ಮಂಗಳೂರು : ಬಸ್ಸಿನಲ್ಲಿ ಬಾಲಕಿಗೆ ಮೊಬೈಲ್ ನಂಬರ್ ಬರೆದು ಚೀಟಿ ಕೊಟ್ಟ ಕಂಡಕ್ಟರ್!!

Share the Article

ಮಂಗಳೂರು : ಬಸ್ಸಿನ ಕಂಡಕ್ಟರ್ ನೋರ್ವ ಅಪ್ರಾಪ್ತ ಬಾಲಕಿಗೆ ಟಿಕೆಟ್ ನೀಡುವ ಸಂದರ್ಭ, ತನ್ನ ಮೊಬೈಲ್ ನಂಬರ್ ನೀಡಿದ ಘಟನೆಯೊಂದು ನಗರದ ಬೊಂದೆಲ್ ನಲ್ಲಿ ನಡೆದಿದೆ. ಇದನ್ನು ತಿಳಿದ ಬಾಲಕಿಯ ತಾಯಿ ಹಾಗೂ ಸ್ಥಳೀಯರು ಸೇರಿ ಕಂಡಕ್ಟರ್ ಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ.

ಕಂಡಕ್ಟರ್ ಕೆಲ ದಿನಗಳ ಹಿಂದೆ ತಾನು ಕಾರ್ಯ ನಿರ್ವಹಿಸುತ್ತಾ ಇರುವ ಬಸ್ ನಲ್ಲಿ ಪ್ರಯಾಣಿಸಿದ ಬಾಲಕಿಗೆ ನಂಬರ್ ನೀಡಿದ್ದು, ನಂತರ ಆ ಬಾಲಕಿ ತನ್ನ ತಾಯಿಗೆ ಈ ವಿಷಯ ತಿಳಿಸಿದ್ದು, ನಂತರ ಈ ಘಟನೆ ನಡೆದಿದೆ. ಕಂಡಕ್ಟರ್ ಗೆ ಹಿಗ್ಗಾಮುಗ್ಗಾ ಥಳಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಇದೀಗ ವೈರಲ್ ಆಗಿದೆ.

ಮಂಗಳೂರಿನಲ್ಲಿ ಬೊಂದೆಲ್ ನಲ್ಲಿನ ಬಸ್ ಸರ್ವಿಸ್ ಒಂದರಲ್ಲಿ ಕಂದಕ್ಟ್ರ ಈ ಚೀಟಿ ಕರಾಮತ್ತು ನಡೆದಿತ್ತು. 8 ನೇ ತರಗತಿ ಓದುತ್ತಿರುವ ಅಪ್ರಾಪ್ತ ಬಾಲಕಿ ಕೇವಲ ಒಂದೇ ಬಾರಿ ಆ ಬಸ್ ನಲ್ಲಿ ಬಂದಿದ್ದು, ಆಗಲೇ ಬಸ್ ಟಿಕೇಟ್ ನಲ್ಲಿಯೇ ತನ್ನ ಮೊಬೈಲ್ ನಂಬರ್ ಅನ್ನು ಬರೆದು ಫೋನ್ ಮಾಡುವಂತೆ ಬೆರಳ ಸನ್ನೆ ಮಾಡಿದ್ದ. ಅಲ್ಲದೇ ಕರೆ ಮಾಡಿದಾಗ ಮನೆಯಲ್ಲಿ ಯಾರಿದ್ದಾರೆ ಎಂದೆಲ್ಲ ವಿಚಾರಿಸಿದ್ದಾರೆ. ಎಂದು ದೂರುತ್ತಿರುವುದು ವೀಡಿಯೋ ದಲ್ಲಿ ರೆಕಾರ್ಡ್ ಆಗಿದೆ.

Leave A Reply

Your email address will not be published.