ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ- ನಿಕ್ ದಂಪತಿಗಳ ಹೆಣ್ಣು ಮಗುವಿಗೆ ಅದ್ಧೂರಿ ನಾಮಕರಣ | ಮುದ್ದು ಕಂದನ ಹೆಸರೇನು ಗೊತ್ತಾ !??

ಬಾಲಿವುಡ್ ಸ್ಟಾರ್ ನಟಿ ಪ್ರಿಯಾಂಕಾ ಚೋಪ್ರಾ ಇತ್ತೀಚೆಗೆ ಮೊದಲ ಮಗುವನ್ನು ಬರಮಾಡಿಕೊಂಡ ಸಂತಸದ ಸುದ್ದಿಯನ್ನು ಹಂಚಿಕೊಂಡಿದ್ದರು. ಬಾಡಿಗೆ ತಾಯಿ ಮೂಲಕ ಹೆಣ್ಣು ಮಗುವನ್ನು ಪಡೆದಿರುವ ನಟಿ ಪ್ರಿಯಾಂಕ ಈಗ ಮಗುವಿಗೆ ನಾಮಕರಣ ಮಾಡಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ.

ನಟಿ ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಕೆಲ ತಿಂಗಳ ಹಿಂದೆ ಮೊದಲ ಮಗುವನ್ನು ಬರಮಾಡಿಕೊಂಡಿದ್ದರು. ಈವರೆಗೂ ತಮ್ಮ ಮಗುವಿನ ಫೋಟೋ ತೋರಿಸದೇ ಖಾಸಗಿತನ ಕಾಪಾಡಿಕೊಂಡು ಬಂದಿದ್ದಾರೆ. ಇದೀಗ ತಮ್ಮ ಮಗಳಿಗೆ “ಮಾಲ್ತಿ ಮೇರಿ ಚೋಪ್ರಾ ಜೋನಸ್” ಎಂದು ಹೆಸರಿಟ್ಟಿದ್ದಾರೆ ಎಂದು ತಿಳಿದು ಬಂದಿದೆ.


Ad Widget

Ad Widget

Ad Widget

ಹಾಲಿವುಡ್ ಸ್ಟಾರ್ ನಿಕ್ ಜೋನಸ್ ಅವರನ್ನು ಮದುವೆ ಆದ ಬಳಿಕ ನಟಿ ಪ್ರಿಯಾಂಕಾ ಅಮೆರಿಕಾದಲ್ಲೇ ನೆಲೆಸಿದ್ದಾರೆ. ಹೊರದೇಶದ ಸಂಸ್ಕೃತಿಯ ನಡುವೆ ಜೀವನ ನಡೆಸುತ್ತಿದ್ದರೂ ಕೂಡ ತಮ್ಮ ತಾಯ್ನಾಡಿನ ಮೇಲೆ ಪ್ರೀತಿ, ಗೌರವ ಹೊಂದಿದ್ದಾರೆ. ಇದೀಗ ಪ್ರಿಯಾಂಕಾ ಅವರು ತಮ್ಮ ಮುದ್ದಾದ ಮಗಳಿಗೆ ಮಾಲ್ತಿ ಎಂದು ಸಂಸ್ಕೃತ ಮೂಲದ ಹೆಸರನ್ನು ನಾಮಕರಣ ಮಾಡಿರುವುದು ವಿಶೇಷ. ಸಂಸ್ಕೃತದಲ್ಲಿ ʻಮಾಲ್ತಿʼ ಎಂದರೆ ಪರಿಮಳ ಬೀರುವ ಹೂವು ಎಂದರ್ಥ.

ಒಟ್ಟಿನಲ್ಲಿ ಸಿನಿಮಾಗಳ ಜೊತೆಗೆ ಸಂಸಾರಿಕ ಜೀವನವನ್ನು ಬ್ಯಾಲೆನ್ಸ್ ಮಾಡುತ್ತಾ ತಮ್ಮ ಚಿತ್ರಗಳ ಮೂಲಕ ಸಿನಿಪ್ರಿಯರನ್ನು ರಂಜಿಸುತ್ತಿರೋ ನಟಿಯ ಚಿತ್ರಕ್ಕಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ.

Leave a Reply

error: Content is protected !!
Scroll to Top
%d bloggers like this: