುಂಬಾ ಕಡಿಮೆ ಬೆಲೆಗೆ ಖರೀದಿಸಬಹುದಾಗಿದೆ. ಒಂದು ವೇಳೆ ನೀವೂ ಕೂಡ ಹೊಸ ಸ್ಮಾರ್ಟ್ ಫೋನ್ ಖರೀದಿಸಲು ಯೋಜನೆ ರೂಪಿಸಿದ್ದರೆ, ಇದು ನಿಮ್ಮ ಪಾಲಿಗೆ ಉತ್ತಮ ಅವಕಾಶವಾಗಿರಲಿದೆ. ರಿಯಲ್ ಮೀ ನಾರ್ಜೋ 50 ಎ ಅನ್ನು ರೂ.266ಕ್ಕೆ ಖರೀದಿಸಬಹುದು. ಹೇಗೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ರಿಯಲ್ ಮೀ ನಾರ್ಜೋ 50 ಎ ಬ್ಯಾಂಕ್ ಕೊಡುಗೆ

ರಿಯಲ್ ಮೀ ನಾರ್ಜೋ 50 ಎ 64 ಜಿಬಿ ವೇರಿಯಂಟ್ ನ ಬಿಡುಗಡೆಯ ಬೆಲೆ ರೂ. 12999 ಇದೆ. ಫ್ಲಿಪ್ ಕಾರ್ಟ್ ನಲ್ಲಿ ನೀವು ಈ ಸ್ಮಾರ್ಟ್ ಫೋನ್ ಅನ್ನು ಆಕ್ಸಿಸ್ ಕಾರ್ಡ್ ಕ್ರೆಡಿಟ್ ಕಾರ್ಡ್ ಬಳಸಿ ಖರೀದಿಸಿದರೆ, 583ರೂ.ಗಳ ತ್ವರಿತ ಡಿಸ್ಕೌಂಟ್ ಸಿಗಲಿದೆ. ಒಂದು ವೇಳೆ ನೀವು ಸಂಪೂರ್ಣ ಕೊಡುಗೆಯ ಲಾಭವನ್ನು ಪಡೆದುಕೊಂಡರೆ ನೀವು ರೂ.11,066 ಉಳಿತಾಯ ಮಾಡಬಹುದು.

ಫ್ಲಿಪ್ ಕಾರ್ಟ್ ಸೆಲ್ ನಲ್ಲಿ ರಿಯಲ್ ಮೀ ನಾರ್ಜೋ 50 ಎ ಸ್ಮಾರ್ಟ್ ಫೋನ್ ಮೇಲೆ 10, 800 ರೂ.ಗಳ ಎಕ್ಸ್ ಚೇಂಜ್ ಕೊಡುಗೆ ಕೂಡ ನೀಡಲಾಗುತ್ತಿದೆ. ಆದರೆ, ಈ ಎಕ್ಸ್ ಚೇಂಜ್ ಕೊಡುಗೆಯನ್ನು ಪಡೆದುಕೊಳ್ಳಲು ನಿಮ್ಮ ಹಳೆ ಫೋನ್ ಉತ್ತಮ ಕಂಡೀಶನ್ ನಲ್ಲಿ ಇರಬೇಕು ಮತ್ತು ಅದರ ಮಾಡೆಲ್ ಕೂಡ ಲೇಟೆಸ್ಟ್ ಇರಬೇಕು. ಒಟ್ಟಾರೆ ಹೇಳುವುದಾದರೆ, ಈ ಎಲ್ಲಾ ಕೊಡುಗೆಗಳನ್ನು ಬಳಸಿಕೊಳ್ಳಲು ನೀವು ಯಶಸ್ವಿಯಾದರೆ, ರಿಯಲ್ ಮೀ ನಾರ್ಜೋ 50 ಎ ಅನ್ನು ನೀವು ರೂ.266ಕ್ಕೆ ಖರೀದಿಸಬಹುದು.

Leave A Reply