ಹೆತ್ತು, ಹೊತ್ತು ಸಾಕಿದ ಮಗ ಡ್ರಗ್ಸ್, ಮದ್ಯ ವ್ಯಸನಿಯಾದ | ಮಗನ ಹಿಂಸೆ ತಾಳಲಾರದೆ ತಂದೆ-ತಾಯಿ ಕೊನೆಗೆ ‌ಮಾಡಿದ್ದಾದರೂ ಏನು?

ಪೋಷಕರಿಗೆ ತಮ್ಮ ಮಗುವಿನ ಮೇಲೆ ಜೀವವನ್ನೇ ಇಟ್ಟುಕೊಂಡಿರುತ್ತಾರೆ. ಮಗು ಹುಟ್ಟಿದ ಮೊದಲ ದಿನದಿಂದ ಆ ಮಗು ಎಷ್ಟೇ ದೊಡ್ಡದಾದರೂ ಪೋಷಕರ ಕಾಳಜಿ ಹಾಗೆಯೇ ಇರುತ್ತದೆ.

 

ಆದರೆ ಕೆಲವು ಮಕ್ಕಳು ತಾವಂದುಕೊಂಡಂತೆ ಬೆಳೆಯುವುದಿಲ್ಲ. ಹಾಗಾಗಿ ಪೋಷಕರು ಹತಾಶೆಗೊಳ್ಳುವುದು ಸಹಜ. ಈ ಹತಾಶೆಯ ಪರಿಣಾಮದ ಘಟನೆಯೇ ಇಲ್ಲಿ ನಾವು ಹೇಳಲಿಕ್ಕೆ ಹೊರಟಿರೋದು.

ಹೌದು, ಇಲ್ಲೊಂದು ಕಡೆಯಲ್ಲಿ ಪೋಷಕರು ಮುದ್ದಾಗಿ ಬೆಳೆಸಿದ್ದ ಮಗ ಹಾದಿ ತಪ್ಪಿದ್ದಾನೆ. ಮದ್ಯಕ್ಕೆ ಅಡಿಕ್ಟ್ ಆಗಿದ್ದಾನೆ. ಮಗನ ಮೇಲೆ ಪ್ರಾಣವೇ ಇಟ್ಟುಕೊಂಡಿದ್ದ ಪೋಷಕರು ಹತಾಶರಾಗಿದರು. ಹಾಗಾದರೆ ನೊಂದ ಮನಸ್ಸಿನ ಈ ತಂದೆತಾಯಿ ಮಾಡಿದ್ದೇನು? ಬೆಚ್ಚಿ ಬೀಳೀಸೋ ನಿರ್ಧಾರ ತೆಗೆದುಕೊಂಡರು ಪೋಷಕರು.

ಈ ಘಟನೆ ನಡೆದಿರೋದು ತೆಲಂಗಾಣದಲ್ಲಿ. ಮದ್ಯ ಮತ್ತು ಮಾದಕ ವ್ಯಸನಿ ಮಗನ ಕೈಯಲ್ಲಿ ದಿನನಿತ್ಯದ ನರಳಾಟವನ್ನು ಸಹಿಸಲಾಗದೆ, ತೆಲಂಗಾಣದಲ್ಲಿ ದಂಪತಿಗಳು ಆತನನ್ನು ಕತ್ತು ಹಿಸುಕಿ ಕೊಂದಿದ್ದಾರೆ.
ಇಬ್ಬರು ಪುತ್ರರ ಸಹಾಯದಿಂದ ಇನ್ನೊಬ್ಬ ಪುತ್ರನ ಕೊಂದೇಬಿಟ್ಟರು ಈ ಪೋಷಕರು.

ಸೋಮವಾರ ಈ ಆಘಾತಕಾರಿ ಘಟನೆ ನಡೆದಿದೆ. ಜಿ.ಬಾಲಯ್ಯಗೌಡ ಮತ್ತು ಆತನ ಪತ್ನಿ ಲಾವಣ್ಯ ತಮ್ಮ ಇಬ್ಬರು ಪುತ್ರರ ಸಹಾಯದಿಂದ 23 ವರ್ಷದ ನಿಖಿಲ್‌ನನ್ನು ಹತ್ಯೆ ಮಾಡಿದ್ದಾರೆ.

ಪೊಲೀಸರ ಪ್ರಕಾರ, ಹೈದರಾಬಾದ್‌ನಿಂದ ಸುಮಾರು 160 ಕಿಮೀ ದೂರದಲ್ಲಿರುವ ಕೋನರಾವ್‌ಪೇಟೆ ಮಂಡಲದ ಧರ್ಮರಾಮ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮದ್ಯ ಮತ್ತು ಮಾದಕ ವ್ಯಸನಿಯಾಗಿದ್ದ ನಿಖಿಲ್ ಸೃಷ್ಟಿಸುತ್ತಿರುವ ಸಮಸ್ಯೆಗಳಿಂದ ಪೋಷಕರು ಬೇಸತ್ತಿದ್ದರು. ಅವರ ಜತೆ ಜಗಳವಾಡಿಕೊಂಡು ದಿನವೂ ಹಿಂಸೆ ನೀಡುತ್ತಿದ್ದ.

ಪೊಲೀಸ್ ಅಧಿಕಾರಿಯಾಗಿರುವ ನಿಖಿಲ್ ಒಮಾನ್ ಮತ್ತು ಮಲೇಷ್ಯಾದಲ್ಲಿ ಮೂರು ವರ್ಷಗಳ ಕಾಲ ಕೆಲಸ ಮಾಡಿದ್ದರು. ಎರಡು ವರ್ಷಗಳ ಹಿಂದೆ ಊರಿಗೆ ಬಂದಿದ್ದ ಆತ ಚಾಲಕನಾಗಿ ಕೆಲಸ ಮಾಡುತ್ತಿದ್ದ.

ಅವನು ಮದ್ಯ ಮತ್ತು ಮಾದಕ ವ್ಯಸನಕ್ಕೆ ಒಳಗಾಗಿದ್ದರಿಂದ, ಅವನ ಪೋಷಕರು ಕೌನ್ಸಿಲಿಂಗ್ ಮಾಡುವಂತೆ ಮನವಿಯೊಂದಿಗೆ ಪೊಲೀಸರನ್ನು ಸಂಪರ್ಕಿಸಿದರು. ಆದರೆ, ಪೊಲೀಸರ ಕೌನ್ಸೆಲಿಂಗ್ ಆತನಲ್ಲಿ ಯಾವುದೇ ಬದಲಾವಣೆ ತರಲು ವಿಫಲವಾಗಿತ್ತು.

ಸೋಮವಾರ ನಿಖಿಲ್ ಕುಡಿದು ಮನೆಗೆ ಬಂದು ತಂದೆಯೊಂದಿಗೆ ಜಗಳವಾಡಿದ್ದಾನೆ. ತಂದೆ ನಿಂದಿಸಿದ್ದರಿಂದ ಕೋಪಗೊಂಡ ನಿಖಿಲ್ ಆತನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆಗೆ ಯತ್ನಿಸಿದ್ದಾನೆ. ಕೂಡಲೇ ತಂದೆ ತನ್ನನ್ನು ಉಳಿಸಿಕೊಳ್ಳಲು ಪ್ರಯತ್ನಿಸಿ ಮಗನ ಮೇಲೆ ದಾಳಿ ಮಾಡಿದ್ದಾನೆ

ದಾಳಿ ಮಾಡಬಹುದೆಂಬ ಭಯದಿಂದ ಆತನ ತಂದೆ-ತಾಯಿ ಹಾಗೂ ಇಬ್ಬರು ಸಹೋದರರಾದ ವಂಶಿ ಮತ್ತು ಅಜಯ್ ಅವರನ್ನು ಬಿಗಿಯಾಗಿ ಹಿಡಿದಿದ್ದರು. ನಿಖಿಲ್ ಕುತ್ತಿಗೆಗೆ ಹಗ್ಗ ಹಾಕಿ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ. ಗ್ರಾಮ ಕಂದಾಯ ಅಧಿಕಾರಿ (ವಿಆರ್‌ಒ) ನೀಡಿದ ದೂರಿನ ಮೇರೆಗೆ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿರುವುದಾಗಿ ಸರ್ಕಲ್ ಇನ್ಸ್ ಪೆಕರ್ ಶ್ರೀಲತಾ ತಿಳಿಸಿದ್ದಾರೆ.

Leave A Reply

Your email address will not be published.