ದಲಿತ ವ್ಯಕ್ತಿಯ ಮೇಲೆ ಅಮಾನವೀಯ ವರ್ತನೆ ; ಉಗುಳಿನಲ್ಲಿ ದಲಿತ ವ್ಯಕ್ತಿಯ ಮೂಗು ಉಜ್ಜಿಸಿದ ಗ್ರಾಮದ ಮುಖ್ಯಸ್ಥ !!! ಠಾಣೆಯಲ್ಲಿ ಪ್ರಕರಣ ದಾಖಲು!
ದಲಿತರ ಮೇಲಿನ ದೌರ್ಜನ್ಯ ಕೆಲವೊಂದು ಕಡೆಯಲ್ಲಿ ನಿಲ್ಲುವಂತೆ ಕಾಣುತ್ತಿಲ್ಲ. ಒಂದಲ್ಲ ಒಂದು ರೀತಿಯಲ್ಲಿ ಜಾತಿನಿಂದನೆ ನಡೆಯುತ್ತಲೇ ಇದೆ. ಸರಕಾರ ಈ ಬಗ್ಗೆ ಎಷ್ಟೇ ಕಠಿಣ ಕಾನೂನು ತಂದರೂ ಜನ ಇದರ ಗೊಡವೆನೇ ಇಲ್ಲದಂತೆ ಮತ್ತೆ ಮತ್ತೆ ಅದೇ ಅಮಾನವೀಯ ಕೃತ್ಯಗಳನ್ನು ಮುಂದುವರಿಸುತ್ತಾರೆ.
ದೇವಾಲಯದಲ್ಲಿ ದೇವರ ವಿಗ್ರಹ ಪ್ರತಿಷ್ಠಾಪಿಸಲು ಹೆಚ್ಚು ಹಣ ದೇಣಿಗೆ ನೀಡಲು ನಿರಾಕರಿಸಿದಕ್ಕಾಗಿ ದಲಿತ ವ್ಯಕ್ತಿಯೋರ್ವನನ್ನು ಆತನ ಉಗುಳಿನಲ್ಲೇ ಮೂಗು ಉಜ್ಜುವಂತೆ ಮಾಡಿದ ಘಟನೆ ಒಡಿಶಾದ ಕೇಂದ್ರಪಾರ ಜಿಲ್ಲೆಯಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದೇವಾಲಯಕ್ಕೆ ದೇಣಿಗೆ ಸಂಗ್ರಹಿಸಲು ಟಿಖಿರಿ ಗ್ರಾಮದ ಮುಖ್ಯಸ್ಥ ಚಮೇಲಿ ಓಝಾ ದಲಿತ ವ್ಯಕ್ತಿ ಗುರುಚರಣ್ ಮಲ್ಲಿಕ್ ಎಂಬವನ ಮನೆಗೆ ಹೋಗಿದ್ದಾನೆ. ಆಗ ಈ ಘಟನೆ ನಡೆದಿದೆ. ಒಂದು ವಾರಗಳ ಬಳಿಕ ಈ ಘಟನೆ ಬೆಳಕಿಗೆ ಬಂದಿದೆ.
ತಾನು ಈಗಾಗಲೇ ದೇಣಿಗೆ ನೀಡಿದ್ದೆ. ಆದರೂ ಗ್ರಾಮ ಮುಖ್ಯಸ್ಥ ತನಗೆ ಹಾಗೂ ತನ್ನ ಪತ್ನಿ ರೇಖಾಳಿಗೆ ನಿಂದಿಸಿದ್ದಾನೆ ಎಂದು ಮಲ್ಲಿಕ್ ಪೊಲೀಸರಿಗೆ ತಿಳಿಸಿದ್ದಾನೆ.
ಆರಂಭದಲ್ಲಿ ಗ್ರಾಮ ಮುಖ್ಯಸ್ಥ ನಮ್ಮ ಕುಟುಂಬವನ್ನು ಬಹಿಷ್ಕರಿಸಲು ನಿರ್ಧರಿಸಿದ್ದರು. ಆದರೆ, ಅನಂತರ ಇತರ ಗ್ರಾಮಸ್ಥರೊಂದಿಗೆ ಸೇರಿ ಅವರು ಬಲವಂತವಾಗಿ ಮಲ್ಲಿಕ್ ತನ್ನದೇ ಉಗುಳಿನಲ್ಲಿ ಮೂಗು ಉಜ್ಜುವಂತೆ ಮಾಡಿದರು ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ರೇಖಾ ಆರೋಪಿಸಿದ್ದಾರೆ.