ಭಾರೀ ಮಣ್ಣಿನ ಕುಸಿತದಿಂದ ರಕ್ಷಣೆ ಪಡೆಯಲು ಬರೋಬ್ಬರಿ 20 ಗಂಟೆಗಳ ಕಾಲ ರೆಫ್ರಿಜರೇಟರ್ ಒಳಗಿದ್ದ 11 ರ ಬಾಲಕ ; ಬದುಕುಳಿದ ಬಗೆಯೇ ರೋಚಕ!!!
ಆಯುಷ್ಯ ಒಂದಿದ್ದರೆ ಯಾವುದೇ ಕಠಿಣ ಪರಿಸ್ಥಿತಿಯಿಂದಲೂ ಮಿಂದೇಳಲು ಸಾಧ್ಯ ಎಂಬ ಮಾತಿಗೆ ನಿದರ್ಶನದಂತಿದೆ ಈ ಘಟನೆ.ಉಷ್ಣವಲಯದ ಚಂಡಮಾರುತ ಮೆಗಿಯಿಂದ ಈ ಪ್ರದೇಶದಲ್ಲಿ ಮಣ್ಣಿನ ಕುಸಿತ ಉಂಟಾಗಿದ್ದು, ಮನೆ ಸಂಪೂರ್ಣ ನಾಶವಾಗಿದ್ದರೂ ಈ ಬಾಲಕ ಮಾತ್ರ ಪವಾಡಸದೃಶವಾಗಿ ಪಾರಾಗಿದ್ದಾನೆ.
ಹೌದು ಈ ಘಟನೆಯನ್ನು ನಂಬಲು ಅಸಾಧ್ಯವಾದರೂ ಇದು ಸತ್ಯ ಸಂಗತಿ.ಅಷ್ಟಕ್ಕೂ ಆ ಮಣ್ಣಿನ ಕುಸಿತದಿಂದ ಈತ ತನ್ನನ್ನು ತಾನು ರಕ್ಷಿಸಿದ್ದು ಹೇಗೆ ಗೊತ್ತಾ!?.ಈ 11ವರ್ಷದ ಬಾಲಕ ಪ್ರಾಣವನ್ನು ಕಾಪಾಡಿಕೊಳ್ಳಲು ಫ್ರಿಡ್ಜ್ ನಲ್ಲಿ ಆಶ್ರಯ ಪಡೆದು ಪವಾಡಸದೃಶನಾಗಿ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಫಿಲಿಪೈನ್ಸ್‌ನಲ್ಲಿ ನಡೆದಿದೆ.
ಈ ವಿಸ್ಮಯದಲ್ಲಿ ಬದುಕುಳಿದ ಬಾಲಕ ನನ್ನು ಸಿಜೆ ಜಾಸ್ಮೆ ಎಂದು ಗುರುತಿಸಲಾಗಿದೆ.
ಫಿಲಿಪೈನ್ಸ್ ನ ಬೇಬೇ ಸಿಟಿಯಲ್ಲಿರುವ ಜಾಸ್ಮೆ ಎಂಬುವವರ ಮನೆ ಸಂಪೂರ್ಣವಾಗಿ ನಾಶವಾಗಿದ್ದು,ಅವರ ತಾಯಿ ಮತ್ತು ಕಿರಿಯ ಸಹೋದರರು ಇನ್ನೂ ಕಾಣೆಯಾಗಿದ್ದಾರೆ.ಆದರೆ ಮಣ್ಣಿನ ಕುಸಿತದ ಸಮಯದಲ್ಲಿ ಬಾಲಕ ಜಾಸ್ಮೆ ಮಾತ್ರ ರೆಫ್ರಿಜರೇಟರ್‌ನೊಳಗೆ ಸೇರಿಕೊಂಡಿದ್ದಾನೆ. ಬರೋಬ್ಬರಿ 20 ಗಂಟೆಗಳ ನಂತರ ಆತನನ್ನು ಫ್ರಿಡ್ಜ್‌ನಿಂದ ರಕ್ಷಿಸಲಾಗಿದೆ. ಆದರೆ ಪವಾಡ ಎಂಬಂತೆ ಬಾಲಕನಿಗೆ ಸ್ವಲ್ಪ ಗಾಯಗಳಾಗಿದ್ದು,ಫಿಲಿಪೈನ್ಸ್ ಕೋಸ್ಟ್ ಗಾರ್ಡ್ ಮತ್ತು ರಕ್ಷಣಾ ತಂಡವು ಈತನನ್ನು ಜೀವಂತವಾಗಿ ಪತ್ತೆಹಚ್ಚಿದೆ.
ಕೋಸ್ಟ್ ಗಾರ್ಡ್ ಫೇಸ್‌ಬುಕ್‌ನಲ್ಲಿ ಹಂಚಿಕೊಂಡ ಪೋಸ್ಟ್‌ನಲ್ಲಿ ರಕ್ಷಣಾ ಸಿಬ್ಬಂದಿ ಮಣ್ಣಿನಿಂದ ರೆಫ್ರಿಜರೇಟರ್ ಅನ್ನು ಹೊರತೆಗೆಯುತ್ತಿರುವುದನ್ನು ತೋರಿಸಲಾಗಿದೆ. ಮತ್ತೊಂದು ಪೋಸ್ಟ್‌ನಲ್ಲಿ, ರಕ್ಷಣೆ ಮಾಡುತ್ತಿರುವ ಫೋಟೋಗಳನ್ನು ಹಂಚಿಕೊಳ್ಳಲಾಗಿದೆ.ಬಾಲಕನ ಜೀವ ಉಳಿಸಿದ್ದಕ್ಕೆ ರಕ್ಷಣಾ ಸಿಬ್ಬಂದಿಗಳಿಗೆ ನೆಟ್ಟಿಗರು ಕೃತಜ್ಞತೆಗಳನ್ನು ತಿಳಿಸಿದ್ದಾರೆ.