ರಾಜ್ಯದ 14 ಮಸೀದಿಗಳ ಮೇಲೆ ದಾಖಲಾಯ್ತು ಎಫ್ಐಆರ್ !!

ಕರ್ನಾಟಕ ರಾಜ್ಯಾದ್ಯಂತ ಧರ್ಮ ದಂಗಲ್ ಮುಂದುವರೆಯುತ್ತಲೇ ಇದೆ. ಆರೋಪ, ಪ್ರತ್ಯಾರೋಪಗಳ ನಡುವೆಯೇ ಶಬ್ದ ಮಾಲಿನ್ಯ ಮಾಡುತ್ತಿದ್ದ ಮಸೀದಿಗಳು ಹಾಗೂ ಬಾರ್ ರೆಸ್ಟೊರೆಂಟ್‍ಗಳ ಮೇಲೆ ಪೊಲೀಸರು ಎಫ್‍ಐಆರ್ ದಾಖಲಿಸಿದ್ದಾರೆ.

ಇತ್ತೀಚೆಗಷ್ಟೇ ಮಸ್ಲಿಮರು ಮಸೀದಿಗಳಲ್ಲಿ ಆಜಾನ್ ಕೂಗ ಬಾರದು. ಆಜಾನ್‍ಯಿಂದ ಶಬ್ದ ಮಾಲಿನ್ಯವಾಗುತ್ತಿದ್ದು, ತೊಂದರೆಯಾಗುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದರು. ಹೀಗಾಗಿ ರಾತ್ರಿ 10 ರಿಂದ ಬೆಳಗ್ಗೆ 6 ಗಂಟೆವರೆಗೆ ಧ್ವನಿವರ್ಧಕ ಬಳಸಬಾರದು. ಪ್ರತಿದಿನ ಮುಂಜಾನೆ ಮಸೀದಿಗಳಲ್ಲಿ ಮೈಕ್ ಹಾಕಿ ಆಜಾನ್ ಕೂಗುವುದು ಸರಿಯಲ್ಲ. ಅಲ್ಲದೇ ಕಾನೂನನ್ನು ಗೌರವಿಸದೆ ಆಜಾನ್ ಕೂಗಿದರೆ ಮುಂದಿನ ದಿನಗಳಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಸುಪ್ರೀಂಕೋರ್ಟ್ ಆದೇಶ ಹೊರಡಿಸಿತ್ತು. ಹೀಗಾಗಿದ್ದರೂ ಸುಪ್ರೀಂ ಕೋರ್ಟ್ ಆದೇಶವನ್ನು ಉಲ್ಲಂಘನೆ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಈ ಧರ್ಮ ದಂಗಲ್ ಪ್ರಾರಂಭವಾದ ಮೇಲೆ ಮತ್ತಷ್ಟು ಎಚ್ಚೆತ್ತುಕೊಂಡ ಬೆಂಗಳೂರು ಪೊಲೀಸರು ಮಂದಿರ, ಮಸೀದಿಗಳಿಗೆ ನೋಟಿಸ್ ನೀಡಿದರು. ಆದರೆ ನೋಟಿಸ್ ನೀಡಿಯೂ ನಿಯಮ ಉಲ್ಲಂಘನೆ ಮಾಡಿದವರ ವಿರುದ್ಧ ಇದೀಗ ಪೊಲೀಸರು ಎಫ್‍ಐಆರ್ ಮಾಡಿದ್ದಾರೆ. ಅದರಂತೆ 14 ಮಸೀದಿಗಳ ಮೇಲೆ ಎಫ್‍ಐಆರ್ ಮಾಡಿದ್ದು, 4 ಪಬ್ ಅಂಡ್ ರೆಸ್ಟೋರೆಂಟ್‍ಗಳ ಮೇಲೆ ಕೂಡ ಎಫ್‍ಐಆರ್ ದಾಖಲಿಸಿದ್ದಾರೆ. ಅಷ್ಟೇ ಅಲ್ಲದೇ ಒಂದಷ್ಟು ಪ್ರದೇಶದಲ್ಲಿ ಕಾನೂನು ಕ್ರಮ ಕೂಡ ಕೈಗೊಂಡಿದ್ದಾರೆ.

Leave A Reply

Your email address will not be published.