ರೋಸ್ ವಾಟರ್ ಮನೆಯಲ್ಲೇ ತಯಾರಿಸಲು ಇಲ್ಲಿದೆ ಸರಳ ವಿಧಾನ
ರೋಸ್ ವಾಟರ್ ಹೆಂಗಳೆಯರ ಮನಗೆದ್ದಿದ್ದು ಹಲವಾರು ಜನರು ಇದನ್ನು ಬಳಸುತ್ತಾರೆ. ಮನೆಯಲ್ಲೇ ಸುಲಭವಾಗಿ ತಯಾರಿಸಲು ಇಲ್ಲಿದೆ ರೆಸಿಪಿ
ರೋಸ್ ವಾಟರ್ ನಿಮ್ಮ ಸ್ಕಿನ್ ಗೆ ಬ್ಯೂಟಿ ಫ್ರೆಂಡ್ ಅಂತಾನೆ ಹೇಳಬಹುದು. ನೈಸರ್ಗಿಕವಾಗಿರೋ ಈ ರೋಸ್ ವಾಟರ್ ಬಳಸೋದ್ರಿಂದ ನಿಮ್ಮ ಚರ್ಮ ಸಮಸ್ಯೆಗಳಿಗೆ ಪರಿಹಾರ ಮತ್ತು ಮುಖದ ಕಾಂತಿ ಹೆಚ್ಚಿಸಬಹುದು.
ಮಾಡುವ ವಿಧಾನ
*ಕೆಂಪು ಬಣ್ಣದ ಪರಿಮಳ ಭರಿತ ಗುಲಾಬಿಗಳನ್ನು ಹಾರಿಸಿಕೊಳ್ಳಿ. ಅದರಲ್ಲೂ ನೀವು ಮನೆಯಲ್ಲಿ ಗುಲಾಬಿ ಬೆಳಸಿದ್ದರೆ ಇನ್ನೂ ಒಳ್ಳೆಯದು.
*ಗುಲಾಬಿಗಳನ್ನು ಮೂರ್ನಾಲ್ಕು ಬಾರಿ ಶುದ್ಧವಾದ ನೀರಿನಿಂದ ಚೆನ್ನಾಗಿ ತೊಳೆಯಿರಿ. ನಂತರ ಅದರ ದಳಗಳನ್ನು ತೆಗೆದು ಇಟ್ಟುಕೊಳ್ಳಿ.
*ಒಂದು ಪಾತ್ರೆಯಲ್ಲಿ ನೀರನ್ನು ಚೆನ್ನಾಗಿ ಕಾಯಿಸಿ. ನಂತರ ಒಲೆಯನ್ನು ಆರಿಸಿ ಬಿಡಿ. ಈ ಬಿಸಿನೀರನ್ನು ಒಲೆಯಿಂದ ಇಳಿಸಿ ದ ನಂತರ ತೊಳೆದ ಗುಲಾಬಿ ದಳಗಳನ್ನು ಹಾಕಿ ಮುಚ್ಚಳ ಮುಚ್ಚಿ ಒಂದು ಅರ್ಧ ಗಂಟೆ ಹಾಗೆ ಬಿಡಿ.
*ನಂತರ ಗುಲಾಬಿ ಈ ನೀರನ್ನು ಸೋಸಿ ಒಂದು ಡಬ್ಬಿಯಲ್ಲಿ ಶೇಖರಿಸಿ. ಈಗ ರೋಸ್ ವಾಟರ್ ಪರಿಮಳ ವಾಗಿಯೂ ಶುದ್ದವಾಗಿಯಯೂ ಇರುತ್ತದೆ.