ಹಾರಾಟ ನಡೆಸುತ್ತಿದ್ದ ವಿಮಾನದಲ್ಲಿ ಪೈಲೆಟ್ ಗಳ ಸಾಹಸ!! ವಿಫಲ ಪ್ರಯತ್ನಕ್ಕೆ ವಿಮಾನವೇ ಪತನ!! ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣನದಲ್ಲಿ ವೈರಲ್

Share the Article

ಹಾರಾಟ ನಡೆಸುತ್ತಿರುವಾಗಲೇ ಪೈಲೆಟ್ ಗಳಿಬ್ಬರು ಸಾಹಸ ಮೆರೆಯಲು ಹೋಗಿ ವಿಮಾನ ಪತನಗೊಂಡ ಘಟನೆಯು ಅಮೇರಿಕಾದ ಕ್ಯಾಲಿಫೋರ್ನಿಯಾದಲ್ಲಿ ನಡೆದಿದ್ದು,ಸದ್ಯ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಘಟನೆಯಲ್ಲಿ ರೆಡ್ ಬುಲ್ ನ ಒಂದು ವಿಮಾನ ಪತನಗೊಂಡಿದ್ದು, ಅದೃಷ್ಟವಾಶಾತ್ ಪೈಲೆಟ್ ಪ್ಯಾರಾಚೂಟ್ ಬಳಸಿ ಪ್ರಣಾಪಾಯದಿಂದ ಪಾರಾಗಿದ್ದಾರೆ ಎಂದು ಅಧಿಕಾರಿಗಳು ಘಟನೆಯ ಕುರಿತು ತಿಳಿಸಿದ್ದಾರೆ.

ಹೇಗಿತ್ತು ಸಾಹಸ !?
ಸುಮಾರು 14 ರಿಂದ 15 ಅಡಿ ಎತ್ತರದಲ್ಲಿ ಹಾರಾಟ ನಡೆಸುತ್ತಿದ್ದ ಎರಡು ವಿಮಾನಗಳನ್ನು ನೆಲಕ್ಕೆ ಅಭಿಮುಖಗೊಳಿಸಿ ಪೈಲೆಟ್ ಗಳಿಬ್ಬರು ಒಂದು ವಿಮಾನದಿಂದ ಇನ್ನೊಂದಕ್ಕೆ ಹತ್ತುವುದು ಸಾಹಸವಾಗಿತ್ತು. ಆದರೆ ಈ ವೇಳೆ ಓರ್ವ ಪೈಲೆಟ್ ಹತ್ತುವಾಗ ವಿಫಲಗೊಂಡಿದ್ದು, ವಿಮಾನ ನೆಲಕ್ಕೆ ಅಪ್ಪಳಿಸಿದೆ. ಕೂಡಲೇ ಅಪಾಯ ಅರಿತ ಹಿನ್ನೆಲೆಯಲ್ಲಿ ಯಾವುದೇ ಪ್ರಾಣಹಾನಿ ಉಂಟಾಗಿಲ್ಲ ಎಂದು ತಿಳಿದುಬಂದಿದೆ.ಪೈಲೆಟ್ ಗಳ ಸಾಹಸ ಪ್ರದರ್ಶನದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.

Leave A Reply