ಆರ್ಯಾಪು : ವಳತಡ್ಕ ಶ್ರೀಮಹಮ್ಮಾಯಿ ದೇವಸ್ಥಾನದ 25ನೇ ವಾರ್ಷಿಕ ಮಾರಿಪೂಜೆಯ ಆಮಂತ್ರಣ ಪತ್ರಿಕೆ ಬಿಡುಗಡೆ
ಪುತ್ತೂರು : ಆರ್ಯಾಪು ಗ್ರಾಮದ ವಳತ್ತಡ್ಕ ಶ್ರೀ ಮಹಮ್ಮಾಯಿ ದೇವಸ್ಥಾನದ ಇಪ್ಪತ್ತೈದನೆಯ ವಾರ್ಷಿಕ ಮಾರಿ ಪೂಜೆಯ ಅಮಂತ್ರಣ ಪತ್ರಿಕೆಯನ್ನು ದೇವಸ್ಥಾನದ ಗೌರವಾಧ್ಯಕ್ಷರಾದ ಪುರುಷೋತ್ತಮ ಶೆಟ್ಟಿ ಅವರು ಬಿಡುಗಡೆ ಮಾಡಿದರು.
ಮೇ.5 ರಿಂದ ಮೇ.6ರ ವರೆಗೆ ಶ್ರೀ ವೆಂಕಟರಮಣ ದೇವರ ಹರಿಸೇವೆ, ಮಹಮ್ಮಾಯಿ ಅಮ್ಮನವರ ಮಾರಿ ಪೂಜೆ ಹಾಗೂ ಪರಿವಾರ ದೈವಗಳಿಗೆ ವಿಶೇಷ ಪೂಜಾ ಕಾರ್ಯಕ್ರಮಗಳು ನೆರವೇರಲಿದೆ.
ಅಮಂತ್ರಣ ಪತ್ರಿಕೆಯ ಬಿಡುಗಡೆ ಈ ಸಂದರ್ಭದಲ್ಲಿ ಕುಟುಂಬದ ಹಿರಿಯ ಸದಸ್ಯರಾದ ಬಾಬು ದರ್ಖಾಸು,ಶ ಚನಿಯಪ್ಪ ವಳತ್ತಡ್ಕ,ಶ್ರೀಮತಿ ಸುಂದರಿ ವಳತ್ತಡ್ಕ, ಶ್ರೀ ಮಹಮ್ಮಾಯಿ ಸೇವಾ ಸಮಿತಿ ಇದರ ಅಧ್ಯಕ್ಷರಾದ ನಾಗರಾಜ್ ಎಸ್ ಲೃಾಲ ಬೆಳ್ತಂಗಡಿ, ಕೋಶಾಧಿಕಾರಿ ಪಕೀರ ವಳತ್ತಡ್ಡ, ಸಮಿತಿ ಸದಸ್ಯರಾದ ಶ್ರೀ ದಿನೇಶ್ ವಳತ್ತಡ್ಡ,ಶ್ರೀ ರಮೇಶ್ ವಳತ್ತಡ್ಕ,ಪದ್ಮ ವಳತ್ತಡ್ಕ, ಸಚಿನ್ ಕುಮಾರ್ ವಳತ್ತಡ್ಕ, ದೀಪ್ತಿ ಕುಮಾರಿ ಮಾ! ಕಿಶನ್ ಕುಮಾರ್ ಹಾಗು ಸ್ಥಳೀಯರಾದ ಶ್ರೀ ಚನ್ನಪ್ಪ ವಳತ್ತಡ್ಕ ಮೊದಲಾದವರು ಉಪಸ್ಥಿತರಿದ್ದರು.
ಮೇ.5ರಂದು ರಾತ್ರಿ 7.00 ರಿಂದ ಶ್ರೀ ಮಹಮ್ಮಾಯಿ ಸೇವಾ ಸಮಿತಿ ಭಜನಾ ಮಂಡಳಿ ಕಳ್ಳಿಗೆ ಪಚ್ಚಿನಡ್ಕ ಬಂಟ್ವಾಳ ಇವರಿಂದ ಭಜನೆ ಕಾರ್ಯಕ್ರಮ. ನಂತರ ಮಹಾ ಪೂಜೆ, ಅನ್ನಸಂತರ್ಪಣೆ ಮತ್ತು ರಾತ್ರಿ 9.00 ಗಂಟೆಗೆ ನವಶಕ್ತಿ ವೈಭವ ಕನ್ನಡ ಭಕ್ತಿ ಪ್ರಧಾನ ಚಲನಚಿತ್ರ ಪ್ರದರ್ಶನ ನಡೆಯಲಿದೆ.
ಮೇ.6ರಂದು ಬೆಳಿಗ್ಗೆ 7.00 ಗಂಟೆಗೆ ಗಣಹೋಮ. 9.45 ದೇವರ ಭಂಡಾರ ಶುದ್ಧೀಕರಣ ಮಧ್ಯಾಹ್ನ 12 ಗಂಟೆಗೆ ಶ್ರೀ ವೆಂಕಟರಮಣ ದೇವರ ಹರಿಸೇವೆ. ನಂತರ ಪ್ರಸಾದ ವಿತರಣೆ. ನಂತರ ಸಾರ್ವಜನಿಕ ಅನ್ನಸಂತರ್ಪಣೆ ರಾತ್ರಿ 8.00 ಗಂಟೆಗೆ ಶ್ರೀ ಮಹಮ್ಮಾಯಿ ಅಮ್ಮನವರ ಮಾರಿ ಪೂಜೆ ಹಾಗೂ ಪರಿವಾರ ದೈವಗಳಿಗೆ ಪೂಜೆ ನಡೆಯಲಿದೆ.