ಸಿದ್ದರಾಮಯ್ಯ ರಾಜಕೀಯಕ್ಕೆ ಬರಲು ಪ್ರೇರಣೆ ಯಾರು ಗೊತ್ತೇ ?

ರಾಜಕೀಯ ಧುರೀಣ , ರಾಜಕೀಯ ಅಖಾಡದಲ್ಲಿ ಪಳಗಿದ ಸಿದ್ದರಾಮಯ್ಯ ಅವರು ರಾಜಕೀಯ ಚದುರಂಗದಲ್ಲಿ ಎತ್ತಿದ ಕೈ. ರಾಜಕೀಯದಲ್ಲಿ ಅಗ್ರಗಣ್ಯ ಸ್ಥಾನ ಮಾನ ಪಡೆದ ಇವರು‌ ರಾಜಕೀಯಕ್ಕೆ ಬರಲು ಪ್ರೇರಣೆ ಯಾರು ಗೊತ್ತೆ ?‌ ಇಲ್ಲಿದೆ ನೋಡಿ

 

ಪ್ರೊ. ನಂಜುಂಡಸ್ವಾಮಿ ಅವರ ಪ್ರೇರಣೆಯಿಂದಲೇ ನಾನು ರಾಜಕೀಯಕ್ಕೆ ಬಂದೆ. ಎಂದು ಪ್ರೊ. ಎಂ.ಡಿ. ನಂಜುಂಡಸ್ವಾಮಿ ಅವರ ಚಿಂತನೆಯ ‘ಬಾರುಕೋಲು’ ಪುಸ್ತಕ ಬಿಡುಗಡೆಗೊಳಿಸಿ ಸಿದ್ಧರಾಮಯ್ಯ ಮಾತನಾಡಿದರು.

ಕಾಲೇಜು ದಿನಗಳಲ್ಲಿ ನಮ್ಮಲ್ಲಿ ರಾಜಕೀಯ ಹಾಗೂ ಸಮಾಜವಾದಿ ಚಿಂತನೆಗಳನ್ನು ನಂಜುಂಡಸ್ವಾಮಿ ಅವರು ಬಿತ್ತಿದ್ದರು. ಅಲ್ಲಿಯವರೆಗೂ ನನಗೆ ರಾಜಕೀಯ ಗಂಧ ಗಾಳಿಯೂ ಇರಲಿಲ್ಲ.‌

ಅನ್ಯಾಯವಾದವರ ಪರ ನಿಂತು ಸರ್ಕಾರ ಹಾಗೂ ಅಧಿಕಾರಿಗಳಿಗೆ ಬಾರಕೋಲು ಬೀಸುತ್ತಿದ್ದ ಪ್ರೊ. ನಂಜುಂಡಸ್ವಾಮಿ ಅವರ ಪ್ರೇರಣೆಯಿಂದಲೇ ನಾನು ರಾಜಕೀಯಕ್ಕೆ ಬಂದೆ’ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

Leave A Reply

Your email address will not be published.