ಕೇವಲ ಒಂದು ರೂಪಾಯಿಗೆ ಪೆಟ್ರೋಲ್ ! ಏನು ಈ ಮರ್ಮ ?

ಪೆಟ್ರೋಲ್ ಡಿಸೇಲ್ ದರ ದಿನದಿಂದ ದಿನಕ್ಕೆ ಏರಿಕೆಯಾಗಿ  ದರ ಏರಿಕೆಯು ಜನಸಾಮಾನ್ಯನ ಜೇಬನ್ನು ಸುಡುತ್ತಿರುವಾಗಲೇ ಕೇವಲ 1 ರೂ.ಗೆ ಲೀಟರ್‌ ಪೆಟ್ರೋಲ್‌ ಸಿಕ್ಕಿದರೆ ಹೇಗಾಗಬೇಡ? ಈ ಊರಿನಲ್ಲಿ ಈ ದಿನ 1 ರೂಪಾಯಿಗೆ ಪೇಟ್ರೊಲ್ ಸಿಕ್ಕಿದೆ. ಹೌದು 1.ರೂಪಾಯಿ. ಅದು ಹೇಗೆ? ಇಲ್ಲಿದೆ ನೋಡಿ

ಮಹಾರಾಷ್ಟ್ರದ ಥಾಣೆಯ ಕೈಲಾಶ್‌ ಪೆಟ್ರೋಲ್‌ ಪಂಪ್‌ ಸೋಮವಾರ ಎಲ್ಲ ಗ್ರಾಹಕರಿಗೂ ಕೇವಲ 1 ರೂ. ಗೆ ಪೆಟ್ರೋಲ್‌ ಮಾರಾಟ ಮಾಡಿದೆ. ಪೇಟ್ರೋಲ್ ಪಂಪ್ ಕೊಡುಗೆ ಅಲ್ಲ ಇದು ಇವರ ಕೊಡುಗೆ !

ಸ್ಥಳೀಯ ಶಿವಸೇನೆ ಶಾಸಕ ಪ್ರತಾಪ್‌ ಸರ್‌ನಾಯ್ಕ ಅವರ ಜನ್ಮದಿನದ ಹಿನ್ನೆಲೆಯಲ್ಲಿ ಸೋಮವಾರದಂದು ಶಿವಸೇನೆ ಕಾರ್ಯಕರ್ತರು ಗ್ರಾಹಕರಿಗೆ 1 ರೂ. ಬೆಲೆಯಲ್ಲಿ ಪೆಟ್ರೋಲ್‌ ಮಾರಿದ್ದಾರೆ.

ಇದು ಕೇವಲ ಒಂದು ದಿನದ ಆಫ‌ರ್‌ ಆಗಿದ್ದು , ಜನ್ಮದಿನಾಚರಣೆ ಜತೆ ಪ್ರತಿಭಟನ ಸೂಚಕವಾಗಿಯೂ ಈ ಆಫ‌ರ್‌ ನೀಡಲಾಗಿತ್ತೆಂದು ಶಿವಸೇನೆ ತಿಳಿಸಿದೆ.

Leave A Reply

Your email address will not be published.