ರಾಜ್ಯದಲ್ಲೂ ಬುಲ್ಡೋಜರ್ ಕಾರ್ಯಾಚರಣೆ ಅವಶ್ಯಕ
ಬೆಂಗಳೂರು : ಗಲಭೆ ಮಾಡುವವರನ್ನು ಬಂಧಿಸಿ ಜೈಲಿಗೆ ಕಳುಹಿಸಿದರೆ ಜಾಮೀನು ತಗೊಂಡು ಬಂದು ಮತ್ತೆ ಅದೇ ಕೆಲಸ ಮಾಡ್ತಾರೆ. ಹುಬ್ಬಳ್ಳಿಯಲ್ಲಿ ಅರೆಸ್ಟ್ ಆದವರೆಲ್ಲಾ ರೌಡಿ ಶೀಟರ್ ಗಳು. ಆಚೆ ಬಂದು ಮತ್ತೆ ಒಂದು ವಾರಕ್ಕೆ ಕಥೆ ಶುರು ಮಾಡಿದ್ದಾರೆ. ಈ ತರದ ಮನಸ್ಥಿತಿ ಇರುವವರಿಗೆ ಉತ್ತರ ಪ್ರದೇಶ ಮಾದರಿಯ ಕಾನೂನು ಬರಬೇಕು.ಬುಲ್ಡೋಜರ್ ಕಾರ್ಯಾಚರಣೆ ಅವಶ್ಯಕತೆ ಇದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು.
ಅವರು ದೇವನಹಳ್ಳಿಯಲ್ಲಿ ನಡೆದ ಬಿಜೆಪಿ ಸಮಾವೇಶದ ವೇಳೆ ಪತ್ರಕರ್ತರೊಂದಿಗೆ ಸಚಿವ ಆರ್.ಅಶೋಕ್ ಮಾತನಾಡಿದರು.
ಹುಬ್ಬಳ್ಳಿ ಗಲಭೆಯಲ್ಲಿ ಪಾಲ್ಗೊಂಡವರು ರೌಡಿ ಶೀಟರ್ಗಳು,ಜೈಲಿಗೆ ಹೋಗಿ ಬಂದವರು.ಆದರೂ ಅವರು ಬುದ್ದಿ ಕಲಿಯಲಿಲ್ಲ. ಇಂಥವರಿಗೆ ಸರಿಯಾಗಿ ಬುದ್ದಿ ಕಲಿಸಬೇಕು. ಮನೆ ಮಠ ಇಲ್ಲದ ಹಾಗೆ ಮಾಡಬೇಕು. ಆಗ ಸರಿಯಾದ ದಾರಿಗೆ ಬರ್ತಾರೆ ಎಂದು ಸಚಿವ ಆರ್ ಅಶೋಕ್ ಹೇಳಿದರು.
ಈ ವೇಳೆ ಜೈಲಿಗೆ ಹೋಗಿ ಬಂದವರು ಮತ್ತೆ ಅದೇ ಕೆಲಸ ಮಾಡುತ್ತಿದ್ದಾರೆ. ಈ ತರದ ಮನಸ್ಥಿತಿ ಇರುವವರಿಗೆ ಉತ್ತರ ಪ್ರದೇಶ ಮಾದರಿಯ ಕಾನೂನು ಬರಬೇಕು. ಎಲ್ಲರೂ ಕೆಟ್ಟವರಲ್ಲ. ಕೆಲ ಪುಂಡ ಪೋಕರಿಗಳನ್ನು ಮಟ್ಟ ಹಾಕಲು ಇಂಥ ಬುಲ್ಡೋಜರ್ ಕಾರ್ಯಾಚರಣೆ ಅವಶ್ಯಕ ಎಂದು ಸಚಿವ ಅಶೋಕ್ ತಿಳಿಸಿದರು.