ಆರನೇ ತರಗತಿಯ ವಿದ್ಯಾರ್ಥಿನಿಯನ್ನು ಅನ್ಯಧರ್ಮಕ್ಕೆ ಮತಾಂತರಿಸಲು ಯತ್ನ!! | ಗಂಭೀರ ಆರೋಪದ ಹಿಂದಿದೆ ತರಗತಿ ಶಿಕ್ಷಕಿಯ ಕೈವಾಡ
ಇತ್ತೀಚೆಗೆ ದೇಶದಲ್ಲಿ ಮತಾಂತರದ ಹಲವು ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಹಾಗೆಯೇ ತಮಿಳುನಾಡಿನ ತಿರುಪ್ಪೂರಿನ ಸರ್ಕಾರಿ ಶಾಲೆಯ 6ನೇ ತರಗತಿಯ ವಿದ್ಯಾರ್ಥಿನಿಯೊಬ್ಬಳು ಶಿಕ್ಷಕರು ನನ್ನ ಧಾರ್ಮಿಕ ಗುರುತನ್ನು ಹೀಯಾಳಿಸಿ, ಬಲವಂತವಾಗಿ ಮತಾಂತರ ಮಾಡಲು ಯತ್ನಿಸಿದ್ದಾರೆ ಎಂಬ ಗಂಭೀರ ಆರೋಪ ಮಾಡಿದ್ದಾಳೆ.
ಹಣೆಯ ಮೇಲೆ ವಿಭೂತಿ ಹಾಕಿಕೊಂಡಿದ್ದಕ್ಕೆ ಶಿಕ್ಷಕಿ ನನ್ನನ್ನು ವಿಭೂತಿ ಕತ್ತೆ ಎಂದು ಹೀಯಾಳಿಸಿದ್ದಾರೆ. ಅಲ್ಲದೇ ಒಂದು ಬಾರಿ ನನ್ನ ಕೈಯನ್ನು ನೀರಿನಲ್ಲಿರಿಸಿ ಯೇಸುವಿನ ನಾಮವನ್ನು ಬಲವಂತವಾಗಿ ಹೇಳಿಸಿದ್ದಾರೆ. ನಂತರ ತನ್ನ ಕೈಯಲ್ಲಿದ್ದ ನೀರಿನಿಂದ ಹಿಂದೂ ಹುಡುಗಿಯರ ಹೊಟ್ಟೆಯನ್ನು ಮೂರು ಬಾರಿ ಮುಟ್ಟಿಸಿದ್ದಾರೆ ಎಂದು ವಿದ್ಯಾರ್ಥಿನಿ ತಿಳಿಸಿದ್ದಾಳೆ.
ಪ್ರತಿ ದಿನ ವಿದ್ಯಾರ್ಥಿಗಳಿಗೆ ತರಗತಿಯಲ್ಲಿ ಪ್ರಾರ್ಥನೆ ಮಾಡುವಂತೆ ತಿಳಿಸಿದರು. ಒಂದು ದಿನ ತರಗತಿಯಲ್ಲಿ ನಮಗೆ ಪ್ರಾಣವನ್ನು ನೀಡಿ, ನಮ್ಮನ್ನು ರಕ್ಷಿಸುತ್ತಿರುವವರು ಯಾರು ಎಂದು ಶಿಕ್ಷಕಿ ಕೇಳಿದ್ದರು. ಈ ವೇಳೆ ನಾವು ಬೇರೆ, ಬೇರೆ ಹೆಸರುಗಳನ್ನು ಹೇಳಿದ್ದಕ್ಕೆ, ನೀವು ಯೇಸುವಿನ ಹೆಸರನ್ನು ಏಕೆ ಹೇಳಲಿಲ್ಲ ಎಂದು ನಮ್ಮನ್ನು ಪ್ರಶ್ನಿಸಿದ್ದರು ಎಂದು ವಿದ್ಯಾರ್ಥಿನಿ ತಿಳಿಸಿದ್ದಾಳೆ.
ಅದಲ್ಲದೆ, ದೇವರುಗಳಲ್ಲಿ ಬಲಶಾಲಿ ಯಾರು ಎಂದು ಕೇಳಿದ್ದರು. ಅದಕ್ಕೆ ನಾನು ಶಿವ ಎಂದು ಹೇಳಿದ್ದೆ. ಆದರೆ ಅವರು ನನ್ನ ಹೇಳಿಕೆಯನ್ನು ಅಲ್ಲಗಳೆದರು. ಜೀಸಸ್ ದೇವರುಗಳಲ್ಲಿ ಬಲಶಾಲಿ ವಾದಿಸಿದರು ಎಂದು ವಿದ್ಯಾರ್ಥಿನಿ ತನಗಾದ ಅಪಮಾನವನ್ನು ಪೋಷಕರ ಬಳಿ ಹೇಳಿಕೊಂಡಿದ್ದಾಳೆ. ಈ ವಿಚಾರದ ಬಗ್ಗೆ ವಿದ್ಯಾರ್ಥಿನಿ ಪೋಷಕರು, ಶಿಕ್ಷಕಿ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ಸದ್ಯ ಈ ಸಂಬಂಧ ತನಿಖೆ ಆರಂಭಿಸಲಾಗಿದೆ.
ಈ ಘಟನೆ ಸಂಬಂಧ ಪ್ರತಿಕ್ರಿಯಿಸಿದ ಬಿಜೆಪಿ ವಕ್ತಾರರು, ಆಡಳಿತಾರೂಢ ಡಿಎಂಕೆ ಸರ್ಕಾರ ಬಲವಂತದ ಮತಾಂತರದ ಘಟನೆಗಳಿಗೆ ಮೂಕಪ್ರೇಕ್ಷಕವಾಗಿದೆ. ಈ ವಿಚಾರವಾಗಿ ಪೊಲೀಸರು ಮತ್ತು ಸರ್ಕಾರ ಕೂಡಲೇ ಕ್ರಮ ಕೈಗೊಂಡು ಆರೋಪಿಗಳನ್ನು ಬಂಧಿಸಬೇಕು. ಶಾಲಾ ಆಡಳಿತ ಮಂಡಳಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸುತ್ತೇವೆ. ಮತಾಂತರವು ಅತ್ಯಂತ ಅಪಾಯಕಾರಿ. ತಮಿಳುನಾಡಿನಲ್ಲಿ ತಕ್ಷಣವೇ ಮತಾಂತರ ವಿರೋಧಿ ಕಾನೂನು ಜಾರಿಗೆ ತರಬೇಕು ಎಂದು ಒತ್ತಾಯಿಸಿದ್ದಾರೆ.