ಆಫ್ ಲೈನ್ ನಲ್ಲಿ ಯುಪಿಐ ಪೇಮೆಂಟ್ ಮಾಡುವುದು ಹೇಗೆ ಗೊತ್ತಾ ?? | ಇಂಟರ್ನೆಟ್ ಇಲ್ಲದೆಯೇ ಚಿಟಿಕೆ ಹೊಡೆಯುವುದರಲ್ಲಿ ಹಣ ವರ್ಗಾವಣೆ ಮಾಡುವ ಬಗ್ಗೆ ಇಲ್ಲಿದೆ ಮಾಹಿತಿ
ಇದು ಡಿಜಿಟಲ್ ಯುಗ. ಈಗ ಏನಿದ್ದರೂ ಡಿಜಿಟಲಿಕರಣದ ಮೇಲೆಯೇ ಜನರು ಹೆಚ್ಚು ಗಮನ ನೀಡುತ್ತಾರೆ. ಹಣಕಾಸಿನ ವಿಷಯದಲ್ಲಂತೂ UPI ಪಾವತಿಗಳ ಮೇಲೆಯೇ ಜನ ಹೆಚ್ಚು ಅವಲಂಬಿತರಾಗಿರುತ್ತಾರೆ.
ಆದರೆ ಹಲವು ಬಾರಿ UPI ಮೂಲಕ ಪಾವತಿ ಮಾಡುವ ವೇಳೆ ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ನಿಧಾನವಾದ ಇಂಟರ್ನೆಟ್ ವೇಗ ಅಥವಾ ಕಳಪೆ ನೆಟ್‌ವರ್ಕ್‌ನಿಂದಾಗಿ ಪೇಮೆಂಟ್ ವಿಫಲವಾಗಬಹುದು. ಆದರೆ ಆಫ್‌ಲೈನ್‌ನಲ್ಲಿಯೂ UPI ಪೇಮೆಂಟ್ ಮಾಡುವುದು ಸಾಧ್ಯವಾಗುತ್ತದೆ. ಬಳಕೆದಾರರು ತಮ್ಮ ಫೋನ್‌ಗಳ ಮೂಲಕ ಪಾವತಿಗಳನ್ನು ಮಾಡಬಹುದಾಗಿದ್ದರಿಂದ ಈ ಸಮಸ್ಯೆಯನ್ನು ಸುಲಭವಾಗಿ ಪರಿಹರಿಸಬಹುದು.
ಯಾವುದೇ ಸಮಸ್ಯೆಯಿಲ್ಲದೆ ಪಾವತಿ ಮಾಡಲು ಕನಿಷ್ಟ ನೆಟ್‌ವರ್ಕ್ ಕವರೇಜ್ ಇದ್ದರೂ ಸಾಕಾಗುತ್ತದೆ. ಇದಕ್ಕೆ ಮಾಡಬೇಕಾಗಿರುವ ಕೆಲಸಗಳು ಇಂತಿವೆ ನೋಡಿ.
*ನಿಮ್ಮ ಫೋನ್‌ನಲ್ಲಿ *99# USSD ಕೋಡ್ ಅನ್ನು ಡಯಲ್ ಮಾಡಬೇಕು.
*ಬಳಿಕ ನಿಮ್ಮ ಬ್ಯಾಂಕ್ ಅನ್ನು ಆಯ್ಕೆ ಮಾಡಲು ಪಾಪ್-ಅಪ್ ಬರುತ್ತದೆ. ಆಗ ಪಟ್ಟಿಯಿಂದ ಬ್ಯಾಂಕ್ ಖಾತೆಯನ್ನು ಆಯ್ಕೆ ಮಾಡಬೇಕು.
*ಈಗ, ನಿಮ್ಮ UPI ಪಿನ್ ಅನ್ನು ರಚಿಸಿ ಮತ್ತು ನಿಮ್ಮ ಡೆಬಿಟ್ ಕಾರ್ಡ್‌ನ ಕೊನೆಯ ಆರು ಅಂಕಿಗಳನ್ನು ನಮೂದಿಸಿ.
*ನಿಮ್ಮ ಡೆಬಿಟ್ ಕಾರ್ಡ್‌ನ ಮುಕ್ತಾಯ ದಿನಾಂಕವನ್ನು ನಮೂದಿಸಿ.
*ನಿಮ್ಮ ಆರು-ಅಂಕಿಯ UPI ಪಿನ್ ಅನ್ನು ಹಾಕಿ ಕಂಫರ್ಮ್ ಮಾಡಿ.
*ಈಗ ನಿಮ್ಮ UPI ಪಿನ್ ಅನ್ನು ಹೊಂದಿಸಲಾಗುವುದು.
*ಈಗ ಮತ್ತೆ *99# ಅನ್ನು ಡಯಲ್ ಮಾಡಿ.
*ನೀವು ಬಹಳಷ್ಟು ಆಯ್ಕೆಗಳಿರುವ ಮತ್ತೊಂದು ಪಟ್ಟಿಯನ್ನು ಪಡೆಯುವಿರಿ.
*ನೀವು ಹಣವನ್ನು ಕಳುಹಿಸಲು ಪ್ರಯತ್ನಿಸುತ್ತಿದ್ದರೆ 1 ನಂಬರ್ ಟೈಪ್ ಮಾಡಿ ಮತ್ತು ಸೆಂಡ್ ಮಾಡಿ.
*ಪಾವತಿ ಸ್ವೀಕರಿಸುವವರ ಸಂಖ್ಯೆಯನ್ನು ಟೈಪ್ ಮಾಡಿ ಸೆಂಡ್ ಮಾಡಿ.
*ಈಗ, ನಿಮ್ಮ UPI ಖಾತೆಯೊಂದಿಗೆ ಲಿಂಕ್ ಮಾಡಲಾದ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಮತ್ತು ಸೆಂಡ್ ಮೇಲೆ ಟ್ಯಾಪ್ ಮಾಡಿ.
*ಮೊತ್ತವನ್ನು ಹಾಕಿ ಸೆಂಡ್ ಮಾಡಿ.
*ವಹಿವಾಟನ್ನು ಪೂರ್ಣಗೊಳಿಸಲು ನಿಮ್ಮ UPI ಪಿನ್ ನಮೂದಿಸಿ. ಇಷ್ಟು ಮಾಡಿದರೆ ಸಾಕು ಇಂಟರ್ನೆಟ್ ಇಲ್ಲದೆಯೇ ನಿಮ್ಮ UPI ವಹಿವಾಟು ಪೂರ್ಣಗೊಳ್ಳುತ್ತದೆ.