ಕಾರ್ಕಳ : ಮನೆಯಿಂದ ಹೊರಹೋದ ಮಹಿಳೆ ವಾಪಸು ಬಾರದೇ ನಾಪತ್ತೆ !

Share the Article

ಕಾರ್ಕಳ : ವಿದೇಶದಿಂದ ಬಂದು ಬೆಳ್ಮಣ್ ಗ್ರಾಮದ ತನ್ನ ಪತಿಯ ಸಂಬಂಧಿಕರ ಮನೆಯಲ್ಲಿ ಇದ್ದ ಮಹಿಳೆ ಆಶಾ (32) ಎಂಬುವವರು ದಿಢೀರನೆ ನಾಪತ್ತೆಯಾಗಿದ್ದಾರೆ.

ಎ.25 ರಂದು ಮನೆಯಲ್ಲಿ ಹೇಳದೇ ಹೊರಗೆ ಹೋಗಿದ್ದ ಇವರು, ಅನಂತರ ಹಿಂದಿರುಗಿ ಬಾರದೇ ನಾಪತ್ತೆಯಾಗಿರುವುದಾಗಿ ತಿಳಿದು ಬಂದಿದೆ.

ನಾಪತ್ತೆಯಾಗಿರುವ ಆಶಾ ಎಣ್ಣೆಗಪ್ಪು ಮೈ ಬಣ್ಣದವರಾಗಿದ್ದು, 5 ಅಡಿ 2 ಇಂಚು ಎತ್ತರವಿದ್ದಾರೆ.

ಇವರು ಕನ್ನಡ, ತಮಿಳು, ತುಳು, ಹಿಂದಿ, ಕೊಂಕಣಿ ಭಾಷೆ ಮಾತನಾಡುತ್ತಾರೆ. ಬಿಳಿ, ಕಪ್ಪು ಗೆರೆಯ ತುಂಬು ತೋಳಿನ ಟೀ ಶರ್ಟ್ ಧರಿಸಿರುತ್ತಾರೆ.

ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಮಾಹಿತಿ ಸಿಕ್ಕಿದವರು ಪೊಲೀಸ್ ಠಾಣೆಗೆ ನೀಡಲು ಮನವಿ ಮಾಡಿದ್ದಾರೆ.

Leave A Reply