ಬಾಹ್ಯಾಕಾಶದಲ್ಲಿ ಸಂಭವಿಸಲಿದೆ ಅಪರೂಪದ ದೃಶ್ಯ!!!
ಬಾಹ್ಯಾಕಾಶ ಎನ್ನುವುದು ಆಶ್ಚರ್ಯದ ಗಣಿ ಇಲ್ಲಿ ಅಪರೂಪದ ವಿಸ್ಮಯಗಳು ನಡೆಯುತ್ತಿರುತ್ತದೆ. ಈಗ ಮತ್ತೊಂದು ಅದ್ಭುತ ಜರುಗಲಿದೆ. ನಾಲ್ಕು ಗ್ರಹಗಳು ಒಂದೇ ಸಾಲಿನಲ್ಲಿ ಬಂದು ನಿಲ್ಲುವ ಅಪರೂಪದ ದೃಶ್ಯವೊಂದು ಬಾಹ್ಯಾಕಾಶದಲ್ಲಿ ಸಂಭವಿಸಿದೆ. ಈ ತಿಂಗಳ ಮುಂಜಾನೆಯ ಆಕಾಶ, ಖಗೋಳಾಸಕ್ತರಿಗೆ ಅಕ್ಷಯಪಾತ್ರೆ ಇದ್ದಂತೆ.
ಶುಕ್ರ, ಮಂಗಳ, ಗುರು ಮತ್ತು ಶನಿ ಗ್ರಹಗಳು ಒಂದೇ ಸಾಲಿನಲ್ಲಿ ನಿಂತಿವೆ. ಈ ಸುಂದರ ದೃಶ್ಯ ಬರಿಗಣ್ಣಿಗೆ ಕಾಣಲಿದೆ ಅಂತ ಲೈವ್ ಸೈನ್ಸ್ ತಿಳಿಸಿದೆ. ಈ ಆಕಾಶಕಾಯಗಳ ಸುಂದರ ದೃಶ್ಯ ಏಪ್ರಿಲ್ 17 ರಿಂದ ಆರಂಭವಾಗಿದ್ದು, ಜುಲೈವರೆಗೂ ಇದೇ ರೀತಿ ಇರಲಿವೆ ಎಂಬ ವರದಿಯಿದೆ. ಗ್ರಹಗಳು ತಮ್ಮದೇ ಆದ ವೇಗದಲ್ಲಿ ಸೂರ್ಯನ ಸುತ್ತ ಚಲಿಸುವುದರಿಂದ ಒಂದೇ ಸಾಲಿನಲ್ಲಿ ಕಾಣಿಸಿಕೊಳ್ಳುತ್ತವೆ.
ಈ ಸುಂದರ ಸಾಲನ್ನು ಚಂದ್ರ ಏಪ್ರಿಲ್ ಅಂತಿಮ ವಾರದಲ್ಲಿ 23 ರಿಂದ 29 ರವರೆಗೆ ಸೇರಲಿದ್ದಾನೆ. ಹಾಗೂ ಬುಧ ಗ್ರಹ ಜೂನ್ ತಿಂಗಳಲ್ಲಿ ಸೇರಲಿದ್ದಾನೆ.