ಮಂಗಳೂರು : ಪರೀಕ್ಷೆಗೆ ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿನಿಯರು ; ಪರೀಕ್ಷಾ ಗೇಟ್ ಬಳಿಯೇ ತಡೆದ ಪೊಲೀಸರು!!!
ಮಂಗಳೂರು : ಹಿಜಾಬ್ ವಿವಾದ ತೀರ್ಪಿನ ಬಳಿಕವೂ ಅಲ್ಲಲ್ಲಿ ಚರ್ಚೆಗಳು ಭುಗಿಲೆದ್ದಿದೆ. ಆದರೂ ಸರಕಾರ ಪಿಯುಸಿ ಪರೀಕ್ಷೆಯ ವಿಷಯದಲ್ಲಿ ಸನವಸ್ತ್ರದ ಬಗ್ಗೆ ಕ್ರಮ ತೆಗೆದುಗೊಂಡಿದೆ.
ಸದ್ಯ ದ್ವಿತೀಯ ಪಿಯುಸಿ ಪರೀಕ್ಷೆ ನಡೆಯುತ್ತಿದ್ದು, ಮಂಗಳೂರಿನ ಸರಕಾರಿ ಕಾಲೇಜ್ ವೊಂದಕ್ಕೆ ಮೂವರು ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿಕೊಂಡು ಆಗಮಿಸಿದ್ದಾರೆ.
ಮಂಗಳೂರಿನ ರಥಬೀದಿಯ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಘಟನೆ ನಡೆದಿದ್ದು, ಕಾಲೇಜ್ ಗೇಟ್ ಆವರಣದಲ್ಲಿ ಭದ್ರತೆಗೆ ನಿಯೋಜಿಸಲ್ಪಟ್ಟ ಪೊಲೀಸರು ಅವರನ್ನು ಗೇಟ್ ಬಳಿ ತಡೆದು, ಕಾಲೇಜ್ ಅವರಣ ಪ್ರವೇಶಿಸದಂತೆ ನೋಡಿಕೊಂಡಿದ್ದಾರೆ. ಬಳಿಕ ಪೊಲೀಸರು ಹಿಜಾಬ್ ತೆಗೆದು ಬಂದರೇ ಕಾಲೇಜ್ ಪ್ರವೇಶಿಸಲು ಅವಕಾಶ ನೀಡುವುದಾಗಿ ತಿಳಿಸಿದ್ದಾರೆ.
ಪೊಲೀಸರ ಸೂಚನೆಯಂತೆ ಹಿಜಾಬ್ ಧಾರಿಣಿ
ವಿದ್ಯಾರ್ಥಿನಿಯರು ಹಿಜಾಬ್ ತೆಗೆದು ಬರಲು ಒಪ್ಪಿಕೊಂಡಿದ್ದಾರೆ. ಬಳಿಕ ಮೂವರು ವಿದ್ಯಾರ್ಥಿನಿಯರು ಹಿಜಾಬ್ ತೆಗೆದಿಟ್ಟು ಬಂದಿದ್ದು ಅವರನ್ನು ಪರೀಕ್ಷಾ ಕೇಂದ್ರದ ಒಳಗೆ ಹೋಗಲು ಪೊಲೀಸರು ಅವಕಾಶ ಕಲ್ಪಿಸಿದ್ದಾರೆ. ಹೀಗಾಗಿ ಪೊಲೀಸರ ಮಧ್ಯಪ್ರವೇಶದಿಂದ ಕೂಡಲೇ ವಿವಾದ ತಣ್ಣಗಾಗಿದೆ.