ಮಂಗಳೂರು : ಕಾಲೇಜು ಕಟ್ಟಡ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಬಂದ ಸಚಿವ ಬಿ.ಸಿ.ನಾಗೇಶ್ ಧಿಕ್ಕಾರ ಕೂಗಿದ ಸಿಎಫ್ ಐ ಕಾರ್ಯಕರ್ತರು | ” ಗೋ ಬ್ಯಾಕ್” ಎಂದ ಪ್ರತಿಭಟನಾಕಾರರು!

ಮಂಗಳೂರಿನ ಹಂಪನಕಟ್ಟೆ ಬಳಿ ಪದವಿ ಪೂರ್ವ ಕಾಲೇಜು ಕಟ್ಟಡ ಶಿಲಾನ್ಯಾಸಕ್ಕೆ ಕಾರ್ಯಕ್ರಮಕ್ಕೆ ಬಂದಿದ್ದ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಆಗಮಿಸಿದ್ದರು. ಈ ಸಂದರ್ಭದಲ್ಲಿ ಸಚಿವ ನಾಗೇಶ್ ಅವರು ಭಾಗವಹಿಸಿದ ಕಾರ್ಯಕ್ರಮಕ್ಕೆ ನುಗ್ಗಲು ಸಿಎಫ್‌ಐ ಕಾರ್ಯಕರ್ತರು ಮುಂದಾಗಿದ್ದಾರೆ.

 

ಆದರೆ ಕಾರ್ಯಕರ್ತರನ್ನು ಪೊಲೀಸರು ರಸ್ತೆಯಲ್ಲೇ ತಡೆದು ನಿಲ್ಲಿಸಿದ್ದಾರೆ. ಕಾರ್ಯಕ್ರಮದ ವೇದಿಕೆಯ ಸ್ವಲ್ಪ ದೂರದಲ್ಲಿಯೇ ಈ ಘಟನೆ ನಡೆದಿದ್ದು, ಸಮವಸ್ತ್ರ ಹಂಚಿಕೆಯಲ್ಲಿ ಸಚಿವರಿಂದ ಗೋಲ್ ಮಾಲ್ ನಡೆದಿದೆ ಎಂದು ಆರೋಪಿಸಿ ಸಿಎಫ್‌ಐ ಪ್ರತಿಭಟನೆ ಮಾಡಲು ಬಂದಿತ್ತು. ಈ ವೇಳೆ ಕಾರ್ಯಕ್ರಮಕ್ಕೆ ನುಗ್ಗುವ ಯತ್ನ ನಡೆದಿದೆ. ಬಿ.ಸಿ. ನಾಗೇಶ್ “ಗೋ ಬ್ಯಾಕ್” ಎಂದು ಘೋಷಣೆ ಕೂಗಿ ಕಾರ್ಯಕ್ರಮಕ್ಕೆ ನುಗ್ಗಲು ಯತ್ನಿಸಿದ್ದರು.

ಸದ್ಯ ಮಂಗಳೂರು ಪುರಭವನದ ಆವರಣದಲ್ಲಿ ಸಿಎಫ್ ಐ ಕಾರ್ಯಕರ್ತರನ್ನ ಪೊಲೀಸರು ಕೂಡಿ ಹಾಕಿದ್ದಾರೆ.

Leave A Reply

Your email address will not be published.