ಫರ್ನಿಚರ್ ಮಳಿಗೆಯಲ್ಲಿ ಸಂಭವಿಸಿದ ಬೆಂಕಿ ಆಕಸ್ಮಿಕದಲ್ಲಿ ಲಕ್ಷಾಂತರ ಮೌಲ್ಯದ ವಸ್ತುಗಳು ಸುಟ್ಟು ಕರಕಲಾದ ಘಟನೆ ಉಡುಪಿ-ಮಣಿಪಾಲ ರಸ್ತೆಯಲ್ಲಿ ನಡೆದಿದೆ.
ಮಣಿಪಾಲ ಲಕ್ಷ್ಮೀನಗರ ಬಳಿ ಇರುವ ಫರ್ನಿಚರ್ ಮಳಿಗೆಯಲ್ಲಿ ಮೊದಲು ಬೆಂಕಿ ಕಾಣಿಸಿಕೊಂಡು ಕ್ರಮೇಣ ಬೆಂಕಿ ಇಡೀ ಕಟ್ಟಡವನ್ನು ಅವರಿಸಿ ಪಕ್ಕದಲ್ಲೇ ಹೊಟೇಲ್ ಕೂಡಾ ಬೆಂಕಿಗೆ ಆಹುತಿಯಾಗಿದೆ.

ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ತಗುಲಿರುವ ಶಂಕೆ ಇದ್ದು, ಬೆಂಕಿ ನಂದಿಸಲು ಉಡುಪಿಯ ಅಗ್ನಿಶಾಮಕದಳ ಸಿಬ್ಬಂದಿಗಳು ಹರಸಾಹಸಪಟ್ಟರು. ಅಪಾರ ಪ್ರಮಾಣದಲ್ಲಿ ಫರ್ನಿಚರ್ಸ್ ಮತ್ತು ಕಚ್ಚಾ ವಸ್ತುಗಳು ಬೆಂಕಿಗೆ ಆಹುತಿಯಾಗಿದ್ದು ಸುಮಾರು 40 ಲಕ್ಷಕ್ಕೂ ಮೇಲ್ಪಟ್ಟು ನಷ್ಟ ಸಂಭವಿಸಿರಬಹುದು ಎಂದು ಅಂದಾಜಿಸಲಾಗಿದೆ.