ಸುಳ್ಯ ಪದವು : ಆಕಸ್ಮಿಕವಾಗಿ ಕೆರೆಗೆ ಬಿದ್ದು ವಿದ್ಯಾರ್ಥಿ ಮೃತ್ಯು

ಪುತ್ತೂರು: ಪುತ್ತೂರು ಸರಕಾರಿ ಕಾಲೇಜಿನ ವಿದ್ಯಾರ್ಥಿಯೊಬ್ಬರು ಸುಳ್ಯಪದವು ಮನೆಯ ಸಮೀಪದ ತೋಟದ ಬಾವಿಗೆ ಆಕಸ್ಮಿಕವಾಗಿ ಬಿದ್ದು ಮೃತಪಟ್ಟ ಘಟನೆ ಎ.22ರಂದು ತಡ ರಾತ್ರಿ ಬೆಳಕಿಗೆ ಬಂದಿದೆ.

 

ಸುಳ್ಯಪದವು ನಿವಾಸಿ ಪುತ್ತೂರು ಸರಕಾರಿ ಕಾಲೇಜಿನ ವಿದ್ಯಾರ್ಥಿ ಧನುಷ್ ಮೃತಪಟ್ಟವರು. ಅವರು ರಾತ್ರಿ ಮನೆಯ ತೋಟಕ್ಕೆ ಹೋದ ಸಂದರ್ಭ ತೋಟದ ಬಾವಿಗೆ ಅಕಸ್ಮಿಕವಾಗಿ ಬಿದ್ದಿದ್ದಾರೆ. ಧನುಷ್ ಅವರು ಹಿಂದೂ ಜಾಗರಣ ವೇದಿಕೆಯ ಸಕ್ರಿಯ ಕಾರ್ಯಕರ್ತರಾಗಿದ್ದರು. ಕೆಲ ದಿನಗಳ ಹಿಂದಷ್ಟೇ ನಡೆದ ಹಿಂದೂ ಜಾಗರಣ ವೇದಿಕೆ ಸುಳ್ಯಪದವು ಘಟಕದಲ್ಲಿ ಪದಾಧಿಕಾರಿಯಾಗಿ ಆಯ್ಕೆಯಾಗಿದ್ದರು. ಮೃತರು ತಂದೆ ತಿಮ್ಮಪ್ಪ ಗೌಡ, ತಾಯಿ ಯಮುನಾ, ಸಹೋದರ ಬಂಧು ಮಿತ್ರರನ್ನು ಅಗಲಿದ್ದಾರೆ.

Leave A Reply

Your email address will not be published.