ಕಾಶಿಯಾತ್ರೆ ಮಾಡಲು ದೊರೆಯುತ್ತದೆ ಸಬ್ಸಿಡಿ ; ಇಲ್ಲಿದೆ ವಿವರ
ಕಾಶಿ ಯಾತ್ರೆಗೆ ಹೋಗುವುದು ಅಂದರೆ ಸಕಲ ಹಿಂದೂ ಜನರಿಗೆ ಜೀವಮಾನದ ಕನಸು ಆಗಿರುತ್ತದೆ. ಹೀಗಾಗಿ ಸಾಯೋದ್ರೊಳಗೆ ಒಮ್ಮೆಯಾದರೂ ಕಾಶಿ ಯಾತ್ರೆಗೆ ಹೋಗಲು ಬಹುತೇಕ ಆಸ್ತಿಕ ಭಕ್ತರು ಇಚ್ಛೆ ಹೊಂದಿರುತ್ತಾರೆ.
ಹಾಗಾಗಿ ಕರ್ನಾಟಕ ರಾಜ್ಯ ಸರ್ಕಾರವು ಬಜೆಟ್ನಲ್ಲಿ ಘೋಷಿಸಿದಂತೆ ಕಾಶಿ ಯಾತ್ರೆಗೆ ರೂ 5000 ಸಹಾಯಧನ ನೀಡುವುದಾಗಿ ಘೋಷಿಸಿದೆ. ಕಾಶಿ ಯಾತ್ರಾ ಸಬ್ಸಿಡಿ ಯೋಜನೆ 2022 ರ ಪ್ರಯೋಜನಗಳನ್ನು ಕಾಶಿ ಯಾತ್ರೆಗೆ ಖರ್ಚು ಮಾಡಲು ಹಣವಿಲ್ಲದ ಆರ್ಥಿಕ ದುರ್ಬಲ ವರ್ಗದ ಜನರಿಗೆ ಎಂದೇ ರೂಪಿಸಲಾಗಿದೆ.
ಕಾಶಿ ಯಾತ್ರಾ ಸಬ್ಸಿಡಿ ಯೋಜನೆಗೆ ಅರ್ಹತೆಯ ಮಾನದಂಡಗಳು ಇಂತಿವೆ; ಅಭ್ಯರ್ಥಿಯು ಕರ್ನಾಟಕ ರಾಜ್ಯದ ಖಾಯಂ ನಿವಾಸಿಯಾಗಿರಬೇಕು.ಅರ್ಹ ಭಕ್ತರಿಗೆ ಕಾಶಿ ಯಾತ್ರೆಗೆ 5000 ರೂ. ಈ ಮೊತ್ತವನ್ನು ಕಾಶಿ ಯಾತ್ರೆಯ ವೆಚ್ಚವಾಗಿ ಬಳಸಬಹುದು. ಪ್ರಯೋಜನಗಳನ್ನು ಪಡೆಯಲು ಅಧಿಕೃತ ಪ್ರಕಟಣೆಯ ನಂತರ ನೀವು ಎಲ್ಲಾ ಅರ್ಹತಾ ಮಾನದಂಡಗಳನ್ನು ಪರಿಶೀಲಿಸಬೇಕಾಗುತ್ತದೆ.
ಕಾಶಿ ಯಾತ್ರೆಯ ಸಬ್ಸಿಡಿ ಯೋಜನೆಗಾಗಿ ತಮ್ಮ ನೋಂದಣಿಯನ್ನು ಮಾಡಿಕೊಳ್ಳಲು ಹಲವರು ಈಗಾಗಲೇ ಬಯಸಿದ್ದಾರೆ. ಆದರೆ ಇದೀಗ ಸರ್ಕಾರ ಕಾಶಿ ಯಾತ್ರೆಯ ಸಹಾಯಧನದ ಆದೇಶ ಹೊರಡಿಸಿದ್ದು ಮುಂದಿನ ದಿನಗಳಲ್ಲಿ ಅಧಿಕೃತ ಅರ್ಜಿ ನಮೂನೆ ಬಿಡುಗಡೆಯಾಗಲಿದೆ. ಕಾಶಿ ಯಾತ್ರೆ ಸಹಾಯಧನದ ಅರ್ಜಿ ಬಿಡುಗಡೆಯ ಕುರಿತು ಮುಜರಾಯಿ ಇಲಾಖೆಯ ಅಧಿಕೃತ ವೆಬ್ಸೈಟ್ ಗಮನಿಸುತ್ತಿರಬೇಕು