ಚಿನ್ನಕ್ಕೂ ಅಂಟಿದ ಧರ್ಮದ ಲೇಪನ !! | ರಾಜ್ಯದಲ್ಲಿ ಅಕ್ಷಯ ತೃತೀಯ ಪ್ರಯುಕ್ತ “ಹಿಂದೂಗಳ ಬಳಿಯೇ ಚಿನ್ನ ಖರೀದಿ” ಮೆಗಾ ಅಭಿಯಾನ ಆರಂಭ

ಹಲಾಲ್, ಜಟ್ಕಾ, ಮ್ಯಾಂಗೋ ವಾರ್ ಬಳಿಕ ಇದೀಗ ಹಿಂದೂಗಳ ಇನ್ನೊಂದು ವಾರ್ ಆರಂಭವಾಗಿದೆ. ಹಿಂದೂಗಳ ಅಕ್ಷಯ ತೃತೀಯ ಮೆಗಾ ಅಭಿಯಾನ ಶುರುವಾಗಿದ್ದು, ಹಿಂದೂಗಳ ಬಳಿಯೇ ಚಿನ್ನ ಖರೀದಿಗಾಗಿ ಕ್ಯಾಂಪೈನ್ ಆರಂಭವಾಗಿದೆ.

ಹೌದು. ಇದೀಗ ರಾಜ್ಯದಲ್ಲಿ ಧಾರ್ಮಿಕ ದಂಗಲ್ ಮತ್ತೆ ಮುಂದುವರಿದಿದೆ. ಹಿಜಾಬ್ ನಿಂದ ಶುರುವಾದ ಧಾರ್ಮಿಕ ದಂಗಲ್, ಈಗ ಅಕ್ಷಯ ತೃತೀಯದ ಚಿನ್ನಕ್ಕೂ ಅಂಟಿಕೊಂಡಿದೆ. ಯುಗಾದಿಯಲ್ಲಿ ಹೇಗೆ ಹಲಾಲ್ ಕಟ್ ವಿರೋಧಿಸಿದರೋ ಹಾಗೇಯ ಮತ್ತೊಂದು ಅಭಿಯಾನಕ್ಕೆ ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಕರೆ ನೀಡಿದ್ದಾರೆ.


Ad Widget

Ad Widget

Ad Widget

ಅಕ್ಷಯ ತೃತೀಯಕ್ಕೆ ಚಿನ್ನ ಖರೀದಿ ಮಾಡುವವರ ಸಂಖ್ಯೆ ಹೆಚ್ಚು. ಅದಕ್ಕಾಗಿ ಅಕ್ಷಯ ತೃತೀಯ ದಿನ ಹಿಂದೂಗಳ ಚಿನ್ನದಂಗಡಿಯಲ್ಲೇ ಚಿನ್ನ ಖರೀದಿಸಿ. ರಾಜ್ಯದಲ್ಲಿ ಕೇರಳ ವ್ಯಾಪಾರಿಗಳ ಹಲವು ಚಿನ್ನದಂಗಡಿಗಳಿವೆ. ಚಿನ್ನ ಖರೀದಿ ಮಾಡುವಾಗ ಯಾವ ಧರ್ಮದವರ ಅಂಗಡಿ ಎಂದು ನೋಡಿ ಖರೀದಿಸಿ. ಅನ್ಯ ಧರ್ಮದವರ ಬಳಿ ಚಿನ್ನ ಖರೀದಿ ಬೇಡವೇ ಬೇಡ ಎಂಬ ಹೊಸ ಅಭಿಯಾನ ಶುರುವಾಗಿದೆ.

ಮುಸ್ಲಿಂ ಜ್ಯುವೆಲ್ಲರಿ ಅಂಗಡಿಯಿಂದ ಚಿನ್ನ ಖರೀದಿಸದಂತೆ ಹಿಂದೂ ಸಂಘಟನೆಗಳು ಎಚ್ಚರಿಕೆ ನೀಡಿವೆ. ಈ ಕುರಿತಾದ ಟ್ವಿಟರ್ ಅಭಿಯಾನ ರಾಜ್ಯದಲ್ಲಿ ಭಾರಿ ಜೋರಾಗಿ ಸದ್ದು ಮಾಡುತ್ತಿದೆ. ಈ ಟ್ವಿಟ್ಟರ್ ಅಭಿಯಾನಕ್ಕೆ ಶ್ರೀರಾಮಸೇನೆ ತನ್ನ ಬೆಂಬಲ ನೀಡಿದೆ. ಹೀಗೆ ರಾಜ್ಯದಲ್ಲಿ ಒಂದರ ಮೇಲೊಂದು ಧರ್ಮ ಸಂಘರ್ಷಗಳು ನಡೆಯುತ್ತಲೇ ಇದ್ದು, ಇದರ ಕಾವು ಇನ್ನೂ ಮುಂದುವರೆಯುವುದು ಖಚಿತ ಎಂದೇ ಹೇಳಬಹುದು.

Leave a Reply

error: Content is protected !!
Scroll to Top
%d bloggers like this: