ಪುಂಜಾಲಕಟ್ಟೆ:ತನ್ನ ಅಂಗಡಿಯಲ್ಲೇ ನೇಣಿಗೆ ಕೊರಳೊಡ್ಡಿದ ಮಾಲೀಕ!! ನೆರಳಕಟ್ಟೆ ಎಂಬಲ್ಲಿ ಮುಂಜಾನೆ ಬೆಳಕಿಗೆ ಬಂದ ಘಟನೆ!!

ಪುಂಜಾಲಕಟ್ಟೆ: ಇಲ್ಲಿನ ನೆರಳಕಟ್ಟೆ ಎಂಬಲ್ಲಿ ವುಡ್ ವರ್ಕ್ಸ್ ಶಾಪ್ ಒಂದನ್ನು ನಡೆಸುತ್ತಿರುವ ವ್ಯಕ್ತಿಯೊರ್ವರು ತನ್ನ ಅಂಗಡಿಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆಯೊಂದು ಬೆಳಕಿಗೆ ಬಂದಿದೆ.

 

ಮೃತ ವ್ಯಕ್ತಿಯನ್ನು ಅಂಗಡಿ ಮಾಲೀಕ ನೇರಳಕಟ್ಟೆ ಕುಲಾಲು ದರ್ಖಾಸು ನಿವಾಸಿ ಹರೀಶ್ ಎಂದು ಗುರುತಿಸಲಾಗಿದ್ದು, ಏಪ್ರಿಲ್ 28 ರ ಮುಂಜಾನೆ ಘಟನೆಯು ಬೆಳಕಿಗೆ ಬಂದಿದೆ.

ಮೃತರು ತನ್ನ ಫರ್ನಿಚರ್ ಶಾಪ್ ನಲ್ಲಿ ಎಲ್ಲಾ ವಿಧದ ಮರದ ಪೀಠೋಪಕರಣಗಳನ್ನು ತಯಾರಿಸುತ್ತಿದ್ದೂ, ಕೆಲವು ಮಂದಿ ಕೆಲಸದಾಳುಗಳು ಕೂಡಾ ಇದ್ದರು. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

Leave A Reply

Your email address will not be published.