ದ್ವಿತೀಯ PUC ಪರೀಕ್ಷೆಯ ಫಲಿತಾಂಶ ಜೂನ್ ಕೊನೆಯ ವಾರದಲ್ಲೇ ಹೊರಬೀಳಲಿದೆ!!?

ಬೆಂಗಳೂರು: ರಾಜ್ಯದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಈಗಾಗಲೇ ನಡೆಯುತ್ತಿದ್ದು, ಈ ಬಾರಿ ಪರೀಕ್ಷೆಯ ಫಲಿತಾಂಶ ಬೇಗನೆ ನೀಡಲು ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಪಿಯುಸಿ ಪರೀಕ್ಷೆಯ ಫಲಿತಾಂಶ ಜೂನ್ ಕೊನೆಯ ವಾರದಲ್ಲಿ ಹೊರಬೀಳಲಿದೆ ಎಂದು ಪಿಯು ಮಂಡಳಿ ನಿರ್ದೇಶಕರು ತಿಳಿಸಿದ್ದಾರೆ.

ಪ್ರತಿ ವರ್ಷ ಮಾರ್ಚ್, ಏಪ್ರಿಲ್ ನಲ್ಲಿ ಪಿಯು ಪರೀಕ್ಷೆ ನಡೆಯುತ್ತಿತ್ತು. ಆದರೆ ಈ ವರ್ಷ ಏಪ್ರಿಲ್, ಮೇ ತಿಂಗಳಲ್ಲಿ ಪರೀಕ್ಷೆ ನಡೆಯುತ್ತಿದೆ.ಹೀಗಾಗಿ ಉನ್ನತ ಶಿಕ್ಷಣಕ್ಕೆ ಹೋಗಲು ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ PU ಫಲಿತಾಂಶ ಬೇಗ ನೀಡಲು ರಜಾ ದಿನಗಳಲ್ಲೂ ಮೌಲ್ಯಮಾಪನ ಮಾಡಲು ನಿರ್ಧರಿಸಲಾಗಿದೆ.ಮೊದಲಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಮೌಲ್ಯಮಾಪಕರ ನಿಯೋಜನೆ ಮಾಡಲಾಗಿದ್ದು,ಮೇ 20ರಿಂದ ಜೂನ್ 15ರೊಳಗೆ ಮೌಲ್ಯಮಾಪನ ಕಾರ್ಯ ಪೂರ್ಣಗೊಳ್ಳಲಿದೆ.

ಈವರೆಗೆ ಪರೀಕ್ಷೆ ಮುಗಿದ ನಂತರ ಮೌಲ್ಯಮಾಪನ ಮಾಡಲಾಗುತ್ತಿತ್ತು, ಈ ಬಾರಿ ಒಂದೊಂದು ಪರೀಕ್ಷೆ ಮುಗಿಯುತ್ತಿದ್ದಂತೆ ಮೌಲ್ಯಮಾಪನ ಮಾಡಲಾಗುತ್ತಿದೆ.ಕಳೆದ ವರ್ಷ ಕೊರೊನಾದಿಂದ ಫಲಿತಾಂಶ 1 ತಿಂಗಳು ತಡವಾಗಿತ್ತು.ಈ ಬಾರಿ ಕೇಂದ್ರದ ಪರೀಕ್ಷೆಗಳಿಗೆ ಅನುಕೂಲವಾಗುವಂತೆ ತ್ವರಿತಗತಿಯಲ್ಲಿ ರಿಸಲ್ಟ್ ನೀಡಲಾಗುತ್ತೆ ಎಂದು ಬೆಂಗಳೂರಿನಲ್ಲಿ PU ಮಂಡಳಿ ನಿರ್ದೇಶಕ ಆರ್.ರಾಮಚಂದ್ರನ್ ತಿಳಿಸಿದ್ದಾರೆ.

Leave A Reply

Your email address will not be published.