ರೇಷ್ಮೆ ಸೀರೆಯಲ್ಲಿ 13 ಭಾಷೆಗಳಲ್ಲಿ ‘ಜೈ ಶ್ರೀರಾಮ್’ ಎಂದು 32200 ಬಾರಿ ಬರೆದ ಕೈಮಗ್ಗ ವ್ಯಾಪಾರಿ
ಯಾವುದೇ ಒಂದು ಕೆಲಸವನ್ನು ಶ್ರದ್ಧೆ, ಭಕ್ತಿಯಿಂದ ಮಾಡಿದರೆ ಮಾತ್ರ ಅದು ಯಶಸ್ಸು ಕಾಣಲು ಸಾಧ್ಯ. ಅಂತೆಯೇ ಇಲ್ಲೊಬ್ಬ ಶ್ರೀರಾಮನ ಭಕ್ತ ತನ್ನ ಅಭಿಮಾನವನ್ನು,ರೇಷ್ಮೆ ಸೀರೆಯಲ್ಲಿ 13 ಭಾಷೆಗಳಲ್ಲಿ ‘ಜೈ ಶ್ರೀ ರಾಮ್’ ಎಂದು ಬರೆಯುವ ಮೂಲಕ ಪ್ರದರ್ಶಿಸಿದ್ದು,ಇದೀಗ ಇದರ ಚಿತ್ರಗಳು ವೈರಲ್ ಆಗಿದೆ.
ವರದಿ ಪ್ರಕಾರ, ರೇಷ್ಮೆ ಬಟ್ಟೆಯು 60 ಮೀಟರ್ ಉದ್ದ, 44 ಇಂಚು ಅಗಲವಿದ್ದು,ಮತ್ತು ಜೈ ಶ್ರೀ ರಾಮ್ ಎಂಬ ಘೋಷಣೆಯನ್ನು 13 ಭಾರತೀಯ ಭಾಷೆಗಳಲ್ಲಿ 32,200 ಬಾರಿ ಆಂಧ್ರಪ್ರದೇಶದ ಧರ್ಮಾವರಂನ ವ್ಯಕ್ತಿಯೊಬ್ಬರು ಬರೆದಿದ್ದಾರೆ.
ನೇಕಾರನನ್ನು ಶ್ರೀ ಸತ್ಯಸಾಯಿ ಜಿಲ್ಲೆಯ ಧರ್ಮಾವರಂನ ಕೈಮಗ್ಗ ನೇಕಾರ 40 ವರ್ಷದ ಜುಜಾರು ನಾಗರಾಜು ಎಂದು ಗುರುತಿಸಲಾಗಿದೆ. ಅವರು ಒಂದು ರೀತಿಯ ವಿಶೇಷ ರೇಷ್ಮೆ ಸೀರೆಯನ್ನು ರಾಮ ಕೋಟಿ ವಸ್ತ್ರಂ ಎಂದು ಹೆಸರಿಸಿದ್ದಾರೆ. ವಿವಿಧ ಭಾಷೆಗಳಲ್ಲಿನ ಘೋಷಣೆಗಳಷ್ಟೇ ಅಲ್ಲ, ಸೀರೆಯು ರಾಮಾಯಣದ ಸುಂದರಕಾಂಡದಿಂದ ಭಗವಾನ್ ರಾಮನ 168 ವಿಭಿನ್ನ ಚಿತ್ರಾತ್ಮಕ ಚಿತ್ರಣಗಳನ್ನು ಸಹ ಹೊಂದಿದೆ.
ಈ ವಿಶಿಷ್ಟವಾದ ಸೀರೆಯನ್ನು ತಯಾರಿಸಲು ಸಾಕಷ್ಟು ಶ್ರಮ ಮತ್ತು ಹಣ ವ್ಯಯಿಸಲಾಗಿದೆ. ನಾಗರಾಜು ಅವರು 16 ಕೆ.ಜಿ ತೂಕದ ರೇಷ್ಮೆ ಬಟ್ಟೆಯನ್ನು ವಿನ್ಯಾಸಗೊಳಿಸಲು ಮತ್ತು ನೇಯ್ಗೆ ಮಾಡಲು 4 ತಿಂಗಳುಗಳನ್ನು ಕಳೆದಿದ್ದಾರೆ.ಅವರೊಂದಿಗೆ ಇತರೆ ಮೂವರು ಉಡುಪನ್ನು ರಚಿಸಲು ಪ್ರತಿದಿನ ಕೆಲಸ ಮಾಡಿದ್ದಾರೆ. ಇದೀಗ ಈ ಸೀರೆಯನ್ನು ಅಯೋಧ್ಯೆ ರಾಮ ಮಂದಿರಕ್ಕೆ ಉಡುಗೊರೆಯಾಗಿ ನೀಡಲು ನಿರ್ಧರಿಸಿದ್ದಾರೆ.