ಇದು ಆರ್ಮುಗಂ ದ್ವೇಷ ಕಣೋ !!!ಮಹಿಳಾ ಸಬ್ ಇನ್ಸ್ ಪೆಕ್ಟರ್ ಮೇಲೆ ಚಾಕುವಿನಿಂದ ಕುತ್ತಿಗೆಗೆ ಇರಿತ | ದ್ವೇಷದ ಕಾರಣವೇನು?

Share the Article

ಹಳೆ ದ್ವೇಷದ ಕಾರಣ ಮಹಿಳಾ ಸಬ್‌ಇನ್ಸ್‌ಪೆಕ್ಟರ್ ಮೇಲೆ ವ್ಯಕ್ತಿಯೋರ್ವ ಚೂರಿ ಇರಿದ ಘಟನೆಯೊಂದು ನಡೆದಿದೆ. ಈ ಘಟನೆ ತಮಿಳುನಾಡಿನ ತಿರುನೆಲ್ವೇಲಿ ಜಿಲ್ಲೆಯ ಪಜವೂರಿನಲ್ಲಿ ನಡೆದಿದೆ. ಈ ಆಘಾತಕಾರಿ ಘಟನೆಯಲ್ಲಿ ಮಹಿಳಾ ಸಬ್‌ಇನ್ಸ್‌ಪೆಕ್ಟರ್ ಗಾಯಗೊಂಡಿದ್ದಾರೆ.

ಪಜಗೂರು ಗ್ರಾಮದಲ್ಲಿ ಧಾರ್ಮಿಕ ಉತ್ಸವ
ನಡೆಯುತ್ತಿದ್ದ ಸಂದರ್ಭದಲ್ಲಿ ಮಹಿಳಾ ಸಬ್‌ಇನ್ಸ್‌ಪೆಕ್ಟರ್ ಭದ್ರತಾ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು. ಈ ವೇಳೆ
ವ್ಯಕ್ತಿಯೋರ್ವ ಬಂದು ಏಕಾಏಕಿ ಮಹಿಳೆಗೆ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ಗಾಯಗೊಂಡ ಮಹಿಳಾ ಪೊಲೀಸ್ ಇನ್ಸ್ ಪೆಕ್ಟರ್‌ನನ್ನು ಮಾರ್ಗರೇಟ್ ಥೆರೇಸಾ ಎಂದು ಗುರುತಿಸಲಾಗಿದೆ.

ಮಾರ್ಗರೇಟ್ ಥೆರೇಸಾ ಅವರ ಕುತ್ತಿಗೆಯ ಭಾಗಕ್ಕೆ ಆರೋಪಿ ಆರುಮುಗಂ ಚಾಕುವಿನಿಂದ ಇರಿದಿದ್ದು, ತಕ್ಷಣ ತೀವ್ರವಾಗಿ ಗಾಯಗೊಂಡು ಅವರು ನೆಲಕ್ಕೆ ಬಿದ್ದಿದ್ದರು. ಕೂಡಲೇ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುವ ಪೊಲೀಸರು ಆತನನ್ನು ವಿಚಾರಣೆಗೊಳಪಡಿಸಿದ್ದಾರೆ. ಹಳೇ ದ್ವೇಷದ ಕಾರಣ ಈ ಕೃತ್ಯವೆಸಗಿರುವುದಾಗಿ ಆತ ತಪ್ಪೊ ಪ್ಪಿಕೊಂಡಿದ್ದಾನೆ.

Leave A Reply